ಜನರು ಹುಷಾರಾಗಿರಬೇಕು! ರಾಬರ್ಟ್ ವಾದ್ರಾ ಬಗ್ಗೆ ಸ್ಮೃತಿ ಇರಾನಿ ಲೇವಡಿ!
ನವದೆಹಲಿ, ಏಪ್ರಿಲ್ 08: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರು ಕಾಂಗ್ರೆಸ್ ಪರ ದೇಶದ ಮೂಲೆ ಮೂಲೆಯಲ್ಲೂ ಪ್ರಚಾರ ಮಾಡುತ್ತೇನೆ ಎಂದಿರುವುದು ಬಿಜೆಪಿ ನಾಯಕರಿಗೆ ಆಡಿಕೊಳ್ಳಲು ಅತ್ಯುತ್ತಮ ಸರಕಾಗಿ ಸಿಕ್ಕಿಕೊಂಡಿದೆ!
ಹಲವು ಭೂ ಹಗರಣಗಳ ಆರೋಪಿಯಾಗಿರುವ ವಾದ್ರಾ ಕಾಂಗ್ರೆಸ್ ಪರ ಇಡೀ ಭಾರತದಾದ್ಯಂತ ಪ್ರಚಾರ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಪ್ರತಿಕ್ರಿಯೆ ನೀಡಿದ್ದು, "ನಾನು ಒಂದೇ ಒಂದು ಮಾತನ್ನು ಹೇಳುತ್ತೇನೆ. ರಾಬರ್ಟ್ ವಾದ್ರಾ ದೇಶದಲ್ಲಿ ಎಲ್ಲೇ ಹೋಗಿ ಪ್ರಚಾರ ಮಾಡಲಿ, ನಮ್ಮ ಅಭ್ಯಂತರವಿಲ್ಲ. ಆದರೆ ಅವರು ಪ್ರಚಾರಕ್ಕೆ ತೆರಳುವ ಪ್ರದೇಶದ ಜನರು ತಮ್ಮ ಜಮೀನು, ಭೂಮಿಯ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದಿದ್ದರೆ ಒಳ್ಳೆಯದು" ಎಂದಿದ್ದಾರೆ.

ವಿತ್ತ ಸಚಿವ ಅರುಣ್ ಜೇಟ್ಲಿ ಅವರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಾದ್ರಾ ಪ್ರಚಾರಕ್ಕೆ ಬರುವುದು ಕಾಂಗ್ರೆಸ್ ಗೆ ಒಳಿತೋ, ಬಿಜೆಪಿಗೋ ಎಂಬುದನ್ನು ಕಾದುನೋಡಬೇಕು ಎಂದಿದ್ದರು!












Click it and Unblock the Notifications