ಭಗವಾಧ್ವಜ ನಮ್ಮ ಗುರು ಮತ್ತು ಗುರಿ: ಅನಂತ್‌ಕುಮಾರ್ ಹೆಗಡೆ

ಉತ್ತರ ಕನ್ನಡ, ಮೇ 20: ನಮ್ಮ ಹೋರಾಟ ಅಧಿಕಾರಕ್ಕಾಗಿ ಅಲ್ಲ ಬದಲಿಗೆ ಜಗತ್ತಿನಾದ್ಯಂತ ಭಗವಾಧ್ವಜವನ್ನು ಸ್ಥಾಪಿಸಲು ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಭಗವಾಧದ್ದವಜವನ್ನು ಜಗತ್ತಿನಾದ್ಯಂತ ಪಸರಿಸುವುದು ನಮ್ಮ ಗುರಿ, ಭಗವಾಧ್ವಜವೇ ನಮ್ಮ ಗುರು ಎಂದು ಹೇಳಿದ್ದಾರೆ.

ನಾವು ಸಂಘಟನೆ ಕಟ್ಟಿರುವುದೇ ಧರ್ಮ, ಸಂಸ್ಕೃತಿ ಉಳಿಯಲಿ ಎಂದು, ಲಕ್ಷಾಂತರ ಕಾರ್ಯಕರ್ತರು ಅದಕ್ಕಾಗಿಯೇ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಅನಂತ್‌ಕುಮಾರ್ ಹೆಗಡೆ ಹೇಳಿದರು.

Hindu flag is our teacher and aim: Ananth Kumar Hegde

ಉತ್ತರ ಕನ್ನಡದಲ್ಲಿ ಬಹಳ ಸುಲಭವಾಗಿ ಚುನಾವಣೆ ಆಗಿದೆ ಎಂದ ಅವರು, ಬಿಜೆಪಿ ಒಂದೇ 300ರ ಗಡಿ ದಾಟುತ್ತದೆ, ಎನ್‌ಡಿಎಗೆ 400 ಸೀಟುಗಳು ಬರಲಿವೆ, ದೇಶದೆಲ್ಲಡೆ ಮೋದಿ ಅಲೆ ಇದೆ, ಅದನ್ನು ನಮ್ಮದಾಗಿಸಿಕೊಳ್ಳಲು ಸಂಘಟನೆಯ ಶಕ್ತಿಯೇ ಕಾರಣ ಎಂದು ಅವರು ಹೇಳಿದರು.

ನಾವು ಸೋಗಲಾಡಿತನದ ರಾಜಕಾರಣ ಮಾಡುತ್ತಿಲ್ಲ, ಧರ್ಮ, ದೇಶ, ಜನರ ಅವಶ್ಯಕತೆಗಳಿಗೆ ತಕ್ಕಂತೆ ರಾಜಕಾರಣ ಮಾಡುತ್ತಿದ್ದೇವೆ ಎಂದರು.

ಸರ್ಕಾರ ರಚಿಸಲು ಬಹುಮತ ಬೇಕು ಆದರೆ ನಮಗೆ ಬಹುಮತದಲ್ಲಿ ನಂಬಿಕೆ ಇಲ್ಲ, ಸರ್ವಮತದಲ್ಲಿ ನಂಬಿಕೆ ಇದೆ, ನಾವು ವಿರೋಧಿಗಳನ್ನೂ ನಮ್ಮ ಜೊತೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+