ಹೃದಯಾಘಾತದಿಂದ ಮೈಸೂರಿನ ಹಿರಿಯ ಪತ್ರಕರ್ತ ಅನೂಪ್ ಕುಮಾರ್ ನಿಧನ
ಮೈಸೂರು, ಜನವರಿ 1: 'ದಿ ಹಿಂದೂ' ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಿರಿಯ ಪತ್ರಕರ್ತ ಅನೂಪ್ ಕುಮಾರ್(50) ಹೃದಯಾಘಾತದಿಂದ ಇಂದು(ಜ.1) ಮೃತಪಟ್ಟಿದ್ದಾರೆ.
ಕೆಲ ವರ್ಷಗಳಿಂದ ದೆಹಲಿಯಲ್ಲಿ ಕೆಲಸ ನಿರವಹಿಸುತ್ತಿದ್ದ ಅನೂಪ್ ಅವರು ಮೂಲತಃ ಮೈಸೂರಿನವರು.
ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಕನ್ನಡಿಗ ಪತ್ರಕರ್ತ ಅನೂಪ್ ಅವರ ಸಾವು ಆಘಾತವನ್ನಂಟು ಮಾಡಿದೆ. ನನಗೂ ಪರಿಚಿತರಾಗಿದ್ದ ಅನೂಪ್ ಮೈಸೂರಿನವರು. ಅವರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/D13OtLz89O
— CM of Karnataka (@CMofKarnataka) January 1, 2018
ಪ್ರವಾಸಕ್ಕೆಂದು ಕುಟುಂಬ ಸಮೇತ ಚಂಡಿಗಢ ಮನಾಲಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಅವರ ಪಾರ್ಥಿವ ಶರೀರವನ್ನು ಮೈಸೂರಿಗೆ ತಂದು, ಇಂದು ಸಂಜೆ ಇಲ್ಲಿನ ವಿಜಯನಗರದ ಅವರ ನಿವಾಸದ ಬಳಿ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗುತ್ತದೆ ಎಂದು ಅವರ ಕುಟುಂಬ ವರ್ಗದವರು ಮಾಹಿತಿ ನೀಡಿದ್ದಾರೆ.

ಮೈಸೂರಿನ ಗೋಕುಲಂ ಬಡಾವಣೆಯ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. ಅನೂಪ್ ಅವರ ಅಕಾಲಿಕ ಮರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.












Click it and Unblock the Notifications