MI vs SRH: ರಿಕಲ್ಟನ್ ಔಟ್ ಆದರೂ ಅಂಪೈರ್ ನೋ ಬಾಲ್ ನೀಡಿದ್ದೇಕೆ?
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ನೋ ಬಾಲ್ ಸಖತ್ ಸದ್ದು ಮಾಡಿತು. ಮೊದಲು ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಟ್ರಾವಿಸ್ ಹೆಡ್ ಔಟಾಗಿದ್ದರೂ, ಪಾಂಡ್ಯ ಕ್ರೀಸ್‌ನಿಂದ ಹೊರಗೆ ಕಾಲಿಟ್ಟು ಬೌಲಿಂಗ್ ಮಾಡಿದ್ದರಿಂದ ಅದು ನೋಬಾಲ್ ಆಗಿತ್ತು. ಹೆಡ್ ಜೀವದಾನ ಪಡೆದರೂ ದೊಡ್ಡ ಮೊತ್ತ ಕಲೆಹಾಕದೆ ಔಟಾಗಿದ್ದು ಮುಂಬೈ ಇಂಡಿಯನ್ಸ್ ತಲೆನೋವು ಕಡಿಮೆಯಾಗಿತ್ತು.
ಮುಂಬೈ ಇಂಡಿಯನ್ಸ್ ತಂಡವು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ, ಆರಂಭಿಕ ಆಟಗಾರ ರಿಯಾನ್ ರಿಕಲ್ಟನ್ ಔಟಾದರೂ ಕೀಪರ್ ಮಾಡಿದ ಎಡವಟ್ಟು ಸನ್‌ರೈಸಸ್ ಹೈದರಾಬಾದ್‌ಗೆ ಶಾಕ್ ಕೊಟ್ಟಿತ್ತು. ಜಿತೇಶ್ ಅನ್ಸಾರಿ ಎಸೆತದಲ್ಲಿ ರಿಯಾನ್ ರಿಕಲ್ಟನ್ ಹೊಡೆತವನ್ನು ಪ್ಯಾಟ್ ಕಮಿನ್ಸ್ ಕ್ಯಾಚ್ ಹಿಡಿದರು.

ಆನ್‌ಫೀಲ್ಡ್ ಅಂಪೈರ್ ಔಟ್ ಕೊಟ್ಟ ಬಳಿಕ ರಿಕಲ್ಟನ್ ಪೆವಿಲಿಯನ್ ಕಡೆ ಹೋಗುತ್ತಿದ್ದರು. ಆದರೆ ಮೂರನೇ ಅಂಪೈರ್ ನೋ ಬಾಲ್ ಪರಿಶೀಲನೆ ಮಾಡಲು ಮುಂದಾದರು. ರಿಕಲ್ಟನ್ ಚೆಂಡನ್ನು ಹೊಡೆಯುವ ಸಂದರ್ಭದಲ್ಲಿ ಸನ್‌ರೈಸರ್ಸ್ ಹೈದರಬಾದ್ ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸೆನ್ ಅವರ ಕೈ ವಿಕೆಟ್ ಮುಂದೆ ಬಂದಿದ್ದರಿಂದ ಅದನ್ನು ನೋಬಾಲ್ ಎಂದು ಘೋಷಣೆ ಮಾಡಲಾಯಿತು.
ನಿಯಮಗಳು ಹೇಳುವುದೇನು?
ಎಂಸಿಸಿ ನಿಯಮಗಳ ಪ್ರಕಾರ, ವಿಕೆಟ್ ಕೀಪರ್ ಚೆಂಡನ್ನು ಸ್ಟಂಪ್‌ಗಳಿಗೆ ಹಾದುಹೋಗುವವರೆಗೆ ಅಥವಾ ಬ್ಯಾಟರ್ ಮುಟ್ಟುವವರೆಗೆ ಗ್ಲೌಸ್ ಅನ್ನು ವಿಕೆಟ್‌ನಿಂದ ಮುಂದೆ ತರವು ಹಾಗಿಲ್ಲ. ಕೀಪರ್ ತುಂಬಾ ಬೇಗನೆ ಚಲಿಸಿದರೆ, ಅಂಪೈರ್‌ಗಳು ಅದನ್ನು ನೋ-ಬಾಲ್ ಎಂದು ಕರೆಯಬಹುದು. ರಿಯಾನ್ ರಿಕೆಲ್ಟನ್ ಅವರ ಸಂದರ್ಭದಲ್ಲಿ ಕ್ಲಾಸೆನ್ ಚೆಂಡನ್ನು ಹಿಡಿಯದೇ ಇದ್ದರೂ, ಬ್ಯಾಟ್‌ನಿಂದ ಬಾಲ್ ಹೊಡೆಯುವ ಸಂದರ್ಭದಲ್ಲಿ ಕೈಯನ್ನು ವಿಕೆಟ್ ಮುಂದೆ ತಂದಿದ್ದು ಮುಳುವಾಯಿತು.
ಕ್ಲಾಸೆನ್‌ರ ತಪ್ಪು ಅನ್ಯಾಯದ ಚಲನೆಗಾಗಿ ನಿಯಂತ್ರಿಸಲ್ಪಡುವ ನಿಯಮಗಳ ಅಡಿಯಲ್ಲಿ ಬರುತ್ತದೆ (ಕಾನೂನು 27.4), ಅಂಪೈರ್‌ಗಳು ಅದನ್ನು ಕಾನೂನುಬಾಹಿರ ಎಸೆತ ಎಂದು ಕರೆಯಲು ಮತ್ತು ಬ್ಯಾಟಿಂಗ್ ತಂಡಕ್ಕೆ ಹೆಚ್ಚುವರಿ ರನ್ ನೀಡಲು ಅವಕಾಶ ಹೊಂದಿರುತ್ತಾರೆ.
ಮುಂಬೈ ಇಂಡಿಯನ್ಸ್‌ಗೆ ಸುಲಭ ಗೆಲುವು
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದ ಸನ್‌ರೈಸರ್ಸ್ ಮುಂಬೈ ಇಂಡಿಯನ್ಸ್ ಬಿಗಿ ಬೌಲಿಂಗ್ ದಾಳಿಯೆದುರು ರನ್ ಗಳಿಸಲು ಪರದಾಡಿದರು. 163 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 18.1 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 166 ರನ್ ಗಳಿಸುವ ಮೂಲಕ 4 ವಿಕೆಟ್‌ಗಳ ಗೆಲುವು ಸಾಧಿಸಿದೆ.












Click it and Unblock the Notifications