Raichur: ಮನೆಯಲ್ಲಿ ಮಂದಿ ಇದ್ದಾಗಲೇ ಕೈಚಳಕ ತೋರಿಸಿದ ಕಳ್ಳರು
ರಾಯಚೂರು ಏಪ್ರಿಲ್ 8: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳ್ಳತನವನ್ನು ಮಾಡುವುದು ಸಾಮಾನ್ಯ. ಆದರೆ ಇಲ್ಲೊಂದು ಘಟನೆ ವಿಚಿತ್ರವಾಗಿ ನಡೆದಿದೆ. ಮನೆಯಲ್ಲಿ ಜನರಿದ್ದಾಗಲೇ ಚಾಲಾಕಿ ಕಳ್ಳ ತನ್ನ ಕೈಚಳಕವನ್ನು ತೋರಿಸಿದ್ದಾನೆ.
ಹೌದು ರಾಯಚೂರು ನಗರದ ಪ್ರಶಾಂತ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಕಳ್ಳ ವೀರೇಶ್ ಎಂಬುವವರ ಮನೆಯಲ್ಲಿ 760 ಗ್ರಾಂ ಚಿನ್ನ ಹಾಗೂ 1 ಲಕ್ಷ ನಗದು ಹಣವನ್ನು ದೋಚಿದ್ದಾನೆ. ತೆರೆದ ಕಿಟಕಿ ಮೂಲಕ ಬಾಗಿಲಿನ ಚಿಲಕ ತೆರೆದು ಒಳನುಗ್ಗಿದ ಕಳ್ಳ ಚಿನ್ನ ಹಣ ದೋಚಿ ಪರಾರಿಯಾಗಿದ್ದಾನೆ. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹಣವನ್ನ ವೀರೇಶ್ ಬೆಡ್ ರೂಂನಲ್ಲಿ ಇಟ್ಟಿದ್ದರು. ಬೇಸಿಗೆ ಇದ್ದ ಕಾರಣ ರೂಂ ನಿಂದ ಹೊರಗಡೆ ಮಲಿಗಿದ್ದರು. ಹಾಲ್‌ನಲ್ಲಿ ಮಲಗಿದ್ದಾಗ ಕಿಟಕಿಗಳನ್ನು ತೆರೆಯಲಾಗಿತ್ತು. ಆದರೆ ಕಳ್ಳ ಮನೆಯವರೆಲ್ಲಾ ಗಾಢನಿದ್ದೆಯಲ್ಲಿ ಇದ್ದಾಗ ಕಿಟಕಿಯ ಮೂಲಕ ಕೈ ಹಾಕಿ ಬಾಗಿಲು ತೆಗೆದು ಒಳಬಂದಿದ್ದಾನೆ.
ಯಾರಿಗೂ ಗೊತ್ತಾಗದಂತೆ ತನ್ನ ಕೆಲಸ ಮುಗಿಸಿ ಎಸ್ಕೇಪ್ ಆಗಿದ್ದಾನೆ. ಬೆಳಗ್ಗೆ ಎಚ್ಚರವಾದಾಗಲೇ ಕಳ್ಳತನವಾಗಿರುವ ಬಗ್ಗೆ ಮನೆಯವರಿಗೆ ಗೊತ್ತಾಗಿದೆ. ಕೂಡಲೇ ಪೊಲೀಸ್ ಠಾಣೆಗೆ ತೆರಳಿ ವೀರೇಶ್ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಮನೆ ಬಳಿ ಇದ್ದ ಸಿಸಿಟಿವಿ ಕ್ಯಾಮರಾಗಳ ಮೂಲಕ ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.
ಬಿಸಿಲಿಗೆ ತತ್ತರಿಸಿದ ರಾಯಚೂರು
ರಾಯಚೂರಿನಲ್ಲಿ ಜನ ಭಾರೀ ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ. ಕಳೆದ ಕೆಲ ದಿನಗಳಿಂದ 41 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ರಾಯಚೂರಿನಲ್ಲಿ ದಾಖಲಾಗಿದೆ. ಮಾರ್ಚ್ ತಿಂಗಳಲ್ಲಿ ರಾಯಚೂರಿನಲ್ಲಿ ತಾಪಮಾನ ಅಧಿಕವಾಗಿತ್ತು. ಇದೀಗ ಏಪ್ರಿಲ್ ತಿಂಗಳ ಆರಂಭದಲ್ಲಿ ರಾಜ್ಯದ ಹಲವೆಡೆ ವರ್ಷಧಾರೆಯಾದ ಕಾರಣ ಕೊಂಚ ಬಿಸಿಲಿನ ಝಳ ಕಡಿಮೆಯಾಗಿತ್ತು. ಇದೀಗ ತಾಪಮಾನ ಮತ್ತೆ ಏರಿಕೆಯಾಗುತ್ತಿದೆ. ಇದರಿಂದ ಜನ ಕಂಗೆಟ್ಟು ಹೋಗಿದ್ದಾರೆ.
ಮಡಿಕೆ ನೀರಿಗೆ ಜನ ಹೆಚ್ಚು ಮೊರೆ ಹೋಗುತ್ತಿದ್ದಾರೆ. ವೈದ್ಯರೂ ಕೂಡ ವಿನಾಕಾರಣ ಹೊರ ಬರದಾರಂತೆ ಜನರಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಬೇಸಿಗೆಯಲ್ಲಿ ದೇಹವನ್ನು ತಂಪಾಡಿಗಲು ಹೆಚ್ಚು ನೀರು ಕುಡಿಯುವುದು ಮುಖ್ಯ. ತಂಪಾದ ಪಾನೀಯಗಳನ್ನು ಕುಡಿಯುವುದು ಅವಶ್ಯಕ ಎಂದಿದ್ದಾರೆ.
ಅಲ್ಲದೆ ಈ ಸಮಯದಲ್ಲಿ ಕೆಲ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಚರ್ಮ ರೋಗ, ಸನ್ ಸ್ಟ್ರೋಕ್, ಡಿಹೈಡ್ರೆಷನ್, ನೀರಿನ ಇನ್ಫೆಕ್ಷನ್ ಕಂಡು ಬರುತ್ತದೆ. ಹೀಗಾಗಿ ಆರೋಗ್ಯ ವಿಚಾರದಲ್ಲಿ ತುಂಬಾ ಜಾಗರೂಕರಾಗಿರಲು ವೈದ್ಯರು ಸಲಹೆಗಳನ್ನು ನೀಡಿದ್ದಾರೆ.











Click it and Unblock the Notifications