ಇಲ್ಲೊಂದು ಸಂಸ್ಥೆ ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವಂತೆ ಮಾಡುತಂತೆ!
ಮೈಸೂರು, ಜನವರಿ.01 : ಕೌಶಲ್ಯಾಧಾರಿತ ತರಬೇತಿ ನೀಡಿದ ತಕ್ಷಣ ತರಬೇತಿ ಪಡೆದವರೆಲ್ಲ ಉದ್ಯೋಗಿಗಳಾಗುವುದಿಲ್ಲ. ನಿರುದ್ಯೋಗ ಸಮಸ್ಯೆಯೂ ಬಗೆ ಹರಿಯುವುದಿಲ್ಲ. ಬಹಳಷ್ಟು ಸಂಸ್ಥೆಗಳು ಗ್ರಾಮೀಣರಿಗೆ ಕೌಶಲ್ಯಾಧಾರಿತ ತರಬೇತಿ ನೀಡುತ್ತೇವೆ ಎಂದು ಬಿಂಬಿಸುತ್ತಾ ಅಲ್ಪಾವಧಿ ತರಬೇತಿ ನೀಡಿ ಕೈತೊಳೆದುಕೊಳ್ಳುತ್ತವೆ. ತರಬೇತಿ ಪಡೆದವರಿಗೆ ಅದರ ಪ್ರಯೋಜನವಾಗಿದೆಯಾ? ಎಂಬುದೇ ಅವರಿಗೆ ಗೊತ್ತಾಗುವುದಿಲ್ಲ. ಆದರೆ ಇಲ್ಲೊಂದು ಸಂಸ್ಥೆ ಸಂಪೂರ್ಣ ಭಿನ್ನವಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ಹ್ಯಾಂಡ್ ಪೋಸ್ಟ್ ಬಳಿಯಿರುವ ಮೈರಾಡ ಸಂಸ್ಥೆಯಲ್ಲಿ ಲಾರಸ್ ಎಡುಟೆಕ್(ಪ್ರೈ) ಕಂಪನಿ ಮಹತ್ವಾಕಾಂಕ್ಷೆ ಯೋಜನೆಯಡಿ 24 ಯುವಕ-ಯುವತಿಯರಿಗೆ ಮೊದಲ ಹಂತದ ಮೂರು ತಿಂಗಳ ಅವಧಿಯ ಹೋಟೆಲ್ ಮ್ಯಾನೇಜ್ಮೆಂಟ್ ಕೌಶಲ್ಯಾಧಾರಿತ ತರಬೇತಿ ನೀಡಿದೆ. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಏಜೆನ್ಸಿಯೇ ವಿವಿಧ ರಾಷ್ಟ್ರೀಯ-ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ನೀಡುತ್ತಿರುವುದು ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಆಶಾಕಿರಣವಾಗಿದೆ.[ಮೋದಿ ಕರ್ನಾಟಕ ಭೇಟಿ : ಕಾರ್ಯಕ್ರಮಗಳೇನು?]

ದೇಶದಲ್ಲಿ ನಿರುದ್ಯೋಗ ಸಮಸ್ಯೆ ದೂರವಾಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಮುಂದಾಗಿದ್ದು, ಸ್ಕಿಲ್ ಇಂಡಿಯಾ ಹುಟ್ಟುಹಾಕಿದೆ. ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರು ಜೀವನಾಧಾರ ಕೌಶಲ್ಯಾಧಾರಿತ ತರಬೇತಿ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಯುಕ್ತಾಶ್ರಯದಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಜಾರಿ ಮಾಡಿದೆ. ಈ ಮಹತ್ವಾಕಾಂಕ್ಷೆ ಯೋಜನೆ ಜಾರಿಯಾಗಿ ಅನೇಕ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರು ತರಬೇತಿ ಪಡೆದು ಉದ್ಯೋಗಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡೇ ಬಂದಿರುವ ಎಚ್.ಡಿ.ಕೋಟೆಯ ಗ್ರಾಮೀಣ ಪ್ರದೇಶದ ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ವತಿಯಿಂದ ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ ಯಶಸ್ವಿ ತರಬೇತಿ ಮುಗಿಸಿರುವ ಗ್ರಾಮೀಣ ಅಭ್ಯರ್ಥಿಗಳು ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ.[ಮೈಸೂರು ಶಿಡ್ಲು ಬೆಟ್ಟದಲ್ಲಿ ಹರಿಯುವ ನೀರು ಎಂದೂ ಬತ್ತೋದಿಲ್ಲ!]

ಪ್ರೌಢಶಾಲಾ ಹಂತದಲ್ಲೇ ಶಾಲೆ ಬಿಟ್ಟು ಮನೆಗಳಲ್ಲಿ ಉಳಿದ ಮತ್ತು ಕೂಲಿ ಕೆಲಸಗಳಿಗೆ ಹೋಗುತ್ತಿದ್ದ ಯುವಕ-ಯುವತಿಯವರಿಗೆ ಈ ತರಬೇತಿ ಸಹಕಾರಿಯಾಗಿದ್ದು ಅವರಲ್ಲಿಯೂ ಹೊಸ ಬದುಕಿನ ಭರವಸೆ ಆರಂಭವಾಗಿದೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಪ್ರಥಮ ಹಂತದಲ್ಲೇ ತಾಂತ್ರಿಕವಾಗಿ ಚುರುಕುಗೊಳಿಸಲು, ಸ್ಪೀಕಿಂಗ್ ಇಂಗ್ಲಿಷ್ ತರಬೇತಿ, ಕಂಪ್ಯೂಟರ್ ತರಬೇತಿ ಆ ನಂತರ ಅಭ್ಯರ್ಥಿಗಳ ವ್ಯಕ್ತಿತ್ವ ವಿಕಸನಗೊಳಿಸಿ ವಿಶಿಷ್ಟ ರೀತಿಯಲ್ಲಿ ಮೊಬೈಲ್ ಟ್ಯಾಬ್ಲೆಟ್ ಗಳ ಮೂಲಕ ತರಬೇತಿ ನೀಡಲಾಗುತ್ತಿದೆ.[2015 ಬೆಂಗಳೂರ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾದ ವರ್ಷ]
ಈಗಾಗಲೇ ಇಲ್ಲಿ ತರಬೇತಿ ಪಡೆದಿರುವ ಯುವಕ-ಯುವತಿಯರ ಪೈಕಿ ಕೆಲವರು ತಾವೇ ಸಣ್ಣ ಪ್ರಮಾಣದಲ್ಲಿ ಉದ್ದಿಮೆ ಪ್ರಾರಂಭಿಸುವ ಆತ್ಮವಿಶ್ವಾಸ ಹೊಂದಿದ್ದಾರೆ. ಮತ್ತೆ ಕೆಲವರು ಬೇರೆ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಕೂಲಿ ಕೆಲಸ ಮಾಡುತ್ತಾ ಅದೇ ಬದುಕು ಎಂದು ನಂಬಿದ್ದ ಪಡುಕೋಟೆ ಗ್ರಾಮದ ಯುವತಿ ಜಾಯ್ಸ್ ಲೀಡಿಯಾ ತರಬೇತಿಯಿಂದ ಬೇರೆ ಕಡೆ ಉದ್ಯೋಗ ಮಾಡುವ ಧೈರ್ಯ ಮತ್ತು ಅದಕ್ಕೆ ಬೇಕಾದ ತರಬೇತಿ ಸಿಕ್ಕಿದೆ. ಒಂದು ವೇಳೆ ಬೇರೆ ಕಡೆ ಉದ್ಯೋಗಕ್ಕೆ ಹೋಗದಿದ್ದರೂ ಸ್ವಂತ ಉದ್ದಿಮೆ ಮಾಡುವ ವಿಶ್ವಾಸ ಬಂದಿರುವುದಾಗಿ ಹೇಳುತ್ತಾರೆ.












Click it and Unblock the Notifications