ಸಿದ್ದರಾಮಯ್ಯ "ಅನರ್ಹ" ಪದ ಬಳಕೆಗೆ ಶಾಸಕ ಮಹೇಶ್ ತಾಕೀತು

ಮೈಸೂರು, ಫೆಬ್ರವರಿ 07: "ಗೆದ್ದವರನ್ನು ಮತ್ತೆ ಅನರ್ಹರು ಎನ್ನುವುದು ಸರಿಯಲ್ಲ. ಸಿದ್ದರಾಮಯ್ಯನವರ ಹೇಳಿಕೆ ಸಮಂಜಸವಲ್ಲ" ಎಂದು ಸಿದ್ದರಾಮಯ್ಯನವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಬಿಎಸ್ ಪಿ ಉಚ್ಚಾಟಿತ ಶಾಸಕ ಎನ್.ಮಹೇಶ್.

ಮೈಸೂರಿನಲ್ಲಿ ಮಾತನಾಡಿದ ಅವರು, "ಎಲ್ಲರೂ ಹೇಗೆ ಚುನಾವಣೆ ಮಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಕೆಲವೊಂದನ್ನು ಮಾಧ್ಯಮದ ಮುಂದೆ ಹೇಳೋಕಾಗೋಲ್ಲ. ಅನರ್ಹರೆಲ್ಲರನ್ನು ಸುಪ್ರೀಂಕೋರ್ಟ್ ಚುನಾವಣೆ ಸ್ಪರ್ಧಿಸಿ ಅರ್ಹರಾಗಿ ಅಂತ ಹೇಳಿದೆ. ಹಾಗೇ ಅವರೆಲ್ಲ ಜನತಾ ನ್ಯಾಯಾಲಯದಲ್ಲಿ ನಿಂತು ಆಯ್ಕೆಯಾಗಿ ಬಂದಿದ್ದಾರೆ. ಈಗ ಅವರೆಲ್ಲ ಮಂತ್ರಿಗಳಾಗಿದ್ದಾರೆ. ಅವರನ್ನು ಮತ್ತೆ ಅನರ್ಹರು ಅನ್ನೋದು ಸರಿಯಲ್ಲ‌" ಎಂದಿದ್ದಾರೆ.

BSP Expelled MLA N Mahesh Opposed Siddaramaiahs Statement On New Ministers

ನಾವು ಅನರ್ಹರೆನ್ನಲು ಸಿದ್ದರಾಮಯ್ಯ ಯಾರು?; ಸೋಮಶೇಖರ್ ತಿರುಗೇಟು
ಯಡಿಯೂರಪ್ಪ ಸರ್ಕಾರಕ್ಕೆ ತಮ್ಮ ಬೆಂಬಲದ ಕುರಿತು ಮಾತನಾಡಿದ ಅವರು, "ನಾನು ಈಗ ಸ್ವತಂತ್ರ. ಯಡಿಯೂರಪ್ಪನವರ ಸರ್ಕಾರಕ್ಕೆ ನನ್ನ ಬೆಂಬಲ. ಅವರು ಬೆಂಬಲ ಕೇಳಿದ್ದರು‌, ಕೊಟ್ಟಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಹಾಯ ಮಾಡಿ ಅಂತ ಕೇಳಿದ್ದೇನೆ. ಹಿಂದೆ ನನ್ನ ಕ್ಷೇತ್ರಕ್ಕೆ ಅನ್ಯಾಯ ಆಗಿದೆ. ನಿಮ್ಮ ಕಷ್ಟಕ್ಕೆ ನನ್ನನ್ನು ಬಳಸಿಕೊಳ್ಳಿ, ಹಾಗೇ ನನ್ನ ಕ್ಷೇತ್ರ ಅಭಿವೃದ್ಧಿ ಮಾಡಿ ಅಂತ ಬಿಎಸ್ ‌ವೈ ಬಳಿ ಮನವಿ ಮಾಡಿದ್ದೇನೆ. ಅದನ್ನು ಬಿಟ್ಟು ಬಿಜೆಪಿ ಸರ್ಕಾರದಿಂದ ಇನ್ನೇನೂ ನಿರೀಕ್ಷೆ ಇಲ್ಲ. ಯಡಿಯೂರಪ್ಪನವರೂ ನನಗೆ ಯಾವುದೇ ರೀತಿಯ ಭರವಸೆ ಕೊಟ್ಟಿಲ್ಲ. ಉಳಿದವರಿಗೆ ಕೊಟ್ಟ ಭರವಸೆ ಈಡೇರಿಸಿದ್ದಾರೆ. ಹಾಗಾಗಿ ನನಗೂ ಭರವಸೆ ಇದೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+