ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಪುಕ್ಕಟೆ ಇಂಟರ್ ನೆಟ್, ಸಂಗೀತ: ಓಪನ್ ಸ್ಟ್ರೀಟ್ ಹಬ್ಬ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಡಿಸೆಂಬರ್ 30 : ಆ ರಸ್ತೆ ಎಂದಿನಂತೆ ಇರಲಿಲ್ಲ. ಎಲ್ಲೆಂದರಲ್ಲಿ ಯುವಜನತೆ ಹಾಡು ಹಾಗೂ ಡಿಜೆ ಮ್ಯೂಸಿಕ್ ಗೆ ಹುಚ್ಚೆದ್ದು ಕುಣಿಯುತ್ತಿದ್ದರು. ಒನ್ ವೇ ಆಗಿದ್ದ ರಸ್ತೆ ಶನಿವಾರ ಪೂರ್ಣ ಬಂದ್ ಆಗಿತ್ತು. ಮೈಸೂರಿನ ಜನರಿಗೆ ಬೆಳಗ್ಗೆಯಿಂದಲೇ ಹೊಸ ವರ್ಷದ ಸಂಭ್ರಮ - ಸಡಗರ ಮನೆ ಮಾಡಿತ್ತು. ನಗರದ ದೇವರಾಜ್‌ ಅರಸು ರಸ್ತೆ ಹೊಸ ವರ್ಷ 2018ರ ಸ್ವಾಗತಕ್ಕೆ ಒಂದು ದಿನ ಮೊದಲೇ ರಂಗೇರಿತ್ತು.

ಹೌದು, ಓಪನ್‌ ಸ್ಟ್ರೀಟ್ ಫೆಸ್ಟಿವಲ್‌ (ತೆರೆದ ಬೀದಿ ಉತ್ಸವ) ಇದಕ್ಕೆ ವೇದಿಕೆ ಕಲ್ಪಿಸಿದ್ದು, ಯುವ ಜನಾಂಗ ಸೇರಿದಂತೆ ಎಲ್ಲ ವಯೋಮಾನದವರನ್ನೂ ಸೆಳೆಯಲು ಹಾಡು, ನೃತ್ಯ, ಯೋಗ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ಅನಾವರಣಗೊಂಡ ಪರಿ ಇದು. ಮ್ಯೂಸಿಕ್‌ ಬ್ಯಾಂಡ್‌ ಆಕರ್ಷಣೆ ಜತೆ ವೈವಿಧ್ಯಮಯ ಖಾದ್ಯ ಸವಿಯುವ ಅವಕಾಶವೂ ಸಿಕ್ಕಿದ್ದು ಯುವ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಜಿಲ್ಲಾಡಳಿತದ ವತಿಯಿಂದ ಮಾಗಿ ಉತ್ಸವದ ಅಂಗವಾಗಿ ಡಿಸೆಂಬರ್ 30ರಂದು 'ಓಪನ್‌ ಸ್ಟ್ರೀಟ್ ಫೆಸ್ಟಿವೆಲ್' ಆಯೋಜಿಸಿದ್ದ ಹಿನ್ನೆಲೆ ಇಡೀ ದೇವರಾಜ ಅರಸು ರಸ್ತೆ ವೈವಿಧ್ಯಮಯ ಕಾರ್ಯಕ್ರಮಗಳಿಗೆ ವೇದಿಕೆಯಾಗಿತ್ತು. ಎರಡು ತಿಂಗಳ ಹಿಂದೆ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಮೊದಲ ಬಾರಿಗೆ 'ಓಪನ್‌ ಸ್ಟ್ರೀಟ್ ಫೆಸ್ಟಿವೆಲ್' ಆಯೋಜಿಸಲಾಗಿತ್ತು.

ಸಾವಿರಾರು ಜನ ಭಾಗಿ

ಸಾವಿರಾರು ಜನ ಭಾಗಿ

ಸಾವಿರಾರು ಜನರು ಈ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಅನುಭವ ತಮ್ಮದಾಗಿಸಿಕೊಂಡರು. ಹೀಗಾಗಿ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ದೃಷ್ಟಿಯಿಂದ ನಡೆಯುತ್ತಿರುವ ಮಾಗಿ ಉತ್ಸವದ ಪ್ರಮುಖ ಕಾರ್ಯಕ್ರಮವಾಗಿ ಶನಿವಾರ ಬೆಳಗ್ಗೆ 7.30ರಿಂದ ರಾತ್ರಿ 10ರವರೆಗೆ 'ಓಪನ್‌ ಸ್ಟ್ರೀಟ್ ಫೆಸ್ಟಿವೆಲ್' ಆಯೋಜಿಸಲಾಗಿದೆ.

ಭದ್ರತೆಗೆ 44 ಸಿಸಿ ಟಿವಿ

ಭದ್ರತೆಗೆ 44 ಸಿಸಿ ಟಿವಿ

ಭದ್ರತಾ ದೃಷ್ಟಿಯಿಂದ ದೇವರಾಜ ಅರಸು ರಸ್ತೆಯಲ್ಲಿ 40 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಹಾಗೂ ಭದ್ರತೆ ಕಾಪಾಡಲು 300 ಪೊಲೀಸ್‌ ಸಿಬ್ಬಂದಿ, ಸುಗಮ ಸಂಚಾರ ವ್ಯವಸ್ಥೆಗಾಗಿ 100 ಸಂಚಾರ ಪೊಲೀಸ್‌ ಸಿಬ್ಬಂದಿ, ಸ್ವಚ್ಛತೆ ಕಾಪಾಡಲು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಸುಮಾರು 100 ಸ್ವಚ್ಛತಾ ಸೇನಾನಿಗಳು, ಪ್ರಥಮ ಚಿಕಿತ್ಸಾ ಕೇಂದ್ರ, ಶಿಶು ಆರೈಕೆ ಕೇಂದ್ರ, ಪೊಲೀಸ್‌ ಮಾಹಿತಿ ಕೇಂದ್ರಗಳು, ಅಗ್ನಿ ಶಾಮಕ ದಳ ಹಾಗೂ ಅಭಯ ತಂಡ ಕಾರ್ಯನಿರ್ವಹಿಸುತ್ತಿದೆ.

ಉಚಿತ ವೈಫೈ

ಉಚಿತ ವೈಫೈ

ಮಾಗಿ ಉತ್ಸವದಲ್ಲಿ ಭಾಗವಹಿಸುವ ಎಲ್ಲರೂ ಉಚಿತವಾಗಿ ಇಂಟರ್ ನೆಟ್‌ ಬಳಸಬಹುದು. ಯಾವುದೇ ಪಾಸ್‌ವರ್ಡ್‌ ಇಲ್ಲದೆ ಮುಕ್ತವಾಗಿ ಇಂಟರ್ ನೆಟ್‌ ಬಳಸುವ ವ್ಯವಸ್ಥೆ ಮಾಡಲಾಗಿದ್ದು, ಯುವಕರಿಗೆ ಫುಲ್ ಖುಷಿ ನೀಡಿದೆ.

ಸ್ವಚ್ಛತೆ ಅಪ್ಲಿಕೇಷನ್

ಸ್ವಚ್ಛತೆ ಅಪ್ಲಿಕೇಷನ್

ಮೈಸೂರಿನಲ್ಲಿ ನಡೆಯುತ್ತಿರುವ ಓಪನ್‌ ಸ್ಟ್ರೀಟ್ ಫೆಸ್ಟಿವಲ್‌ನಲ್ಲಿ ಸ್ವಚ್ಛತಾ ಅಪ್ಲಿಕೇಷನ್ ಬಳಕೆ ಮಾಡುವ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಪ್ಲಿಕೇಷನ್ ಬಳಕೆ ವಿಧಾನದ ಪ್ರಾತ್ಯಕ್ಷಿಕೆ ಯುವಕರನ್ನು ಮೋಡಿ ಮಾಡಿತು. ಅಲ್ಲದೆ ಸ್ವಚ್ಛತೆ ಕುರಿತು ಕಾರ್ಯಾಗಾರ ಹಾಗೂ ಸ್ವಚ್ಛತಾ ಫ್ಯಾಷನ್ ಶೋ ನಡೆಯಲಿದ್ದು, ಇದು ಈ ಬಾರಿಯ ಹೊಸ ಪ್ರಯೋಗವಾಗಿದೆ.

English summary
The most colorful event of the year 'Open street festival' organised as part of the winter festival - 2017 formally inaugurated in Mysuru on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X