ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸತೊಡಕಿಗೆ ಮೈಸೂರಿನಲ್ಲಿ ಕೋಳಿ ಮಾಂಸ ಮಾರುತ್ತಿದ್ದ ವ್ಯಕ್ತಿ ಬಂಧನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 26: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮಾಂಸ ಮಾರಾಟವನ್ನು ನಿಷೇಧಿಸಿದ್ದರೂ ಇಲ್ಲಿನ ಟೆರೆಷಿಯನ್ ಕಾಲೇಜು ಬಳಿ ಮನೆಯೊಂದರಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸ ತೊಡಕಿನ ಬಾಡೂಟಕ್ಕೆ ಕೊರೊನಾ, ಹಕ್ಕಿಜ್ವರ ಅಡ್ಡಿಯಾಗಿದ್ದು, ಮಾಂಸ ಮಾರಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಎಲ್ಲಾ ಮಾಂಸದ ಅಂಗಡಿಗಳನ್ನು ಮುಚ್ಚಲಾಗಿದೆ.

Recommended Video

The Indian soldier advised people to take seriously the lockdown | Stay Home | Stay Safe

ಮೈಸೂರಿನಲ್ಲೀಗ ಹಕ್ಕಿಜ್ವರ; ಕೋಳಿ, ಪಕ್ಷಿಗಳನ್ನು ಕೊಲ್ಲಲು ನಿರ್ಧಾರಮೈಸೂರಿನಲ್ಲೀಗ ಹಕ್ಕಿಜ್ವರ; ಕೋಳಿ, ಪಕ್ಷಿಗಳನ್ನು ಕೊಲ್ಲಲು ನಿರ್ಧಾರ

ಕೆಲವು ಕಡೆ ಲಾಕ್ ಡೌನ್ ನಡುವೆಯೂ ಚಿಕನ್‌ ಸ್ಟಾಲ್ ಮಾಲೀಕರು ಕದ್ದು ಮುಚ್ಚಿ ಮಾಂಸ ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಮನೆಯವರು ಚಿಕನ್‌ ಆರ್ಡರ್‌ ನೀಡಿದರೆ ಮನೆಗೇ ಕಳಿಸಿಕೊಡುವ ಚಿಕನ್‌ ಅಂಗಡಿ ಮಾಲೀಕರು ಗೌಪ್ಯವಾಗಿ ಮಾರಾಟ ಮಾಡುತ್ತಿದ್ದಾರೆ. ಹೇಗೂ 12 ಗಂಟೆಗಳವರೆಗೆ ಜನರಿಗೆ ಅವಶ್ಯ ವಸ್ತು ಖರೀದಿಸಲು ಅನುವು ಮಾಡಿಕೊಟ್ಟಿರುವುದರಿಂದ ಚಿಕನ್‌ ಕೂಡ ಸೇಲ್ ಆಗುತ್ತಿದೆ.

Police Arrested Man Who Is Selling Chicken Meat In Mysuru

ಯುಗಾದಿಯ ಮರು ದಿನ ಹೊಸ ತೊಡಕಿನ ಹಿನ್ನಲೆಯಲ್ಲಿ ಮಾಂಸಕ್ಕಾಗಿ ಭಾರೀ ಡಿಮ್ಯಾಂಡ್ ಬಂದಿದ್ದು, ಟೆರೇಷಿಯನ್ ಕಾಲೇಜು ಬಳಿ ಮನೆಯೊಳಗೆ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ವ್ಯಾಪಾರ ನಡೆಯುತ್ತಿದ್ದು, ಮಾಂಸ ಖರೀದಿಗೆ ಮಾಂಸ ಪ್ರಿಯರು ಮುಗಿಬಿದ್ದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಲನಹಳ್ಳಿ ಪೊಲೀಸರು, ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರಿನ ಬಹತೇಕ ಕಡೆ ಎಲ್ಲಾ ಮಾಂಸದ ಅಂಗಡಿಗಳು ಸಂಪೂರ್ಣ ಮುಚ್ಚಿವೆ. ದೇವರಾಜ ಮಾರುಕಟ್ಟೆಯ ಬಳಿ ಇರುವ ಬೋಟಿ ಬಜಾರ್ ನಲ್ಲಿ ಹತ್ತಾರು ಮಾಂಸದಂಗಡಿಗಳಿದ್ದು, ಮಾಂಸದಂಗಡಿ ತೆರೆಯದ ಹಿನ್ನಲೆ ಬಿಕೋ ಎನ್ನುತ್ತಿದೆ. ಮೀನು ಮಾರಾಟಕ್ಕೆ ಅವಕಾಶ ನೀಡಿದರೂ, ಮೀನು ಮಾರಾಟದ ಅಂಗಡಿಗಳು ತೆರೆದಿಲ್ಲ.

English summary
Police have arrested a man who is selling chicken meat In between lockdown in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X