ಮೈಸೂರು: ಬುದ್ಧಿ ಹೇಳಿದ ವಿದ್ಯಾರ್ಥಿಗೆ ಇರಿದ ಬಾಲಕ
ಮೈಸೂರು, ಏ. 16: ದೂರದ ಗುಲ್ಬರ್ಗದಿಂದ ಇಂಜಿನಿಯರ್ ಆಗುವ ಕನಸು ಹೊತ್ತು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದ ಯುವಕ ಕ್ಷುಲ್ಲಕ ಕಾರಣಕ್ಕೆ ಪ್ರಾಣ ಕಳೆದುಕೊಂಡಿದ್ದಾನೆ. ನಿಮ್ಮ ಮಗ ದಾರಿ ತಪ್ಪುತ್ತಿದ್ದಾನೆ, ಸ್ವಲ್ಪ ಬುದ್ಧಿ ಹೇಳಿ ಎಂದು ಹೇಳಿದ್ದೇ ಆತನ ಜೀವಕ್ಕೆ ಸಂಚಕಾರ ತಂದಿದೆ.
16 ವರ್ಷದ ಬಾಲಕನೊಬ್ಬ ತನ್ನ ರೂಮ್ ಮೇಟ್ ನನ್ನೇ ಕೊಲೆ ಮಾಡಿ ಪರಾರಿಯಾಗಿದ್ದಾನೆ. ನಗರದ ಟಿಕೆ ಬಡಾವಣೆಯಲ್ಲಿ ಗುರುವಾರ ಮಧ್ಯಾಹ್ನ ಅಮಾನುಷ ಘಟನೆಯೊಂದು ನಡೆದಿದೆ. ಗುಲ್ಬರ್ಗಾ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಮೋಹನ್ (22) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ 16 ವರ್ಷದ ಬಾಲಕ ನಾಪತ್ತೆಯಾಗಿದ್ದಾನೆ.[ಮೈಸೂರಲ್ಲಿ ಸಿಕ್ಕರು ಅಂತರರಾಜ್ಯ ಕಳ್ಳರು]

ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ ಮೋಹನ್ ಗೆ ಆತನ ರೂಮ್ ಮೇಟ್ ನಿಂದಲೇ ತನ್ನಪ್ರಾಣ ಹೋಗುತ್ತದೆ ಎಂಬುದು ಗೊತ್ತಿರಲಿಲ್ಲ. ಕೊಲೆ ಮಾಡಿ ಪರಾರಿಯಾಗಿರುವ ಬಾಲಕನ ತಾಯಿ ದೂರವಾಣಿ ಕರೆ ಮಾಡಿದ್ದಾಗ ನಿಮ್ಮ ಮಗ ದಾರಿ ತಪ್ಪುತ್ತಿದ್ದಾನೆ ಸ್ವಲ್ಪ ಬುದ್ಧಿ ಹೇಳಿ ಎಂದು ಮೋಹನ್ ಹೇಳಿದ್ದೇ ತಪ್ಪಾಗಿದೆ. [ಮೈಸೂರಿನಿಂದ ಬದನವಾಳುಗೆ ಪಾದಯಾತ್ರೆ ಆರಂಭ]
ತನ್ನ ಬಗ್ಗೆ ತಾಯಿಯ ಬಳಿ ಮೋಹನ್ ದೂರು ಹೇಳಿದ್ದಾನೆ ಎಂದು ಆಕ್ರೋಶಗೊಂಡ ಬಾಲಕ ಚಾಕುವಿನಿಂದ ಮೋಹನ್ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಬಾಲಕನ ಪತ್ತೆಗಾಗಿ ಜಾಲ ಬೀಸಿದ್ದಾರೆ.












Click it and Unblock the Notifications