6 Sixes in Over: ದೇಶೀಯ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಆಟಗಾರ
ದಾಖಲೆಗಳು ಇರುವುದೇ ಮುರಿಯುವುದಕ್ಕೆ, ಕ್ರಿಕೆಟ್ ಜಗತ್ತಿನಲ್ಲಿ ಅಪರೂಪಕ್ಕೆ ದಾಖಲಾಗುವ ಹಲವು ದಾಖಲೆಗಳಿವೆ. ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವುದು ಅವುಗಳಲ್ಲಿ ಒಂದು.
2007 ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಅವರ ವಿರುದ್ಧ ಯುವರಾಜ್ ಸಿಂಗ್ ಬಾರಿಸಿದ ಆರು ಸಿಕ್ಸರ್‌ಗಳನ್ನು ಯಾರು ಮರೆಯಲು ಸಾಧ್ಯವಿಲ್ಲ. ವೆಸ್ಟ್ ಇಂಡೀಸ್ ದಂತಕಥೆ ಸರ್ ಗ್ಯಾರಿ ಸೋಬರ್ಸ್ ಪ್ರಮುಖ ಪಂದ್ಯವೊಂದರಲ್ಲಿ ಈ ಸಾಧನೆ ಮಾಡಿದ ಮೊದಲ ವ್ಯಕ್ತಿ.

1968 ರಲ್ಲಿ ನಾಟಿಂಗ್‌ಹ್ಯಾಮ್‌ಶೈರ್‌ಗಾಗಿ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡುವಾಗ, ಗ್ಯಾರಿ ಸೋಬರ್ಸ್ ಗ್ಲಾಮೊರ್ಗಾನ್‌ನ ಮಾಲ್ಕಮ್ ನ್ಯಾಶ್ ಬೌಲಿಂಗ್‌ನಲ್ಲಿ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿದರು. ನಂತರ ರವಿಶಾಸ್ತ್ರಿ ಬರೋಡಾ ವಿರುದ್ಧ ಬಾಂಬೆ ಪರ 1985 ರಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿದ ಮೊದಲ ಭಾರತೀಯರಾದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿದ ಮೊದಲ ಬ್ಯಾಟರ್ ಹರ್ಷಲ್ ಗಿಬ್ಸ್. ಇದೀಗ ಇಂತಹ ಸಾಧಕರ ಪಟ್ಟಿಗೆ ಆಂಧ್ರಪ್ರದೇಶದ ವಂಶಿ ಕೃಷ್ಣ ಸೇರ್ಪಡೆಯಾಗಿದ್ದಾರೆ. ಅವರು ಕರ್ನಲ್ ಸಿಕೆ ನಾಯುಡು ಟ್ರೋಫಿ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಕರ್ನಲ್ ಸಿಕೆ ನಾಯುಡು ಟ್ರೋಫಿಯು ಅಂಡರ್-23 ಕ್ರಿಕೆಟಿಗರಿಗೆ ರಾಷ್ಟ್ರೀಯ ಪಂದ್ಯಾವಳಿಯಾಗಿದೆ.
𝟔 𝐒𝐈𝐗𝐄𝐒 𝐢𝐧 𝐚𝐧 𝐨𝐯𝐞𝐫 𝐀𝐥𝐞𝐫𝐭! 🚨
— BCCI Domestic (@BCCIdomestic) February 21, 2024
Vamshhi Krrishna of Andhra hit 6 sixes in an over off Railways spinner Damandeep Singh on his way to a blistering 64-ball 110 in the Col C K Nayudu Trophy in Kadapa.
Relive 📽️ those monstrous hits 🔽@IDFCFIRSTBank | #CKNayudu pic.twitter.com/MTlQWqUuKP
ದಾಖಲೆ ಬರೆದ ವಂಶಿ ಕೃಷ್ಣ
"ಓವರ್‌ನಲ್ಲಿ 6 ಸಿಕ್ಸರ್‌ಗಳು! ಕಡಪಾದಲ್ಲಿ ನಡೆದ ಕರ್ನಲ್ ಸಿ ಕೆ ನಾಯುಡು ಟ್ರೋಫಿಯಲ್ಲಿ 64 ಎಸೆತಗಳಲ್ಲಿ 110 ರನ್ ಗಳಿಸಿದರು. ರೈಲ್ವೇಸ್ ಸ್ಪಿನ್ನರ್ ದಮನ್‌ದೀಪ್ ಸಿಂಗ್ ಅವರ ಒಂದು ಓವರ್‌ನಲ್ಲಿ ಆಂಧ್ರದ ವಂಶಿ ಕೃಷ್ಣ 6 ಸಿಕ್ಸರ್ ಬಾರಿಸಿದರು" ಎಂದು ಬಿಸಿಸಿಐ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದೆ.
ವಂಶಿ ಕೃಷ್ಣ 64 ಎಸೆತಗಳಲ್ಲಿ 9 ಬೌಂಡರಿ 10 ಸಿಕ್ಸರ್ ಸಹಿತ 110 ರನ್ ಗಳಿಸಿದರು. ಆದರೂ ಈ ಪಂದ್ಯ ಡ್ರಾನಲ್ಲಿ ಕೊನೆಯಾಗಿದೆ. ರೈಲ್ವೇಸ್ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 865 ರನ್‌ಗಳ ಬೃಹತ್ ಮೊತ್ತ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಅಂಶ್ ಯಾದವ್ 268 ರನ್, ರವಿ ಸಿಂಗ್ 258 ರನ್, ಅಂಚಿತ್ ಯಾದವ್ 133 ರನ್ ಗಳಿಸಿ ರೈಲ್ವೇಸ್ ಬೃಹತ್ ಮೊತ್ತ ಗಳಿಸಲು ನೆರವಾದರು. ಬಳಿಕ ಆಂಧ್ರ ಮೊದಲ ಇನ್ನಿಂಗ್ಸ್‌ನಲ್ಲಿ 378 ರನ್‌ಗಳಿಗೆ ಆಲೌಟ್ ಆಯಿತು.












Click it and Unblock the Notifications