ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾಕ್ಕೆ ರಂಗೋತ್ಸವದ ಮೆರಗು

|
Google Oneindia Kannada News

ಮೈಸೂರು, ಅಕ್ಟೋಬರ್ 6: ಐತಿಹಾಸಿಕ ಮೈಸೂರು ದಸರಾಕ್ಕೆ ರಂಗೋತ್ಸವದ ಮೆರಗು ತುಂಬಲು ರಂಗಾಯಣ ಮುಂದಾಗಿದ್ದು, ನವರಾತ್ರಿಯಲ್ಲಿ ನಾಟಕಗಳ ಸವಿಯನ್ನು ಪ್ರೇಕ್ಷಕರಿಗೆ ಉಣಬಡಿಸಲು ತಯಾರಿ ನಡೆಸಿದೆ.

ಈ ಬಾರಿ ರಂಗಾಸಕ್ತರಿಗೆ ಪ್ರತಿದಿನ ಎರಡರಂತೆ ಎಂಟು ನಾಟಕಗಳು ನಡೆಯಲಿದೆ. ರಂಗಾಯಣದಲ್ಲಿ ಮಾತ್ರ ನಾಟಕ ನಡೆಯಲಿದ್ದು, ಅ.7ರಿಂದ 14ರವರೆಗೆ 8 ದಿನಗಳ ದಸರಾ ರಂಗೋತ್ಸವದಲ್ಲಿ 8 ನಾಟಕಗಳು ಪ್ರದರ್ಶನಗೊಳ್ಳಲಿವೆ.

ಇದೇ ವೇಳೆ ಕಳೆದ 6 ದಶಕಗಳಿಂದ ನಟಿಯಾಗಿ ನಿರ್ದೇಶಕಿಯಾಗಿ ಸಂಘಟಕರಾಗಿ ಆಧುನಿಕ ರಂಗಭೂಮಿ ಕಟ್ಟಿ ಬೆಳೆಸಿದ ರಾಮೇಶ್ವರಿ ವರ್ಮರಿಗೆ ಈ ವರ್ಷ ದಸರಾ ರಂಗ ಗೌರವ ನೀಡಲಾಗುತ್ತಿದೆ. ಸಮತೆಂತೋ ರಂಗಭೂಮಿ ಸಂಸ್ಥೆ ಸ್ಥಾಪಕ ಸದಸ್ಯರಾಗಿ, ಸಮುದಾಯ ತಂಡದಲ್ಲೂ ಸಕ್ರಿಯ ಕಾರ್ಯಕರ್ತೆಯಾಗಿ ದುಡಿದಿದ್ದಾರೆ. 1997ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.

Rangaayana Will Performed Dramas at the Mysuru Dasara Mahotsava

ಅ.7ರಂದು ದಸರಾ ರಂಗೋತ್ಸವ ಉದ್ಘಾಟನೆ
ರಾಮೇಶ್ವರಿ ವರ್ಮ ಅ.7ರಂದು ಸಂಜೆ 6 ಗಂಟೆಗೆ ದಸರಾ ರಂಗೋತ್ಸವವನ್ನು ಉದ್ಘಾಟಿಸಲಿದ್ದಾರೆ. ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ. ಸಿ. ಕಾರ್ಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಭಾಗವಹಿಸಲಿದ್ದಾರೆ.

ಅ. 7ರಂದು ಸಂಜೆ 6.30ಕ್ಕೆ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಶಿವಮೊಗ್ಗ ರಂಗಯಣ ತಂಡ ಡಾ. ಬೇಲೂರು ರಘುನಂದನ್ ರಚನೆ, ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದಲ್ಲಿ ಹತ್ಯಾಕಾಂಡ (ವಿದುರಾಶ್ವಥದ ವೀರಗಾಥೆ), ಅ. 8ರಂದು ಶಿವಮೊಗ್ಗ ರಂಗಾಯಣ ತಂಡ ಕೆ.ವಿ. ಸುಬ್ಬಣ್ಣ ರಚನೆ, ಬಿ.ಆರ್. ವೆಂಕಟರಮಣ ಐತಾಳ ನಿರ್ದೇಶನದ ಚಾಣಕ್ಯ ಪ್ರದರ್ಶನವಾಗಲಿದೆ. ಅ.9 ಮತ್ತು 10ರಂದು ರಂಗಾಯಣದ ಭೂಮಿಗೀತದಲ್ಲಿ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಪರ್ವ ನಾಟಕ ಪ್ರದರ್ಶನವಾಗಲಿದೆ.

Rangaayana Will Performed Dramas at the Mysuru Dasara Mahotsava

ಸೂತ್ರಧಾರ ನಾಟಕ ಪ್ರದರ್ಶನ
ಅ.11 ಮತ್ತು 12ರಂದು ಸಂಜೆ 6.30ಕ್ಕೆ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಎಸ್. ರಾಮನಾಥ ರಚನೆ, ಆರ್.ಸಿ. ಧನಂಜಯ ನಿರ್ದೇಶನದ ಸಂವಿಧಾನದ ಆಶಯ ಪರಿಚಯಿಸುವ ಸೂತ್ರಧಾರ ನಾಟಕ ಪ್ರದರ್ಶನವಾಗಲಿದೆ. ಇದರಲ್ಲಿ ಪರಿಶಿಷ್ಟ ಜಾತಿ ಕಲಾವಿದರು ನಟಿಸುತ್ತಿದ್ದಾರೆ. ಅ.13 ಮತ್ತು 14ರಂದು ಭೂಮಿಗೀತ ರಂಗಮಂದಿರದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವೈದೇಹಿ ರಚನೆಯ, ಬಿ.ವಿ.ಕಾರಂತ ನಿರ್ದೇಶನದ ಮೂಕನ ಮಕ್ಕಳು ನಾಟಕವನ್ನು ರಂಗಾಯಣದ ಕಿರಿಯ ರೆಪರ್ಟರಿ ತಂಡ ಪ್ರದರ್ಶಿಸಲಿದೆ.

ರಂಗಾಯಣ ನಿರ್ದೇಶಕರು ಹೇಳುವುದೇನು?
ರಂಗಾಯಣ ನಿರ್ದೇಶಕ ಅಡ್ಡಂಡ. ಸಿ. ಕಾರ್ಯಪ್ಪ ಮಾತನಾಡಿ, ದಸರಾ ರಂಗೋತ್ಸವದ ಬಳಿಕ ಅ.23 ಮತ್ತು 24ರಂದು ಮಹಾ ರಂಗಪ್ರಯೋಗ ಪರ್ವ ನಾಟಕ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸರ್ಕಾರ ಅನುದಾನ ನೀಡಿದ ತಕ್ಷಣ ರಾಜ್ಯ ವ್ಯಾಪಿ ಪ್ರದರ್ಶನಕ್ಕೆ ವೇಳಾಪಟ್ಟಿ ರೂಪಿಸಲಾಗುವುದು. ರಂಗಾಯಣ ಕಮರ್ಷಿಯಲ್ ಕ್ಷೇತ್ರವಲ್ಲ. ಟಿಕೆಟ್ ದರ ನಿಗದಿಪಡಿಸಿಯೇ ನಾಟಕ ಪ್ರದರ್ಶನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಅದಕ್ಕೆ ಮಹತ್ವ ಇರುವುದಿಲ್ಲ.

Rangaayana Will Performed Dramas at the Mysuru Dasara Mahotsava

ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪರ ಪರ್ವ ಕಾದಂಬರಿ ಮಹಾರಂಗ ಪ್ರಯೋಗ 14 ಪ್ರದರ್ಶನ ಪೂರ್ಣಗೊಂಡಿದ್ದು, 4481ಕ್ಕೂ ಹೆಚ್ಚು ರಂಗಾಸಕ್ತರು ವೀಕ್ಷಿಸಿ ಯಶಸ್ಸು ಕೊಟ್ಟಿದ್ದಾರೆ. ರಂಗಾಯಣದ ಇತಿಹಾಸದಲ್ಲೇ ಅತಿ ಹೆಚ್ಚಿನ ಪ್ರೇಕ್ಷಕರು ವೀಕ್ಷಣೆ ಮಾಡಿರುವ ನಾಟಕವಾಗಿರುವುದು ದಾಖಲಾಗಿದೆ. ರಾಜ್ಯ ಸರ್ಕಾರ ಪರ್ವ ನಾಟಕ ಸಿದ್ಧತೆಗೆ 50 ಲಕ್ಷ ರೂ. ಅನುದಾನ ನೀಡಿತು.

ಈ ಅನುದಾನದಲ್ಲಿ ಶೇ.65ರಷ್ಟು ಹಣವನ್ನು ಕಲಾವಿದರ ಸಂಭಾವನೆಗೆ ನೀಡಲಾಗಿದೆ. ರಂಗ ಸಜ್ಜಿಕೆ ನಿರ್ಮಾಣ, ಪ್ರಸಾಧನ, ಪರಿಕರ, ಪ್ರಚಾರ ಸಾಮಗ್ರಿ ಎಲ್ಲ ಸೇರಿ ಒಟ್ಟು 58 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಅನುದಾನ ಕೊರತೆ ನಡುವೆಯೂ ಪರ್ವ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.

ರಾಜ್ಯ ಸರ್ಕಾರ ಪ್ರತಿ ವರ್ಷ ರಂಗಾಯಣಕ್ಕೆ 3 ಕೋಟಿ ರೂ. ಅನುದಾನ ನೀಡುತ್ತಿತ್ತು. ಕಳೆದ ವರ್ಷ 60 ಲಕ್ಷ ರೂ. ಮಾತ್ರ ನೀಡಿತು. ಈ ಹಣದಲ್ಲಿಯೇ ಪರ್ವ ನಾಟಕಕ್ಕೆ 8 ಲಕ್ಷ ರೂ. ಬಳಸಿಕೊಳ್ಳಲಾಗಿದೆ. 30 ಕಲಾವಿದರಿಗೆ 18 ಸಾವಿರದಂತೆ ಮಾಸಿಕ ವೇತನ ನೀಡಲಾಗಿದೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಸರಳ ದಸರಾಕ್ಕೆ ರಂಗೋತ್ಸವ ರಂಗು ರಂಗಾಸಕ್ತರಿಗೆ ಉತ್ಸಾಹ ತುಂಬಲಿರುವುದಂತು ಖಚಿತ.

English summary
Mysuru Dasara 2021: Rangaayana will Performed Dramas at the Mysuru Dasara Mahotsava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X