ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸವರ್ಷಾಚರಣೆ: ಮೈಸೂರಿನಲ್ಲಿ ಒಂದೇ ದಿನಕ್ಕೆ 25 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮದ್ಯ ಮಾರಾಟ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್‌, 01: ಹೊಸ ವರ್ಷ ಆಚರಣೆ ನೆಪದಲ್ಲಿ ಮೈಸೂರಿನಲ್ಲಿ ಮದ್ಯ ಮಾರಾಟ ಜೋರಾಗಿಯೇ ನಡೆದಿದೆ. ನಗರದ ಹಲವು ಬಾರ್‌ಗಳಲ್ಲಿ ಸಾರ್ವಜನಿಕರು ಮದ್ಯ ಖರೀದಿಸುತ್ತಿದ್ದ ದೃಶ್ಯ ಶನಿವಾರ ಸಾಮಾನ್ಯವಾಗಿತ್ತು. ಮೈಸೂರು ಜಿಲ್ಲೆಯಲ್ಲಿ 25 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮದ್ಯ ಮಾರಾಟವಾಗಿರುವ ನಿರೀಕ್ಷೆ ಇದೆ. ಮೈಸೂರು ಜಿಲ್ಲೆಯಲ್ಲಿ ಪರವಾನಗಿ ಹೊಂದಿರುವ 375 ಮದ್ಯ ಮಾರಾಟ ಕೇಂದ್ರಗಳಿವೆ. ಅದರೊಂದಿಗೆ 50ಕ್ಕೂ ಹೆಚ್ಚು ಎಂಎಸ್‌ಐಎಲ್ ಕೇಂದ್ರಗಳಿವೆ. ಈ ಎಲ್ಲಾ ಕೇಂದ್ರಗಳಲ್ಲೂ ಡಿಸೆಂಬರ್‌ 30ರಿಂದಲೇ ವ್ಯಾಪಾರ ಜೋರಾಗಿದೆ.

ಹೊಸ ವರ್ಷದ ಸಂಭ್ರಮಾಚರಣೆಗೆ ಡಿಸೆಂಬರ್‌ 31ರಂದು 25 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಎಸ್. ಗುರುಸ್ವಾಮಿ ತಿಳಿಸಿದ್ದಾರೆ. ನಗರದ ಹೋಟೆಲ್ ಉದ್ಯಮಕ್ಕೆ ಈ ಬಾರಿ ಹೊಸ ವರ್ಷಾಚರಣೆ ಹೊಸ ಚೈನತ್ಯ ನೀಡಿದೆ. ಎಲ್ಲಾ ಹೋಟೆಲ್‌ಗಳು ಪ್ರವಾಸಿಗರಿಂದ ಭರ್ತಿಯಾಗಿದ್ದು, ಎರಡು ವರ್ಷಗಳಿಂದ ಕ್ಷೀಣಿಸಿದ್ದ ವಿದೇಶಿ ಹಾಗೂ ರಾಜ್ಯ, ಅಂತಾರಾಜ್ಯ ಪ್ರವಾಸಿಗರು ಮತ್ತೆ ಅರಮನೆ ನಗರಿಯತ್ತ ಧಾವಿಸುತ್ತಿದ್ದಾರೆ. ಆದ್ದರಿಂದ ''ನಗರದ ಎಲ್ಲಾ ಹೋಟೆಲ್‌ಗಳು ಭರ್ತಿಯಾಗಿವೆ. ಕ್ಲಬ್‌ಗಳಲ್ಲಿ ಬುಕಿಂಗ್ ಸ್ವಲ್ಪ ಕಡಿಮೆ ಇದೆ. ಆದರೆ ನೇರವಾಗಿ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ಆತಿಥ್ಯೋದ್ಯಮಕ್ಕೆ ಈ ಬಾರಿ ಹೊಸವರ್ಷಾಚರಣೆ ಬೂಸ್ಟರ್ ನೀಡಿದೆ,'' ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.

New Year celebration; More than Rs 25 crore Liquor sale in Mysuru on december 31

New year 2023: ಮೈಸೂರಿನ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗಾಗಿ ಸಿದ್ಧವಾದ 2 ಲಕ್ಷ ಲಡ್ಡುNew year 2023: ಮೈಸೂರಿನ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗಾಗಿ ಸಿದ್ಧವಾದ 2 ಲಕ್ಷ ಲಡ್ಡು

ತುಂಬಿ ತುಳುಕಿದ ಹೋಟೆಲ್‌ಗಳು

ನಗರದಲ್ಲಿ 1500ಕ್ಕೂ ಹೆಚ್ಚು ಹೋಟೆಲ್, ಕ್ಲಬ್, ಲಾಡ್ಜ್‌ಗಳಿವೆ. ಡಿಸೆಂಬರ್‌ 20ರಿಂದಲೇ ಈ ಎಲ್ಲಾ ಹೋಟೆಲ್‌ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ನವೆಂಬರ್‌ನಿಂದ ಮಾರ್ಚ್ ನಡುವಿನ ಅವಧಿಯಲ್ಲಿ ಸಾಮಾನ್ಯವಾಗಿ ಮೈಸೂರು ಭಾಗಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಈ ಹಿಂದೆ ಗುಂಪುಗಳಾಗಿ ವಿದೇಶಿಗರು ಭೇಟಿ ನೀಡುತ್ತಿದ್ದರು. ಇದೀಗ ಮತ್ತೆ ಆ ದಿನಗಳು ಮರುಕಳಿಸಿವೆ.

New Year celebration; More than Rs 25 crore Liquor sale in Mysuru on december 31

ಹೋಟೆಲ್‌ಗಳಲ್ಲಿ ವಿಶೇಷ ಕಾರ್ಯಕ್ರಮ

ಕ್ರಿಸ್‌ಮಸ್‌ನಿಂದಾಗಿ ಸಾಲು ರಜೆ, ಮಾತ್ರವಲ್ಲದೇ ಹೊಸ ವರ್ಷಾಚರಣೆಯೂ ವಾರಾಂತ್ಯವಾದ ಶನಿವಾರ, ಭಾನುವಾರ ಬಂದಿರುವುದು ಪ್ರವಾಸ ಪ್ರಿಯರಿಗೆ ಅನುಕೂಲವಾದಂತಾಗಿದೆ. ಹೋಟೆಲ್‌ಗಳಲ್ಲಿ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಕಂಡುಬಂದಿದೆ. ವಿವಿಧ ಬಗೆಯ ಭಕ್ಷ್ಯ ಭೋಜನ ವ್ಯವಸ್ಥೆ ಮಾಡಿದ್ದು, ಆಹಾರ ಪ್ರಿಯರಿಗೆ ಇದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರೂ ತಪ್ಪಾಗಲಾರದು. ಪಾರ್ಟಿಗಳಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡಲಾಗಿದ್ದು, ವ್ಯವಸ್ಥೆಗೆ ಅನುಗುಣವಾಗಿ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಹೊಸ ವರ್ಷದ ಪಾರ್ಟಿಗಳಲ್ಲಿ ಪಾಲ್ಗೊಳ್ಳಲು ಟಿಕೆಟ್ ಕಾಯ್ದಿರಿಸುವ ಕಾರ್ಯವೂ ನಡೆದಿದೆ.

English summary
New Year celebration in Mysuru: More than Rs 25 crore Liquor sale in Mysuru on december 31,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X