ಮೈಸೂರಲ್ಲಿ ಹುಲಿ ಕಾಟ ಹೋಯ್ತು, ಚಿರತೆ ಕಾಟ ಶುರು
ಮೈಸೂರು, ನವೆಂಬರ್, 26: ಮೈಸೂರಿಗೂ ಪ್ರಾಣಿಗಳ ಉಪಟಳಕ್ಕೂ ಏನಿದೆಯೋ ನಂಟು ಗೊತ್ತಿಲ್ಲ. ಹುಲಿಯ ಕಾಟ ದೂರವಾದ ಸಂತೋಷದಲ್ಲೇ ಇರುವಾಗಲೇ ಪಿರಿಯಾಪಟ್ಟಣ ತಾಲೂಕಿನ ಮಲ್ಲಿನಾಥಪುರ ವ್ಯಾಪ್ತಿಯಲ್ಲಿ ಚಿರತೆ ಕಾಟ ಆರಂಭವಾಗಿದೆ.
ಸಾಕು ಪ್ರಾಣಿಗಳನ್ನು ತಿನ್ನುತ್ತಿರುವ ಚಿರತೆ ಗ್ರಾಮದಲ್ಲಿ ಭಯ ಹುಟ್ಟಿಸಿದ್ದು, ತೋಟದಲ್ಲಿ ಹೆಜ್ಜೆ ಗುರುತುಗಳು ಕಂಡು ಬಂದಿದೆ. ಅಲ್ಲದೇ ಮನೆಯಲ್ಲಿ ಕಟ್ಟಿಹಾಕಿರುವ ನಾಯಿಯನ್ನು ತಿಂದು ಹಾಕಿರುವುದರಿಂದ ಸುತ್ತಮುತ್ತಲ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.[ಚಿತ್ರಗಳು: ಎಚ್.ಡಿ.ಕೋಟೆಯಲ್ಲಿ ವ್ಯಾಘ್ರ ಗುಂಡೇಟಿಗೆ ಬಲಿ]

ಮಲ್ಲಿನಾಥಪುರದ ನಿವಾಸಿ ದೇವೇಗೌಡರವರ ಮಗ ಪುರುಷೋತ್ತಮ್ ಎಂಬುವವರು ತೋಟದಲ್ಲಿ ಕೆಲಸ ಮುಗಿಸಿ ನಾಯಿಯನ್ನು ತೋಟಕ್ಕೆ ಹೊಂದಿಕೊಂಡಂತಿರುವ ಮನೆಯ ಹೊರ ಆವರಣದಲ್ಲಿ ಕಟ್ಟಿಹಾಕಿ ಮಲಗಿದ್ದಾರೆ. ಮಧ್ಯರಾತ್ರಿ ವೇಳೆ ನಾಯಿ ಕಿರುಚಾಡುವ ಸದ್ದು ಕೇಳಿ ಎದ್ದು ಬಂದು ನೋಡಿದಾಗ ಸ್ಥಳದಲ್ಲಿ ನಾಯಿ ಇರಲಿಲ್ಲ.[ಬನ್ನೇರು ಘಟ್ಟದಲ್ಲಿ ಸದ್ಯದಲ್ಲೇ ಸಿಂಹ, ಜಿರಾಫೆ, ಜೀಬ್ರಾ ಕೇಜ್]
ಬೆಳಗಿನ ಜಾವ ತೋಟವನ್ನು ಸುತ್ತುಹಾಕಿ ನೋಡಿದಾಗ ಚಿರತೆ ನಾಯಿಯನ್ನು ಎಳೆದಾಡಿ ತಿಂದಿರುವುದು ಮತ್ತು ಚಿರತೆಯ ಹೆಜ್ಜೆ ಗುರುತುಗಳು ಕಂಡು ಬಂದಿದ್ದು, ತಕ್ಷಣ ತಾಲೂಕಿನ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚಿರತೆಯನ್ನು ಸೆರೆ ಹಿಡಿಯಲು ತೋಟದಲ್ಲಿ ಬೋನು ತಂದು ಇಟ್ಟಿದ್ದಾರೆ












Click it and Unblock the Notifications