• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ವಿರುದ್ಧ ಗುಟುರು ಹಾಕಿದ ಹಳ್ಳಿಹಕ್ಕಿ ವಿಶ್ವನಾಥ್

By ಮೈಸೂರು ಪ್ರತಿನಿಧಿ
|

ಮೈಸೂರು, ಮೇ 08: ಮೈಸೂರಿನಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಎಚ್. ವಿಶ್ವನಾಥ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. "ಈ ರಾಜ್ಯದ ಹಣಕಾಸು ಸ್ಥಿತಿಯನ್ನು ಹಾಳು ಮಾಡಿದ್ದು ಯಾರು? ರಾಜ್ಯದ ಬೊಕ್ಕಸದಲ್ಲಿ ದುಡ್ಡೆಲ್ಲಿದೆ?. ನೀವು ಏನ್ ಮಾಡಿ ಹೋದ್ರಿ ಗೊತ್ತಾ?, ಹಣಕಾಸು ವ್ಯವಸ್ಥೆಯನ್ನು ಹಾಳು ಮಾಡಿದವರೇ ಇವತ್ತು ಹಣಕಾಸಿನ ಬಗ್ಗೆ ಮಾತನಾಡುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ನಮ್ಮ ರಾಜ್ಯದಲ್ಲಿ 26 ಜನ ಅವ್ರೆ ಅವರೆಲ್ಲರೂ ವೇಸ್ಟ್ ಎಂದ ಡಿ ಕೆ ಶಿವಕುಮಾರ್

   "ರಾಜ್ಯಕ್ಕೆ ಹಣಕಾಸಿ ಮೂಲ ಹಾಳು ಮಾಡಿದ್ದೇ ಕಾಂಗ್ರೆಸ್. ಆರ್ಥಿಕ ಶಿಸ್ತು ಕೆಟ್ಟಿರುವ ಬಗ್ಗೆ ದೊಡ್ಡ ಚರ್ಚೆಯಾಗಲಿ. ಕಾಂಗ್ರೆಸ್ ಕಾಲದಲ್ಲಿ 1 ಲಕ್ಷದ 68 ಸಾವಿರ ಕೋಟಿ ಸಾಲ ಮಾಡಿದ್ದಿರಿ. ಈಗ ಅದು 4 ಲಕ್ಷ ಕೋಟಿಗೆ ಬಂದಿದೆ. ನಾವು 31 ಸಾವಿರ ಕೋಟಿಯನ್ನು ಬರೀ ಬಡ್ಡಿ ಕಟ್ಟುತ್ತಿದ್ದೇವೆ. 55 ಸಾವಿರ ಕೋಟಿ ಸಂಬಳ ಹಾಗೂ ಪೆನ್ಷನ್ ಗೆ ಬೇಕಾಗಿದೆ" ಎಂದು ದೂರಿದ್ದಾರೆ.

   ಮದ್ಯ ಮಾರಾಟ ಮಾಡಿ ಎಂದು ಸರ್ಕಾರಕ್ಕೆ ಎಚ್ ವಿಶ್ವನಾಥ್ ಮನವಿ

   ವಿಜಯೇಂದ್ರ ಮೇಲೆ ಅಸಮಾಧಾನ: ಇದೇ ಸಂದರ್ಭ ಮುಡಾ ಆಯುಕ್ತರ ಜಾಗಕ್ಕೆ ವಿಶ್ವನಾಥ್ ಶಿಫಾರಸ್ಸಿಗೆ ಮಣೆ ಹಾಕದ್ದಕ್ಕೆ ಸಿಎಂ ಪುತ್ರ ವಿಜಯೇಂದ್ರ ಅವರ ಮೇಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವನಾಥ್ ಶಿಫಾರಸ್ಸಿಗೆ ಕಿಮ್ಮತ್ತು ಕೊಡದೆ ಮುಡಾ ಆಯುಕ್ತರಾಗಿ ಕಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ನೇಮಕ ಮಾಡಿದ್ದು, ಸಿಎಂ ಸೋದರಳಿಯ ಅಶೋಕ್ ಶಿಫಾರಸ್ಸಿಗೆ ಮಣೆ ಹಾಕಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

   ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಸ್ವಪಕ್ಷೀಯ ಸಚಿವರ ಜೊತೆ ಬೆರೆಯದೆ ದೂರ ಉಳಿದು ತಮ್ಮ ಅಸಮಾಧಾನವನ್ನು ಹೊರಹಾಕಿದರು.

   English summary
   "congress has destroyed states economy and they are blaming others" said H vishwanath in mysuru today,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X