ದೆಹಲಿಯಲ್ಲಿ AAP ಪಾಲಿಗೆ ಕಾಂಗ್ರೆಸ್ 'ಮುಚ್ಚಿದ ಬಾಗಿಲು'

ನವದೆಹಲಿ, ಫೆಬ್ರವರಿ 25: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು AAP ಮುಖಂಡ ಅರವಿಂದ್ ಕೇಜ್ರವಾಲ್ ಹೇಳಿದ್ದಾರೆ.

ಎನ್ ಡಿಟಿವಿಗೆ ಅವರು ನೀಡದ ಸಂದರ್ಶನದಲ್ಲಿ, 'ದೆಹಲಿಯಲ್ಲಿ ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಿಲ್ಲ. ಆದ್ದರಿಂದ ನಾವು ಏಕಾಂಗಿಯಾಗಿ ಹೋರಾಡುತ್ತೇವೆ' ಎಂದು ಸ್ಪಷ್ಟಪಡಿಸಿದ್ದಾರೆ.

"ದೆಹಲಿಯಲ್ಲಿ ನಾವು ಮೈತ್ರಿ ಮಾಡಿಕೊಳ್ಳದೆ ಇದ್ದರೂ, ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಸಲುವಾಗಿ ನಾನು ಕಾಂಗ್ರೆಸ್ ನೊಂದಿಗೆ ಕೈಜೋಡಿಸಲು ಸಿದ್ಧನಾಗಿದ್ದೇನೆ"ಎಂದು ಸಹ ಅವರು ಹೇಳಿದ್ದಾರೆ. ಅಂದರೆ ಮಹಾಘಟಬಂಧನದಲ್ಲಿ ತಾವೂ ಭಾಗಿಯಾಗುವ ಸೂಚನೆ ನೀಡಿದ್ದಾರೆ.

Congress is not ready to ally with aap: Arvind Kejriwal

"ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿ ದೇಶದ ಆರ್ಥಿಕತೆಯನ್ನು ನಾಶ ಮಾಡಿದ್ದಾರೆ, ಪಾಕಿಸ್ತಾನ ಎಪ್ಪತ್ತು ವರ್ಷಗಳಲ್ಲಿ ಮಾಡಲಾಗದ್ದನ್ನು ಇವರು ನಾಲ್ಕೂವರೆ ವರ್ಷಗಳಲ್ಲಿ ಮಾಡಿ ದೇಶದಲ್ಲಿ ದ್ವೇಷದ ವಾತಾವರಣ ಬಿತ್ತಿದ್ದಾರೆ. ಅವರನ್ನು ತಡೆಯಲು ನಾನು ಏಣು ಬೇಕಾದರೂ ಮಾಡಬಲ್ಲ. ನಮಗೆ ಕಾಂಗ್ರೆಸ್ ಬಗ್ಗೆ ಯಾವುದೇ ಪ್ರೀತಿ ಇಲ್ಲ. ಆದರೆ ಬಿಜೆಪಿಯನ್ನು ತಡೆಯುವುದು ನಮ್ಮ ಉದ್ದೇಶ" ಎಂದು ಕೇಜ್ರಿವಾಲ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+