ಕನಕಪುರದಲ್ಲಿ ಕರಡಿ ದಾಳಿಗೆ ಗರ್ಭಿಣಿ ಬಲಿ
ಕನಕಪುರ, ಜನವರಿ 18: ಗರ್ಭಿಣಿಯೊಬ್ಬರು ಶೌಚಕ್ಕೆಂದು ಹೊರಗೆ ಹೋಗಿದ್ದ ಸಂದರ್ಭ ಕರಡಿ ದಾಳಿಗೆ ತುತ್ತಾಗಿ ಅಸುನೀಗಿರುವ ಘಟನೆ ಕನಕಪುರದ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ.
ಕನಕಪುರ ತಾಲ್ಲೂಕಿನ ಚೌಕಸಂದ್ರ ಗ್ರಾಮದ ಮಹಿಳೆ ಸುಮಾಬಾಯಿ ಮೃತಪಟ್ಟ ಮಹಿಳೆ. ಏಳು ತಿಂಗಳು ಗರ್ಭಿಣಿಯಾಗಿದ್ದ ಸುಮಾಬಾಯಿ ಇಂದು ಬೆಳಿಗ್ಗೆ ಶೌಚಕ್ಕೆಂದು ಮನೆಯ ಹಿಂದೆ ಹಿತ್ತಲಿಗೆ ಹೋಗಿದ್ದಾರೆ ಆಗ ಅಲ್ಲಿ ಪೊದೆಗಳ ನಡುವೆ ಅವಿತಿದ್ದ ಕರಡಿ ಇದ್ದಕ್ಕಿಂದ್ದಂತೆ ಸುಮಾ ಅವರ ಮೇಲೆ ದಾಳಿ ಮಾಡಿ ತೀರ್ವವಾಗಿ ಗಾಯಗೊಳಿಸಿದೆ.

ಸುಮಾ ಅವರ ಕುತ್ತಿಗೆ, ಮುಖಕ್ಕೆ ತೀರ್ವ ಗಾಯವಾಗಿ ವಿಪರೀತ ರಕ್ತಸ್ರಾವವಾದ ಕಾರಣ ಸುಮಾ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ, ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಪರಿಶೀಲನೆ ನಡೆಸಿ, ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.












Click it and Unblock the Notifications