ಗೋವಾದಲ್ಲಿ 3 ಜನರಿಗೆ ಕೊರೊನಾ ಪಾಸಿಟಿವ್
ಪಣಜಿ, ಮಾರ್ಚ್ 26: ಗೋವಾದಲ್ಲಿ ವಿದೇಶಕ್ಕೆ ಹೋಗಿ ಬಂದಿದ್ದ ಮೂವರಿಗೆ ಕೊರೊನಾ ಪಾಸಿಟಿವ್ ಎನ್ನುವುದು ದೃಢವಾಗಿದೆ. ಗೋವಾದ ಮೊದಲ ಕೊರೊನಾ ಪಾಸಿಟಿವ್ ಪ್ರಕರಣಗಳು ಇವಾಗಿವೆ.
ಸೋಂಕಿತ ಸಂಖ್ಯೆ 1
25 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಆತ ಸ್ಪೇನ್‌ನಿಂದ ಭಾರತಕ್ಕೆ ಬಂದಿದ್ದ.
ಸೋಂಕಿತ ಸಂಖ್ಯೆ 2
ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ್ದ ವ್ಯಕ್ತಿಗೆ ಸೋಂಕು ತಗುಲಿದೆ. ಈ ವ್ಯಕ್ತಿಗೆ 29 ವರ್ಷ ವಯಸ್ಸಾಗಿದೆ.

ಸೋಂಕಿತ ಸಂಖ್ಯೆ 3
55 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. ಈಗ ಅಮೇರಿಕಾದಿಂದ ಭಾರತಕ್ಕೆ ಬಂದಿದ್ದ.
ಪರೀಕ್ಷೆಯ ಬಳಿಕ ಈ ಮೂವರಿಗೂ ಕೊರೊನಾ ಪಾಸಿಟಿವ್ ಎನ್ನುವುದು ದೃಢವಾಗಿದೆ. ಆ ಬಳಿಕ ಮೂವರನ್ನು ಐಸೊಲೇಷನ್‌ನಲ್ಲಿ ಇಡಲಾಗಿದೆ. ಮೂರು ಜನರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಗೋವಾ ಆರೋಗ್ಯ ಇಲಾಖೆ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದೆ.
ಈವರೆಗೆ, ಭಾರತದಲ್ಲಿ 566 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. 10 ಜನರು ಕೊರೊನಾದಿಂದ ಮರಣ ಹೊಂದಿದ್ದಾರೆ.












Click it and Unblock the Notifications