ಉಗ್ರ ಚಟುವಟಿಕೆಗೆ ಹೊಸ ತಂತ್ರ, ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ
ನವದೆಹಲಿ, ಫೆಬ್ರವರಿ 25: ಪಾಕಿಸ್ತಾನವು 2008 ರ ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯ್ಯದ್ ನ ಜಾಮತ್ ಉದ್ ದಾವಾ ಮತ್ತು ಫಲಾಹ್ ಇ ಇನ್ಸಾನಿಯಂಟ್ ಫೌಂಡೇಶನ್ ಅನ್ನು ನಿಷೇಧಿಸಿದ ನಂತರ ಪಾಕಿಸ್ತಾನದ ಐಎಸ್ ಐ(Inter-Services Intelligence) ಹಫೀಜ್ ನೆರವಿಗೆ ಹೊಸ ತಂತ್ರ ಹುಡುಕಿದೆ.
ಈ ಭಯಾನಕ ತಂತ್ರದ ಕುರಿತ ಸ್ಫೋಟಕ ಮಾಹಿತಿಯನ್ನು ಭಾರತದ ಗುಪ್ತಚರ ಇಲಾಖೆ ಮೂಲಗಳು ಹೊರಹಾಕಿವೆ.
ಜಾಮತ್ ಉದ್ ದಾವಾ ಉಗ್ರ ಸಂಘಟನೆ ಈಗಾಗಲೇ ನಿಷೇಧವಾಗಿರುವುದರಿಂದ ಅದನ್ನು ಎರಡು ಭಾಗವಾಗಿ ಮಾಡಿ 'ಜಮ್ಮು-ಕಾಶ್ಮೀರ ಮೂವ್ ಮೆಂಟ್' ಮತ್ತು 'ರೆಸ್ಕ್ಯೂ, ರಿಲೀಫ್ ಅಂಡ್ ಎಜ್ಯುಕೇಶನ್ ಫೌಂಡೇಶನ್' ಎಂಬ ಹೆಸರಿನಲ್ಲಿ ಉಗ್ರಚಟುವಟಿಕೆ ನಡೆಸಲು ಉಗ್ರ ಸಂಘಟನೆ ಮುಂದಾಗಿದೆ.

ಏನಿದು ಹೊಸ ತಂತ್ರ?
'ಜಮ್ಮು-ಕಾಶ್ಮೀರ ಮೂವ್ ಮೆಂಟ್' ಮತ್ತು 'ರೆಸ್ಕ್ಯೂ, ರಿಲೀಫ್ ಅಂಡ್ ಎಜ್ಯುಕೇಶನ್ ಫೌಂಡೇಶನ್' ಈ ಎರಡೂ ಸಂಘಟನೆಗಳೂ ಮೇಲ್ನೋಟಕ್ಕೆ ದತ್ತಿಸಂಸ್ಥೆಗಳಂತೆಯೇ ಕೆಲಸ ಮಾಡಲಿವೆ. ನೋಡುವವರಿಗೆ ಅವು ಸೇವಾ ಸಂಸ್ಥೆಗಳು. ಆದರೆ ಪರೋಕ್ಷವಾಗಿ ಚಿಕ್ಕ ಮಕ್ಕಳಿಂದಲೇ ಉಗ್ರವಾದ ಬಿತ್ತಿ, ಹಿಂಸಾತ್ಮಕ ಚಟುವಟಿಕೆಗಳನ್ನು ತೊಡಗುವಂತೆ ಮಾಡುವುದು ಇವುಗಳ ಉದ್ದೇಶವಾಗಿರಲಿವೆ.

ಈ ಕೃತ್ಯ ನಿಭಾಯಿಸುವವರು ಯಾರು?
ಲಷ್ಕರ್ ಇ ತೊಯ್ಬಾ ಮತ್ತು ಜೆಯುಡಿ ಎರಡೂ ಉಗ್ರ ಸಂಘಟನೆಗಳೂ ಒಟ್ಟಾಗಿ ಈ ಎರಡು ಸಂಘಟನೆಗಳಿಗೆ ಕೆಲಸ ಮಾಡಲು ಸೂಚಿಸಲಾಗದೆ. ಜೆಯುಡಿ 'ಜಮ್ಮು ಮತ್ತು ಕಾಶ್ಮೀರ ಮೂವ್ಮೆಂಟ್' ಹೆಸರಿನಲ್ಲಿ ಕಣಿವೆ ರಾಜ್ಯದಲ್ಲಿ ಶಾಂತಿ ಕಡಡುವ ಕೆಲಸ ಮಾಡಿದರೆ, ಎಫ್ ಐಎಫ್, ರೆಸ್ಕ್ಯೂ, ರಿಲೀಫ್ ಅಂಡ್ ಎಜ್ಯುಕೇಶನ್ ಫೌಂಡೇಶನ್ ಕೆಲಸದಲ್ಲಿ ತೊಡಗಲಿದೆ.

ಸೇವೆಯ ಹೆಸರಲ್ಲಿ ಹಣ, ವ್ಯಯವಾಗೋದು ಉಗ್ರ ಚಟುವಟಿಕೆಗೆ!
ಸೇವೆಯ ಹೆಸರಿನಲ್ಲಿ ಬೇರೆ ಬೇರೆ ದೇಶಗಳಿಂದ ಹಣವನ್ನು ಸಂಗ್ರಹಿಸಿ, ಈ ಹಣವನ್ನು ಭಾರತದ ವಿರುದ್ಧ ಉಗ್ರ ಚಟುವಟಿಕೆ ಕೈಗೊಳ್ಳಲು ಬಳಸಿಕೊಳ್ಳುವುದು ಇವರ ಉದ್ದೇಶ. ಈ ಸ್ಫೋಟಕ ಮಾಹಿತಿಯನ್ನು ಗುಪ್ತಚರ ಇಲಾಖೆ ಬಯಲಿಗೆಳೆದಿದ್ದು, ಹೊಸರೂಪದಲ್ಲಿ ಹುಟ್ಟುತ್ತಿರುವ ಈ ಭಯೋತ್ಪದಾನೆಯ ವಿಷಬೀಜವನ್ನು ಪಾಕಿಸ್ತಾನ ಈಗಲೇ ಹೊಸಕಿಹಾಕದೆ, ನಿರೆರೆದಿದ್ದೇ ಆದಲ್ಲಿ, ಮುಂದೊಮ್ಮೆ ಭಾರೀ ಬೆಲೆ ತೆರುವ ಪರಿಸ್ಥಿತಿ ಬಂದೀತು!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿದ ಒತ್ತಡ
ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ಈ ಉಗ್ರ ಸಂಘಟನೆಗಳನ್ನು ನಿಷೇಧಿಸಿದ ನಂತರ ಈ ಬೆಳವಣಿಗೆ ನಡೆದಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಅದೂ ಅಲ್ಲದೆ ಹಫೀಜ್ ನ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಕೇಂದ್ರ ಕಚೇರಿಯನ್ನೂ ಇತ್ತೀಚೆಗೆ ಪಾಕ್ ಸರ್ಕಾರ ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. ಫೆಬ್ರವರಿ 14 ರಂದು ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬ ಉಗ್ರ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಭಾರತೀಯ ಸೇನೆಯ 44 ಯೋಧರು ಹುತಾತ್ಮರಾಗಿದ್ದರು. ಈ ಘಟನೆಯ ನಂತರ ಪಾಕಿಸ್ತಾನದ ವಿರುದ್ಧ ವಿಶ್ವದ ನಾನಾ ದೇಶಗಳು ಒತ್ತಡ ಹೇರಿವೆ.












Click it and Unblock the Notifications