ಗೌತಮಿ ಕೊಂದ ಮಹೇಶ್ ನಕ್ಸಲರ ಸಭೆಗೆ ಹೋಗಿದ್ದ
ಶಿವಮೊಗ್ಗ, ಏ. 8 : ಬೆಂಗಳೂರಿನ ಕಾಡುಗೋಡಿಯ ಹಾಸ್ಟೆಲ್‌ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಗೌತಮಿಯನ್ನು ಕೊಂದ ಅಟೆಂಡರ್ ಮಹೇಶ್‌ಗೆ ನಕ್ಸಲ್ ಸಂಪರ್ಕವಿತ್ತು. ಮಹೇಶ್ ಬಳಿ ನಕ್ಸಲರಿಗೆ ಸಂಬಂಧಿಸಿದ ಕರಪತ್ರಗಳು ಪತ್ತೆಯಾಗಿದ್ದು, ನಕ್ಸಲರ ಸಭೆಯಲ್ಲಿ ಭಾಗವಹಿಸಿದ್ದಾಗಿ ಆತ ಪೊಲೀಸರ ಬಳಿ ಹೇಳಿದ್ದಾನೆ.
ಪೊಲೀಸರ ವಶದಲ್ಲಿರುವ ಮಹೇಶ್ ವಿಚಾರಣೆಯನ್ನು ಪೊಲೀಸರು ಶಿವಮೊಗ್ಗದಲ್ಲಿ ನಡೆಸುತ್ತಿದ್ದಾರೆ. ಮಹೇಶ್ ಹುಟ್ಟೂರಾದ ಆಗುಂಬೆಗೆ ಆತನನ್ನು ಕರೆದುಕೊಂಡು ಹೋಗಿ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ. ವಿಚಾರಣೆ ವೇಳೆ ನಕ್ಸಲ್ ಸಂಪರ್ಕ ವಿರುವ ಬಗ್ಗೆ ಆತ ಹೇಳಿಕೊಂಡಿದ್ದಾನೆ. [ಮಹೇಶ್ ಪೊಲೀಸರ ವಶಕ್ಕೆ]

ಮಹೇಶ್ ಬಳಿ ನಕ್ಸಲರಿಗೆ ಸಂಬಂಧಿಸಿದ ಕರಪತ್ರ ಮತ್ತು ಪತ್ರಿಕೆಯ ಕಟ್ಟಿಂಗ್‌ಗಳು ಪತ್ತೆಯಾಗಿವೆ. ಮಹೇಶ್ ಎರಡು ಬಾರಿ ನಕ್ಸಲ್ ಸಭೆಗಳಲ್ಲಿಯೂ ಪಾಲ್ಗೊಂಡಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಏ.10ರ ತನಕ ಮಹೇಶ್ ಪೊಲೀಸರ ವಶದಲ್ಲಿರುತ್ತಾನೆ. ನಂತರ ಕೋರ್ಟ್‌ಗೆ ಹಾಜರುಪಡಿಸಬೇಕಾಗಿದೆ. [ಸಿದ್ದರಾಮಯ್ಯ ಭೇಟಿಯಾದ ಗೌತಮಿ ಪೋಷಕರು]
ಗನ್ ಖರೀದಿ ಎಲ್ಲಿಂದ : ಗೌತಮಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಆರೋಪಿ ಮಹೇಶ್ ಗನ್ ಖರೀದಿ ಮಾಡಿದ್ದು ಎಲ್ಲಿಂದ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಪೊಲೀಸರ ವಿಚಾರಣೆ ವೇಳೆ ಗನ್ ಖರೀದಿ ಬಗ್ಗೆ ಮಹೇಶ್ ಯಾವುದೇ ಮಾಹಿತಿ ನೀಡಿಲ್ಲ.
ಮತ್ತೆ ಪೊಲೀಸ್ ವಶಕ್ಕೆ : ಏ.10ರ ತನಕ ಮಹೇಶ್‌ನನ್ನು ನ್ಯಾಯಾಲಯ ಪೊಲೀಸರ ವಶಕ್ಕೆ ನೀಡಿದೆ. ಇನ್ನೂ ಹೆಚ್ಚಿನ ವಿಚಾರಣೆ ಅಗತ್ಯವಿರುವುದರಿಂದ ಪೊಲೀಸರು ಮಹೇಶ್‌ನನ್ನು ಪುನಃ ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ.












Click it and Unblock the Notifications