ಉಪ ಮುಖ್ಯಮಂತ್ರಿ ಮೊಬೈಲ್‌ನಿಂದ ವಾಟ್ಸಾಪ್‌ನಲ್ಲಿ ಮಧ್ಯರಾತ್ರಿ ಅಶ್ಲೀಲ ವಿಡಿಯೋ ರವಾನೆ
ಪಣಜಿ, ಅಕ್ಟೋಬರ್ 20: ಸಾಮಾಜಿಕ ಕಾರ್ಯಕರ್ತರ ವಾಟ್ಸಾಪ್ ಗುಂಪಿಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ ಆರೋಪ ಎದುರಿಸುತ್ತಿರುವ ಗೋವಾ ಉಪ ಮುಖ್ಯಮಂತ್ರಿ ಚಂದ್ರಕಾಂತ್ ಬಾಬು ಕಾವ್ಳೇಕರ್ ತಮ್ಮ ಫೋನ್ ಹ್ಯಾಕ್ ಆಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಭಾನುವಾರ ಮಧ್ಯರಾತ್ರಿ ಅವರ ಫೋನ್ ಸಂಖ್ಯೆಯಿಂದ ವಾಟ್ಸಾಪ್ ಗುಂಪೊಂದಕ್ಕೆ ಅಶ್ಲೀಲ ಸಂದೇಶ ರವಾನೆಯಾಗಿತ್ತು. ವಾಟ್ಸಾಪ್ ಗ್ರೂಪ್‌ಗೆ ಅಶ್ಲೀಲ ವಿಡಿಯೋ ರವಾನೆಯಾದ ಸಂದರ್ಭದಲ್ಲಿ ತಾವು ಫೋನ್ ಬಳಿಯೇ ಇರಲಿಲ್ಲ ಮತ್ತು ಆ ಸಮಯಕ್ಕೆ ನಿದ್ದೆ ಮಾಡುತ್ತಿದ್ದದ್ದಾಗಿ ಅವರು ಸೈಬರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
'ಕೆಲವು ಕಿಡಿಗೇಡಿಗಳು ವಿಲೇಜಸ್ ಆಫ್ ಗೋವಾ ಎಂಬ ವಾಟ್ಸಾಪ್ ಗ್ರೂಪ್‌ಗೆ ಅಶ್ಲೀಲ ವಿಡಿಯೋವನ್ನು ಕಳುಹಿಸಿದ್ದಾರೆ. ಆ ವಿಡಿಯೋದಲ್ಲಿ ಉದ್ದೇಶಪೂರ್ವಕವಾಗಿ ಕ್ರಿಮಿನಲ್ ದುರುದ್ದೇಶದಿಂದ ನನ್ನ ಹೆಸರನ್ನು ಉಲ್ಲೇಖಿಸಲಾಗಿದೆ' ಎಂದು ಕಾವ್ಳೇಕರ್ ಆರೋಪಿಸಿದ್ದಾರೆ. ಮುಂದೆ ಓದಿ.

ಹಿಂದೆಯೂ ಪ್ರಯತ್ನಿಸಿದ್ದರು
'ನಾನು ಅನೇಕ ಗುಂಪುಗಳಲ್ಲಿ ಇದ್ದರೂ ಒಂದೇ ಒಂದು ಗುಂಪಿಗೆ ವಿಡಿಯೋವನ್ನು ಕಳುಹಿಸಲಾಗಿದೆ. ಹಾಗೆಯೇ ಈ ಸಂದೇಶ ಕಳುಹಿಸುವಾಗ ನಾನು ಫೋನ್ ಪಕ್ಕ ಇರಲಿಲ್ಲ. ಆಗ ನಿದ್ರಿಸುತ್ತಿದ್ದೆ. ನನ್ನ ಹೆಸರು ಕೆಡಿಸಲು ಮತ್ತು ಸಾರ್ವಜನಿಕರ ಮುಂದೆ ನನಗೆ ಕೆಟ್ಟ ವರ್ಚಸ್ಸು ತರಲು ಈ ಹಿಂದೆಯೂ ಅಂತಹ ಅನೇಕ ಪ್ರಯತ್ನಗಳು ನಡೆದಿವೆ' ಎಂದು ಹೇಳಿದ್ದಾರೆ.

ಕ್ರಮ ತೆಗೆದುಕೊಳ್ಳಲು ಆಗ್ರಹ
'ನನ್ನ ಮೊಬೈಲ್ ಫೋನ್‌ಅನ್ನು ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋವನ್ನು ಅಪ್‌ಲೋಡ್ ಮಾಡಿ ರವಾನಿಸಿದ ಎಲ್ಲ ದುಷ್ಕರ್ಮಿಗಳ ವಿರುದ್ಧ ಮತ್ತು ನಿರ್ಲಜ್ಜರ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳುವಂತೆ ಒತ್ತಾಯಿಸುತ್ತೇನೆ' ಎಂದು ಪೊಲೀಸರಿಗೆ ಬರೆದಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕಾವ್ಳೇಕರ್ ವಿರುದ್ಧವೂ ದೂರು
ವಿರೋಧಪಕ್ಷಗಳು ಕೂಡ ಕಾವ್ಳೇಕರ್ ವಿರುದ್ಧ ಪೊಲೀಸರಿಗೆ ದೂರು ನೀಡಿವೆ. ಸೋಮವಾರ ರಾತ್ರಿ 1.20ರ ಸುಮಾರಿಗೆ ವಾಟ್ಸಾಪ್ ಗ್ರೂಪ್ ಒಂದಕ್ಕೆ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ್ದಾರೆ ಎಂದು ಗೋವಾ ಕಾಂಗ್ರೆಸ್ ಕಾವ್ಳೇಕರ್ ವಿರುದ್ಧ ದೂರು ನೀಡಿದೆ. ಮತ್ತೊಂದು ದೂರಿನಲ್ಲಿ ಗೋವಾ ಫಾರ್ವರ್ಡ್ ಪಾರ್ಟಿಯ ಮಹಿಳಾ ಘಟಕ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದೆ.

ಕಾಂಗ್ರೆಸ್‌ನಿಂದ ಬಿಜೆಪಿಗೆ
ಕಾಂಗ್ರೆಸ್‌ನಲ್ಲಿದ್ದ ಚಂದ್ರಕಾಂತ್ ಬಾಬು ಕಾವ್ಳೇಕರ್ ಅವರು ಕಳೆದ ವರ್ಷ ಬಿಜೆಪಿ ಸೇರ್ಪಡೆಯಾಗಿದ್ದರು. ಗೋವಾ ಫಾರ್ವರ್ಡ್ ಪಾರ್ಟಿಯ ವಿಜಯ್ ಸರ್ದೇಸಾಯಿ ಅವರಿಂದ ಹಿಂಪಡೆಯಲಾಗಿದ್ದ ಎರಡು ಹುದ್ದೆಗಳನ್ನು ಕಾವ್ಳೇಕರ್ ಅವರಿಗೆ ಬಿಜೆಪಿ ಕಾಣಿಕೆಯಾಗಿ ನೀಡಿತ್ತು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications