ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಜಿಲ್ಲಾ ಪಂಚಾಯತ್ ನಲ್ಲೂ ಮೈತ್ರಿಯಲ್ಲಿ ಬಿರುಕು ಸಾಧ್ಯತೆ!

|
Google Oneindia Kannada News

ಮೈಸೂರು, ಫೆಬ್ರವರಿ 8:ಅತಂತ್ರವಾಗಿರುವ ಜಿಲ್ಲಾ ಪಂಚಾಯಿತಿಯ ಗದ್ದುಗೆ ಹಿಡಿಯಲು ಜೆಡಿಎಸ್ ಹಿಂದಿನಂತೆ ಬಿಜೆಪಿ ಜೊತೆ ಹೆಜ್ಜೆ ಹಾಕುವ ಸಾಧ್ಯತೆಗಳು ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ಅಧಿಕವಾಗಿದೆ. ಈ ಮಧ್ಯೆ ರಾಜ್ಯ ಮೈತ್ರಿ ಸರ್ಕಾರದ ಧರ್ಮ ಪಾಲಿಸಬೇಕು ಎಂಬ ಒತ್ತಡದ ತಂತ್ರಗಾರಿಕೆ ಕಾಂಗ್ರೆಸ್ ಗೆ ಮುಂದಾಗಿದೆ.

ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚಿಸಲು ಕಾಂಗ್ರೆಸ್ ಬೆಂಬಲ ಪಡೆದ ರೀತಿ, ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳಲ್ಲಿ ಉಭಯ ಪಕ್ಷಗಳು ಜೊತೆಯಾಗಿವೆ. ಪಾಲಿಕೆಯಲ್ಲೂ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಇನ್ನು ಉಳಿದಿರುವ ಜಿಲ್ಲಾ ಪಂಚಾಯಿತಿಯಲ್ಲೂ ಕಾಂಗ್ರೆಸ್ ಜತೆಗೆ ಜೆಡಿಎಸ್ ಹೆಜ್ಜೆ ಹಾಕಬೇಕು ಎಂದು ಕಾಂಗ್ರೆಸ್ ಒತ್ತಡ ಹೇರುತ್ತಿದೆ.

ದಿಢೀರ್ ಬೆಳವಣಿಗೆಯಲ್ಲಿ ಮೈಸೂರಿನ ಜಿ.ಪಂ. ಚುನಾವಣೆ ಮುಂದೂಡಿಕೆದಿಢೀರ್ ಬೆಳವಣಿಗೆಯಲ್ಲಿ ಮೈಸೂರಿನ ಜಿ.ಪಂ. ಚುನಾವಣೆ ಮುಂದೂಡಿಕೆ

ಇದಕ್ಕೆ ಬಿಜೆಪಿ ಈಚೆಗೆ ನಡೆಯಿತು ಎನ್ನಲಾದ ಆಪರೇಷನ್ ಕಮಲದ ಪ್ರಯತ್ನವನ್ನು ಉದಾಹರಣೆಯಾಗಿ ನೀಡುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ನಾಲ್ಕು ಮಂದಿ ಆಕಾಂಕ್ಷಿಗಳು ಇದ್ದಾರೆ. ಜಿಪಂನಲ್ಲಿ ಜೆಡಿಎಸ್ ಗಿಂತ ಕಾಂಗ್ರೆಸ್ ಸದಸ್ಯರು ಹೆಚ್ಚಿದ್ದು, ಕಳೆದ ಬಾರಿ ಜೆಡಿಎಸ್ ನವರು ಅಧ್ಯಕ್ಷರಾಗಿದ್ದರು.

ರಾಜ್ಯದಲ್ಲಿ ಸರ್ಕಾರ ರಚನೆಗೆ ಬೆಂಬಲ ನೀಡಿರುವುದರಿಂದ ಸಹಜವಾಗಿಯೇ ಕಡಿಮೆ ಸಂಖ್ಯೆಯಲ್ಲಿ ಇದ್ದರೂ, ಕಾಂಗ್ರೆಸ್ ತನಗೆ ಅಧ್ಯಕ್ಷ ಪದವಿ ಬೇಕು ಎಂದು ಕೇಳುವ ಸಾಧ್ಯತೆಯೇ ಅಧಿಕವಾಗಿದೆ. ಮುಂದೆ ಓದಿ...

ಬಿಜೆಪಿ ಜೊತೆಗಿರುವುದೇ ಸರಿ

ಬಿಜೆಪಿ ಜೊತೆಗಿರುವುದೇ ಸರಿ

ಈಗಾಗಲೇ ರಾಜ್ಯಮಟ್ಟದ ನಾಯಕರು ಜೆಡಿಎಸ್ ವರಿಷ್ಠರನ್ನು ಒಪ್ಪಿಸಲು ಮುಂದಾಗಿದ್ದಾರೆ. ಆದರೆ, ಜೆಡಿಎಸ್ ನಲ್ಲಿ ಬಹುತೇಕ ಸದಸ್ಯರಿಗೆ ಕಾಂಗ್ರೆಸ್ ಜತೆ ಮೈತ್ರಿಗೆ ಮನಸ್ಸಿಲ್ಲ. ಅವರು ಬಿಜೆಪಿ ಜೊತೆಗಿರುವುದೇ ಸರಿ ಎಂದು ಹೇಳುತ್ತಿದ್ದಾರೆ.

 ಮೈಸೂರು ಜಿಪಂ ಹಂಗಾಮಿ ಅಧ್ಯಕ್ಷರಾಗಿ ಸಾರಾ ನಂದೀಶ್ ಆಯ್ಕೆ ಮೈಸೂರು ಜಿಪಂ ಹಂಗಾಮಿ ಅಧ್ಯಕ್ಷರಾಗಿ ಸಾರಾ ನಂದೀಶ್ ಆಯ್ಕೆ

ದೂರ ತಳ್ಳುವುದು ಸರಿಯಲ್ಲ

ದೂರ ತಳ್ಳುವುದು ಸರಿಯಲ್ಲ

ಇಲ್ಲಿನ ಜೆಡಿಎಸ್ ವರಿಷ್ಠರೂ ಆರಂಭದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಸಹಾಯ ಮಾಡಿತ್ತು. ಈಗ ರಾಜ್ಯದಲ್ಲಿ ಅಧಿಕಾರ ಸಿಕ್ಕಿತು ಎಂದು ಹಿಂದೆ ಸಹಾಯ ಮಾಡಿದ ಬಿಜೆಪಿಯನ್ನು ದೂರ ತಳ್ಳುವುದು ಸರಿಯಲ್ಲ ಎಂಬ ನಿಲುವಿಗೆ ಬಂದಿದ್ದಾರೆ.

ಉತ್ತಮ ಸಂಬಂಧವಿಲ್ಲ

ಉತ್ತಮ ಸಂಬಂಧವಿಲ್ಲ

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೂ ಜಿಲ್ಲಾಮಟ್ಟದಲ್ಲಿ ಕಾಂಗ್ರೆಸ್‌ಗೂ ಜೆಡಿಎಸ್ ಗೂ ಉತ್ತಮ ಸಂಬಂಧವಿಲ್ಲ. ಮುಖ್ಯವಾಗಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮಧ್ಯೆ ಇನ್ನೂ ಒಳ್ಳೆಯ ಬಾಂಧವ್ಯ ಮೂಡಿಲ್ಲ. ಹಾಗಾಗಿ, ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಜಿ.ಟಿ.ದೇವೇಗೌಡ ಒಪ್ಪುವುದಿಲ್ಲ ಎಂದೇ ಅವರ ಆಪ್ತರು ಹೇಳುತ್ತಿದ್ದಾರೆ.

ಅಧ್ಯಕ್ಷ ಪದವಿ ಪರಿಮಳಾ ಶ್ಯಾಮ್ ಗೆ

ಅಧ್ಯಕ್ಷ ಪದವಿ ಪರಿಮಳಾ ಶ್ಯಾಮ್ ಗೆ

ಇನ್ನು ಸಚಿವ ಸಾ.ರಾ.ಮಹೇಶ್ ಜಿಲ್ಲಾ ಪಂಚಾಯಿತಿಯಲ್ಲಿ ಹಿಂದೆ ಬಿಜೆಪಿ ಜತೆ ಮಾಡಿಕೊಳ್ಳಲಾದ ಮೈತ್ರಿ ಧರ್ಮ ಪಾಲನೆ ಮಾಡುವುದೇ ಸರಿ ಎಂಬ ನಿಲುವಿಗೆ ಬಂದಿದ್ದಾರೆ. ಹಿಂದೆ ಬಿಜೆಪಿ ಬೆಂಬಲ ನೀಡಿದೆ. ಈಗ ಅವರನ್ನು ಕೈಬಿಡುವುದು ಸರಿಯಲ್ಲ ಎಂದು ಅನ್ನಿಸುತ್ತದೆ. ಯಾವುದಕ್ಕೂ ಸಚಿವರು ಮತ್ತು ಶಾಸಕರ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಆದರೆ, ಏನೇ ಇರಲಿ ಅಧ್ಯಕ್ಷ ಪದವಿ ಮಾತ್ರ ಜೆಡಿಎಸ್ ನ ಪರಿಮಳಾ ಶ್ಯಾಮ್ ಅವರಿಗೆ ಎಂದು ಸ್ಪಷ್ಟಪಡಿಸಿದ್ದಾರೆ.

English summary
The JDS is likely to join hands with BJP in the Mysore Zilla Panchayath election.But congress candidates are not agree the JDS stand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X