ಅಪಘಾತದಲ್ಲಿ ವ್ಯಕ್ತಿ ಸಾವು; ಲೋಕ ಅದಾಲತ್‌ನಲ್ಲಿ 80 ಲಕ್ಷ ಪರಿಹಾರ

ಶಿವಮೊಗ್ಗ, ಡಿಸೆಂಬರ್ 21: ಬಸ್ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದ ಮಹಿಳೆಗೆ ಲೋಕ ಅದಾಲತ್‌ನಲ್ಲಿ 80 ಲಕ್ಷ ರೂ. ಪರಿಹಾರವನ್ನು ಕೊಡಿಸಲಾಗಿದೆ. ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಅತಿ ಹೆಚ್ಚು ಮೊತ್ತದ ಪರಿಹಾರ ಸಿಕ್ಕಿದ ವಿಶೇಷ ಪ್ರಕರಣ ಇದಾಗಿದೆ.

ಶಿವಮೊಗ್ಗ ಮೂಲದ ಸಹನಾ ತಮ್ಮ ಕುಟುಂಬದೊಂದಿಗೆ ಮೂಡಿಗೆರೆಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬಸ್ ಅಪಘಾತಕ್ಕೊಳಗಾಗಿ ತಮ್ಮ ಪತಿಯನ್ನು ಕಳೆದುಕೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣವನ್ನು ಲೋಕ ಅದಾಲತ್‌ನಲ್ಲಿ ದೂರುದಾರರು ಹಾಗೂ ವಿಮಾ ಕಂಪನಿಗಳ ಮುಖ್ಯಸ್ಥರನ್ನು ಕರೆದು ನ್ಯಾಯಾಧೀಶರು ವಿಚಾರಣೆ ನಡೆಸಿದರು. ವಿಮಾ ಕಂಪನಿಯು 80 ಲಕ್ಷ ರೂ. ಗಳ ಪರಿಹಾರ ಧನವನ್ನು ನೀಡಲು ನ್ಯಾಯಾಲ ಆದೇಶ ನೀಡಿತು.

Bus Accident Women Get 80 Lakh In Lok Adalat

ಲೋಕ ಅದಾಲತ್‌ನಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. "ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಅತಿ ಹೆಚ್ಚು ಮೊತ್ತ ಘೋಷಿಸಿದ ರಾಜ್ಯದಲ್ಲಿಯೇ ವಿಶೇಷ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ದೂರು ದಾರರು ವಿಮಾ ಕಂಪನಿಯವರಿಂದ 1.20 ಕೋಟಿ ರೂ.ಗಳ ಪರಿಹಾರ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು" ಎಂದರು.

ಲೋಕ ಅದಾಲತ್‌ನಲ್ಲಿ ಮೋಟಾರು ವಾಹನಗಳ ಒಟ್ಟು 1,800 ಪ್ರಕರಣಗಳಲ್ಲಿ 595 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅವುಗಳಲ್ಲಿ ಸುಮಾರು 125ಕ್ಕೂ ಹೆಚ್ಚಿನ ಪ್ರಕರಣಗಳು ಇತ್ಯರ್ಥಗೊಂಡಿವೆ.

ನ್ಯಾಯಾಲಯದ ವಿವಿಧ ಶಾಖೆಗಳಲ್ಲಿ ಇದುವರೆಗೂ ದಾಖಲಾಗಿರುವ ಮೊಕದ್ದಮೆಗಳಲ್ಲಿ ರಾಜೀಸಂಧಾನದ ಮೂಲಕ ಇತ್ಯರ್ಥಪಡಿಸಬಹುದಾದ ಪ್ರಕರಣಗಳನ್ನು ಗುರುತಿಸಿ ಅಂತಹವುಗಳನ್ನು ಲೋಕ ಅದಾಲತ್‍ನಲ್ಲಿ ಉಭಯ ಪಕ್ಷಗಳ ಕಕ್ಷಿದಾರರ ಅಪೇಕ್ಷೆಯಂತೆ ಇತ್ಯರ್ಥಪಡಿಸಲಾಗುತ್ತದೆ.

"ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಕರಣಗಳನ್ನು ಕೈಗೆತ್ತಿಕೊಂಡು ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರ ಸಹಕಾರದೊಂದಿಗೆ ಇತ್ಯರ್ಥಪಡಿಸುವ ಆಶಯ ತಮಗಿರುವುದಾಗಿ" ನ್ಯಾಯಾಧೀಶ ಮುಸ್ತಫಾ ಹುಸೇನ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+