ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ಬ್ರಾಹ್ಮಣ ಸಂಘದಿಂದ ಪುಲ್ವಾಮ ದಾಳಿ ಹುತಾತ್ಮರಿಗೆ ನಮನ

|
Google Oneindia Kannada News

ನವದೆಹಲಿ, ಫೆಬ್ರವರಿ 15 : ಪುಲ್ವಾಮದ ಅವಂತಿಪುರ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿದ ಅಂತಿಮ ನಮನ ಸಲ್ಲಿಸಲಾಯಿತು. ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದಾರೆ.

ಶುಕ್ರವಾರ ಸಂಜೆ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ನಗರದ ಇಟ್ಟಿಗೆಗೂಡಿನಲ್ಲಿರುವ ಸಂಘದ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವದಲ್ಲಿ ಹುತಾತ್ಮರಾದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪುಲ್ವಾಮ ದಾಳಿ : ಹುತಾತ್ಮರಿಗೆ ಮೋದಿಯಿಂದ ಅಂತಿಮ ನಮನಪುಲ್ವಾಮ ದಾಳಿ : ಹುತಾತ್ಮರಿಗೆ ಮೋದಿಯಿಂದ ಅಂತಿಮ ನಮನ

ಧಾರ್ಮಿಕ ಮುಖಂಡರಾದ ಭಾನುಪ್ರಕಾಶ್ ಶರ್ಮ, ಹಿರಿಯ ಸಮಾಜಸೇವಕರಾದ ಕೆ.ರಘು ರಾಮ್, ಬ್ರಾಹ್ಮಣ ಸಮಾಜದ ಗ್ರಾಮಾಂತರ ಅಧ್ಯಕ್ಷರಾದ ಗೋಪಾಲರಾವ್, ವೇಣುಗೋಪಾಲ್, ಶಂಕರ್ ನಾರಾಯಣ್, ಡಿ.ಎನ್ ಕೃಷ್ಣಮೂರ್ತಿ ಮುಂತಾದವರು ಹಾಜರಿದ್ದರು.

ಪುಲ್ವಾಮಾ ಹತ್ಯಾಕಾಂಡ : ಪಾಕ್ ಭಯೋತ್ಪಾದನೆ ವಿರುದ್ಧ ವಿಶ್ವದ ಒಗ್ಗಟ್ಟುಪುಲ್ವಾಮಾ ಹತ್ಯಾಕಾಂಡ : ಪಾಕ್ ಭಯೋತ್ಪಾದನೆ ವಿರುದ್ಧ ವಿಶ್ವದ ಒಗ್ಗಟ್ಟು

Brahmin sanga paid tribute to CRPF jawans martyred in Pulwama attack

ಮಹಿಳಾ ಮುಖಂಡರಾದ ಸೌಭಾಗ್ಯ ಮೂರ್ತಿ, ಬ್ರಾಹ್ಮಣ ಯುವ ವೇದಿಕೆಯ ವಿಕ್ರಂ ಅಯ್ಯಂಗಾರ್, ಜಗದೀಶ್, ಹರೀಶ್, ಕೆ.ಎಂ.ನಿಶಾಂತ್, ಅಜಯ್ ಶಾಸ್ತ್ರಿ , ವಿಜಯ್ ಕುಮಾರ್, ಸುಚಿಂದ್ರ, ಫೋಟೋ ಗಣೇಶ್, ರಂಗನಾಥ್, ಜೈ ಸಿಂಹ ಮುಂತಾದವರು ಶ್ರದ್ಧಾಂಜಲಿ ಸಲ್ಲಿಸಿ , ಹುತಾತ್ಮ ಯೋಧರ ಸೇವೆ ಸ್ಮರಿಸಿದರು.

ಗುಪ್ತಚರ ಇಲಾಖೆ ದಾರಿ ತಪ್ಪಿಸಲು ಉಗ್ರ ಸಂಘಟನೆಯ ಹೊಸ ತಂತ್ರಗುಪ್ತಚರ ಇಲಾಖೆ ದಾರಿ ತಪ್ಪಿಸಲು ಉಗ್ರ ಸಂಘಟನೆಯ ಹೊಸ ತಂತ್ರ

ಮೇಣದ ಬತ್ತಿ ಬೆಳಗಿಸಿ 'ಅಮರ್ ರಹೆ ಅಮರ್ ರಹೇ ವೀರ ಜವಾನ್ ಅಮರ್ ರಹೇ "ಎಂಬ ಘೋಷಣೆ ಕೂಗಲಾಯಿತು. ಮೌನಾಚರಣೆ ಮೂಲಕ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಡಿ.ಟಿ.ಪ್ರಕಾಶ್ ಅವರು ಮಾತನಾಡಿ, 'ಪಾಕಿಸ್ತಾನದ ಪಾಪದ ಕೊಡ ತುಂಬಿದೆ. ತಾಳ್ಮೆಗೂ ಮಿತಿ ಇದೆ. ಭಯೋತ್ಪಾದನೆಯನ್ನು ಸಹಿಸಿಕೊಳ್ಳುವ ರಾಜಕೀಯ ನೇತೃತ್ವ ದೇಶದಲ್ಲಿ ಇಲ್ಲ. ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಅವಕಾಶ ದೇಶದ ಸೈನ್ಯಕ್ಕೆ ಇದೆ' ಎಂದರು.

ಭಾನುಪ್ರಕಾಶ್ ಶರ್ಮಾ ಅವರು ಮಾತನಾಡಿ, 'ಇಸ್ರೇಲ್ ಮಾದರಿಯ ಹೋರಾಟ ನಮ್ಮದಾಗಬೇಕಾಗಿದೆ. ನಮ್ಮ ಸೈನಿಕರ ಬಲಿದಾನ ವ್ಯರ್ಥವಾಗಬಾರದು. ಭಾರತವನ್ನು ಪ್ರೀತಿಸುವ ಪ್ರತಿಯೊಬ್ಬರು ಕುದಿಯುತ್ತಿದ್ದಾರೆ. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೆಸೆಯುವ ರಾಜಕೀಯ ನಾಯಕತ್ವದ ಬೆಂಬಲಕ್ಕೆ ನಮ್ಮ ಬ್ರಾಹ್ಮಣ ಸಮುದಾಯವು ಸೇರಿದಂತೆ ಇಡೀ ದೇಶ ನಿಂತಿದೆ' ಎಂದರು.

English summary
Mysuru Brahmin sanga paid tribute to CRPF jawans who martyred in Pulwama attack on February 14, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X