ಮೈಸೂರು: ಅವಾಜ್ ಹಾಕಿದ ರೌಡಿಶೀಟರ್ ಗೆ ಟೆಕ್ಕಿಗಳಿಂದ ತಕ್ಕ ಶಾಸ್ತಿ!
ಮೈಸೂರು, ಮಾರ್ಚ್. 05 : ರೌಡಿ ಶೀಟರ್ ಮೇಲೆಯೇ ಟೆಕ್ಕಿಗಳು ಹಲ್ಲೆ ಮಾಡಿರೋ ಘಟನೆ ಮೈಸೂರಿನ ಬೋಗಾದಿ ರಿಂಗ್ ರಸ್ತೆ ಬಳಿ ನಡೆದಿದೆ.
ಅಭಿ ಎಂಬ ರೌಡಿ ಶೀಟರ್ ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಪೆಟ್ರೋಲ್ ಖಾಲಿಯಾಗಿ ಬೈಕ್ ತಳ್ಳಿಕೊಂಡು ಹೋಗುತ್ತಿದ್ದ. ಈ ವೇಳೆ ಅದೇ ರಸ್ತೆಯಲ್ಲಿ ಹೊರಟಿದ್ದ ಟೆಕ್ಕಿಗಳಿಗೆ ಬೈಕ್ ತಳ್ಳುವಂತೆ ಅಭಿ ಅವಾಜ್ ಹಾಕಿದ್ದಾನೆ. ಇದಕ್ಕೆ ಟೆಕ್ಕಿಗಳು ಒಪ್ಪದಿದ್ದಾಗ ಅವರ ಕನ್ನಡಕವನ್ನು ಕಿತ್ತುಕೊಂಡಿದ್ದಲ್ಲದೇ ನಾನು ರೌಡಿ ಎಂದು ಅಲ್ಲಿರುವ ಕಲ್ಲುಗಳನ್ನೆತ್ತಿ ಅವರ ಮೇಲೆ ಬಿಸಾಡಿದ್ದಾನೆ.
ಇದರಿಂದ ಭಯಭೀತರಾದ ಯುವಕರು ಸಮೀಪದಲ್ಲಿ ಎಳನೀರು ಮಾರುತ್ತಿದ್ದ ವ್ಯಕ್ತಿಯ ಬಳಿ ಇದ್ದ ಕತ್ತಿಯನ್ನು ತೆಗೆದುಕೊಂಡು ತಮ್ಮ ಪ್ರಾಣ ರಕ್ಷಣೆಗಾಗಿ ರೌಡಿಶೀಟರ್ ಅಭಿಯ ಕೈಕಾಲುಗಳಿಗೆ ತಿವಿದಿದ್ದಾರೆ.

ಅದೇ ಮಾರ್ಗದಲ್ಲಿ ಗಸ್ತು ತಿರುಗುತ್ತಿದ್ದ ಪಿಸಿಆರ್ ವಾಹನ ಪೊಲೀಸ್ ಸಿಬ್ಬಂದಿಗಳು ಹಲ್ಲೆಗೊಳಗಾದ ಅಭಿಯನ್ನು ನೋಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಲ್ಲೆಗೊಳಗಾದ ಅಭಿ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆಗೈದ ಇಬ್ಬರು ಟೆಕ್ಕಿಗಳಾದ ಮೋಹಿತ್ ಹಾಗೂ ತಮಿಳರಸನ್ ನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.












Click it and Unblock the Notifications