ಲಾಲೂ ಪುತ್ರಿ ಮದುವೆ ಆರತಕ್ಷತೆಯಲ್ಲಿ ಮೋದಿ
ನವದೆಹಲಿ, ಫೆ.27: ರೈಲ್ವೆ ಬಜೆಟ್, ಕೇಂದ್ರದ ಬಜೆಟ್ ಬಿಸಿ ನಡುವೆ ದೇಶದ ಪ್ರಮುಖ ರಾಜಕಾರಣಿಗಳು ಮದುವೆ ಸಂಭ್ರಮದಲ್ಲಿ ಮುಳುಗಿದ್ದಾರೆ. ಮಾಜಿ ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮದುವೆ ಆರತಕ್ಷತೆಗೆ ಬಂದಿದ್ದ ಅತಿಥಿಗಳ ಪೈಕಿ ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮುಖ್ಯ ಆಕರ್ಷಣೆ ಯಾಗಿದ್ದರು.
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸೋದರ ಮೊಮ್ಮಗ (grandnephew) ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಮಗಳ ವಿವಾಹ ಆರತಕ್ಷತೆ ಕಾರ್ಯಕ್ರಮ ನವದೆಹಲಿಯಲ್ಲಿ ಗುರುವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ದೇಶದ ಹಿರಿಯ ಕಿರಿಯ ರಾಜಕಾರಣಿಗಳು, ಜಾತಿವಾರು ಹಾಗೂ ಜಾತ್ಯಾತೀತ ಮುಖಂಡರು, ಹಿಂದುಳಿದ, ದಲಿತ ನಾಯಕರ ಸಮಾಗಮಕ್ಕೆ ಲಾಲೂ ಪುತ್ರಿ ಮದುವೆ ವೇದಿಕೆ ಒದಗಿಸಿತ್ತು.

ರಾಜ್ ಲಕ್ಷ್ಮಿ ಹಾಗೂ ತೇಜ್ ಪ್ರತಾಪ್ ದಂಪತಿ
ನವದಂಪತಿ ರಾಜ್ ಲಕ್ಷ್ಮಿ ಹಾಗೂ ತೇಜ್ ಪ್ರತಾಪ್ ಯಾದವ್ ಅವರನ್ನು ಹರಸಲು ಅನೇಕ ಮುಖಂಡರು ಬಂದಿದ್ದರು. ವಿತ್ತ ಸಚಿವ ಅರುಣ್ ಜೇಟ್ಲಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಸ್ಪೀಕರ್ ಸುಮಿತ್ರಾ ಮಹಾಜನ್, ಗೃಹ ಸಚಿವ ರಾಜನಾಥ್ ಸಿಂಗ್, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ನಿತೀಶ್ ಕುಮಾರ್ ಜೊತೆ ಪ್ರಧಾನಿ ಮೋದಿ
ಬಿಹಾರ ಮುಖ್ಯಮಂತ್ರಿ ಒಂದು ಕಾಲದ ದೋಸ್ತ್ ಆಗಿದ್ದ ನಿತೀಶ್ ಕುಮಾರ್ ಜೊತೆ ಪ್ರಧಾನಿ ಮೋದಿ ಅವರು ಕೆಲ ಕಾಲ ಮಾತುಕತೆ ನಡೆಸಿ ಉಭಯ ಕುಶಲೋಪರಿ ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು. ನವದಂಪತಿಗಳ ಜೊತೆ ಲಾಲೂ, ಮೋದಿ ಹಾಗೂ ಮುಲಾಯಂ ಸಿಂಗ್

ಪುತ್ರಿ ರಾಜ್ ಲಕ್ಷ್ಮಿ ಜೊತೆ ಲಾಲೂ ಪ್ರಸಾದ್
ದಂಪತಿಗಳ ತಿಲಕ್ ಸಮಾರಂಭ ಫೆಬ್ರವರಿ 21 ರಂದು ಮುಲಾಯಂ ಸಿಂಗ್ ಯಾದವ್ ಅವರ ಊರು ಸಫಾಯಿಯಲ್ಲಿ ನಡೆಯಿತು. ಈ ಸಮಾರಂಭಕ್ಕೂ ಪ್ರಧಾನಿ ಮೋದಿ ಅವರು ಆಗಮಿಸಿದ್ದು ವಿಶೇಷವಾಗಿತ್ತು.

ವೈಭವದಿಂದ ನಡೆದ ಮದುವೆ, ಆರತಕ್ಷತೆ
ನ್ಯಾಷಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ಅಧ್ಯಕ್ಷ ಶರದ್ ಪವಾರ್, ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಜನತಾ ದಳ ಯುನೈಟೆಡ್ ಅಧ್ಯಕ್ಷ ಶರದ್ ಯಾದವ್ ಅವರು ಮಿಕ್ಕ ಅತಿಥಿಗಳಾಗಿ ಹಾಜರಿದ್ದರು.












Click it and Unblock the Notifications