ಮೈಸೂರಲ್ಲಿ ಅಭಿಮಾನಿಗಳೊಂದಿಗೆ ನಟಸಾರ್ವಭೌಮ ಚಿತ್ರ ವೀಕ್ಷಿಸಿದ ಪುನೀತ್
ಮೈಸೂರು, ಫೆಬ್ರವರಿ 10: ಅಭಿಮಾನಿಗಳೊಂದಿಗೆ ಮೈಸೂರಿನಲ್ಲಿ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಸಾರ್ವಭೌಮ ಚಿತ್ರವನ್ನು ವೀಕ್ಷಿಸಿದರು.
ಮೈಸೂರಿನ ಸಂಗಂ ಚಿತ್ರ ಮಂದಿರದಲ್ಲಿ ನಟ ಪುನೀತ್ ರಾಜ್ ಕುಮಾರ್, ಅಭಿಮಾನಿಗಳೊಂದಿಗೆ ನಟಸಾರ್ವಭೌಮ ಚಿತ್ರವನ್ನು ವೀಕ್ಷಿಸಿದರು. ಈ ವೇಳೆ, ಅಭಿಮಾನಿಗಳು ತಮ್ಮ ನೆಚ್ಚಿನ ಪುನೀತ್ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಅಪ್ಪು ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ನೂಕುನುಗ್ಗಲು ಮಾಡಿದ್ದರಿಂದಾಗಿ ಚಿತ್ರಮಂದಿರದಲ್ಲಿನ ಕಿಟಕಿ ಗಾಜು ಪುಡಿಯಾಯಿತು.
Nata Sarvabhouma Review : ಅಪ್ಪು ಪವರ್ ಫುಲ್.. ಸಿನಿಮಾ ಸಕ್ಸಸ್ ಫುಲ್..
ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರೂ ಫಲ ನೀಡದೇ ಇದ್ದಾಗ ಲಘು ಲಾಠಿ ಪ್ರಹಾರ ನಡೆಸಲು ಮುಂದಾದರು. ಆಗ ಪುನೀತ್ ರಾಜ್ ಕುಮಾರ್ ಮಧ್ಯಪ್ರವೇಶಿಸಿ, ಶಾಂತ ರೀತಿಯಲ್ಲಿ ವರ್ತಿಸುವಂತೆ ಅಭಿಮಾನಿಗಳಿಗೆ ಮನವಿ ಮಾಡಿದರು.

ಅಭಿಮಾನಿಗಳ ಆಶೀರ್ವಾದದಿಂದ ನಟಸಾರ್ವಭೌಮ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳ ಆಶೀರ್ವಾದ ಇದ್ದಾಗ ಸಿನಿಮಾ ಯಶಸ್ವಿಯಾಗುತ್ತದೆ ಎಂದು ಪುನೀತ್ ರಾಜ್ ಕುಮಾರ್ ಹೇಳಿದರು. ನಟಸಾರ್ವ ಭೌಮ ಸದಭಿರುಚಿ ಚಿತ್ರ. ಆದ್ದರಿಂದ ಜನ ಮೆಚ್ಚಿದ್ದಾರೆ. ಅಭಿಮಾನಿಗಳೇ ನಮ್ಮನೇ ದೇವ್ರು ಎಂದರು. ಕೆಲಹೊತ್ತು ಸಿನಿಮಾ ವೀಕ್ಷಿಸಿ, ಬಳಿಕ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿ ನಿರ್ಗಮಿಸಿದರು.












Click it and Unblock the Notifications