Mysuru Dasara 2025 Jamboo Savari: ಮೈಸೂರು ದಸರಾ ಜಂಬೂ ಸವಾರಿ: ಕಾರ್ಯಕ್ರಮದ ವಿವರಗಳು
Mysuru Dasara 2025 Jamboo Savari: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ಬರೀ ಕರ್ನಾಟಕ ಮಾತ್ರವಲ್ಲದೆ, ದೇಶದ, ವಿದೇಶಗಳಿಂದ ಭಕ್ತರು ಆಗಮಿಸಿದ್ದಾರೆ. ಹಾಗಾದ್ರೆ, ಎಷ್ಟು ಗಂಟೆಗೆ ಯಾವ ಕಾರ್ಯಕ್ರಮ ಇರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ನಾಡಹಬ್ಬ ಮೈಸೂರು ದಸರಾ 2025 ಜಂಬೂ ಸವಾರಿಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಅಭಿಮನ್ಯು ಆನೆ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಯನ್ನು ರಾಜಬೀದಿಯಲ್ಲಿ ಹೊತ್ತು ಸಾಗಲಿದ್ದು, ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದುಬಂದಿದೆ.

ಇಂದು (ಅಕ್ಟೋಬರ್ 2) ವಿಜಯದಶಮಿಯ 416ನೇ ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. 6ನೇ ಬಾರಿ ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊರಲು ಸಜ್ಜಾಗಿದ್ದಾನೆ. ಈ ಮೂಲಕ ಅರಮನೆ ಆವರಣದಲ್ಲಿನ ಐತಿಹಾಸಿಕ ಜಂಬೂಸ ವಾರಿಗೆ ಸಾಂಸ್ಕೃತಿಕ ರಾಜಧಾನಿ ಮೈಸೂರು ಸಹ ಸಜ್ಜಾಗಿದೆ.
ನಾಡಹಬ್ಬ ಮೈಸೂರು ದಸರಾದ ಸಂಭ್ರಮ ಕೊನೆಘಟ್ಟಕ್ಕೆ ಬಂದಯ ತಲುಪಿದೆ. ಇಂದು 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡಿ ನಾಡಿನ ಗಮನ ಸೆಳೆಯಲಿದ್ದು, ಈ ಅಂಬಾರಿಯನ್ನು 6ನೇ ಬಾರಿಗೆ ಹೊತ್ತ ಖ್ಯಾತಿಗೆ ಕ್ಯಾಪ್ಟನ್ ಅಭಿಮನ್ಯು ಸಾಕ್ಷಿಯಾಗಲಿದ್ದಾನೆ. ಹಾಗಾದ್ರೆ, ಎಷ್ಟು ಗಂಟೆಗೆ ಯಾವ ಕಾರ್ಯಕ್ರಮ ಇರಲಿದೆ ಎನ್ನುವ ಪ್ರಶ್ನೆ ಬಹುತೇಕ ಮಂದಿಯದ್ದಾಗಿರುತ್ತದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ ನೋಡಿ.
ಕಾರ್ಯಕ್ರಮಗಳು ವಿವರಗಳು
* ಬೆಳಗ್ಗೆ 8 ಗಂಟೆಗೆ ಚಾಮುಂಡಿ ಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ
* 10:15ಕ್ಕೆ ಅರಮನೆಯಲ್ಲಿ ಉತ್ತರ ಪೂಜೆ, 10:45-11:00 ಗಂಟೆ ಜಟ್ಟಿ ಕಾಳಗ
* 11:20-11:45ರ ವರೆಗೆ ಅರಮನೆಯ ಭುವನೇಶ್ವರಿ ದೇಗುಲಕ್ಕೆ ವಿಜಯಯಾತ್ರೆ
* ಮಧ್ಯಾಹ್ನ 01:01-01:18 ಗಂಟೆಯ ನಡುವೆ ಶುಭ ಧನುರ್ ಲಗ್ನದಲ್ಲಿ ನಂದಿ ಧ್ವಜಪೂಜೆ
* ಸಂಜೆ 04:42ರಿಂದ 05:16 ಗಂಟೆಯವರೆಗೆ ಕುಂಭ ಲಗ್ನದಲ್ಲಿ ಜಂಬೂಸವಾರಿ
* ನಾಡದೇವತೆಗೆ ಚಾಮುಂಡಿ ಯಾತಿಗೆ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಂದ ಪುಷ್ಪಾರ್ಚನೆ
* ಅರಮನೆಯಿಂದ ಬಲರಾಮ ದ್ವಾರ, ಚಾಮರಾಜ ವೃತ್ತ, ಕೆ.ಆರ್. ಸರ್ಕಲ್, ಹೈವೇ ಸರ್ಕಲ್ ಮೂಲಕ ಬನ್ನಿಮಂಟಪ ಸಾಗಲಿರುವ ಜಂಬೂಸವಾರಿ.
* ಸಂಜೆ 7 ಗಂಟೆಗೆ ರಾಜ್ಯಪಾಲ, ಸಿಎಂ ಸಮ್ಮುಖದಲ್ಲಿ ಪಂಜಿನ ಕವಾಯತು
ಇನ್ನು ಈ ಬಾರಿ ಕ್ಯಾಪ್ಟನ್ ಅಭಿಮನ್ಯು ಜೊತೆ ಒಟ್ಟು ಈ ಆನೆಗಳು ಜಂಬೂ ಸವಾರಿಯಲ್ಲಿ ಭಾಗಿ ಆಗಲಿವೆ. ಕುಮ್ಕಿ ಆನೆಗಳಾದ ಕಾವೇರಿ ಹಾಗೂ ರೂಪ ಗಜಪಡೆ ಕ್ಯಾಪ್ಟನ್ ಅಭಿಮನ್ಯು ಜೊತೆಗೆ ಹೆಜ್ಜೆ ಹಾಕಲಿವೆ. ನಿಶಾನೆ ಆನೆಯಾಗಿ ಧನಂಜಯ, ನೋಪತ್ ಆನೆಯಾಗಿ ಗೋಪಿ ಹೆಜ್ಜೆ ಹಾಕಲಿವೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಸಿದ್ದು, ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಅರಮನೆ ಸುತ್ತಮುತ್ತ ಹಾಗೂ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಹದ್ದಿನ ಕಣ್ಣು ಇಡಲಾಗಿದೆ.
ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿಯಾಗುವ ಗಜಪಡೆ
ಅಂಬಾರಿ ಆನೆ: ಅಭಿಮನ್ಯು
ಕುಮ್ಕಿ ಆನೆಗಳು: ಕಾವೇರಿ, ರೂಪ
ನಿಶಾನೆ ಆನೆ: ಧನಂಜಯ
ನೌಫತ್ ಆನೆ: ಗೋಪಿ












Click it and Unblock the Notifications