ಸಿಕ್ಕವರಿಗೆಲ್ಲಾ ಕೈತುತ್ತು ತಿನ್ನಿಸಿದರು ಸಚಿವ ಜಮೀರ್ ಅಹ್ಮದ್
Recommended Video

ಮೈಸೂರು, ಅಕ್ಟೋಬರ್ 10: ಸಚಿವ ಜಮೀರ್ ಅಹ್ಮದ್ ಅವರ ಮೈಮೇಲೆ ಸಾಕ್ಷಾತ್ ಅನ್ನಪೂರ್ಣೇಶ್ವರಿಯೇ ಬಂದಿದ್ದರೋ ಏನೋ, ಒಟ್ಟಿನಲ್ಲಿ ಸಿಕ್ಕವರಿಗೆಲ್ಲಾ ಕೈತುತ್ತು ತಿನ್ನಿಸಿ ಕೃತಾರ್ಥರಾದರು.
ಹೌದು, ಮೈಸೂರು ದಸರಾ ಉತ್ಸವದಲ್ಲಿ ಆಹಾರ ಮೇಳ ಉದ್ಘಾಟಿಸಿದ ಸಚಿವ ಜಮೀರ್ ಅಹ್ಮದ್ ಅವರು ನೆರೆದಿದ್ದವರೆನ್ನು ಕರೆದು ತಾವೇ ಅವರ ಬಾಯಿಗೆ ತುತ್ತಿಟ್ಟರು.

ಆಹಾರ ಮೇಳ ಉದ್ಘಾಟಿಸಿದ ಸಚಿವರು ಅಂಧ ಮಕ್ಕಳ ಜೊತೆ ಊಟಕ್ಕೆ ಕೂತರು. ತಮ್ಮ ಅಕ್ಕ-ಪಕ್ಕ ಕೂತಿದ್ದ ಮಕ್ಕಳಿಗೆ ತಾವೇ ಊಟ ತಿನ್ನಿಸಿದರು. ಅಷ್ಟಕ್ಕೆ ತೃಪ್ತಿ ಆಗದ ಸಚಿವರು ಅಲ್ಲಿದ್ದ ಪೊಲೀಸ್ ಪೇದೆಗಳನ್ನು ಕರೆದು ಅವರಿಗೂ ತುತ್ತು ಬಾಯಿಗಿಟ್ಟರು.
ಸ್ವಯಂ ಸೇವಕರಿಗೆ, ಪೊಲೀಸ್ ಅಧಿಕಾರಿಗಳಿಗೆ, ಮಕ್ಕಳಿಗೆ, ಸರ್ಕಾರಿ ಅಧಿಕಾರಿಗಳಿಗೆ, ಆಹಾರ ಮೇಳಕ್ಕೆ ಬಂದ ಸಾರ್ವಜನಿಕರಿಗೆ ಕರೆದು, ಕರೆದು ತುತ್ತು ತಿನ್ನಿಸಿದರು. ತಮ್ಮ ಊಟವಾದ ಬಳಿಕ ಮತ್ತೊಂದು ಪಂಕ್ತಿಗೆ ತಾವೇ ಅಡುಗೆ ಬಡಿಸಿ ಖುಷಿ ಪಟ್ಟರು ಸಚಿವರು.

ಊಟವಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹಳೆಯ ನೆನಪುಗಳಿಗೆ ಜಾರಿದ ಸಚಿವರು, ತಮ್ಮ ತಾತನ ಜೊತೆ ದಸರಾ ನೋಡಲು ಬರುತ್ತಿದ್ದುದನ್ನು ನೆನಪಿಸಿಕೊಂಡರು.












Click it and Unblock the Notifications