ಮೈಸೂರು : ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಭಾರೀ ಮಳೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಮೇ 15: ಮೈಸೂರು ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆಯಾಗಿದ್ದು, ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಶನಿವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಮರಗಳು ಧರೆಗುರುಳಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಮೈಸೂರಿನ ತಾಪಮಾನ ಕೂಡಾ ಐದಾರು ಡಿಗ್ರಿ ಸೆಲ್ಸಿಯಷ್ ನಷ್ಟು ತಗ್ಗಿದೆ.

ಪಿರಿಯಾಪಟ್ಟಣದ ತಾ.ಪಂ. ಕಚೇರಿ ಸಮೀಪದ ರಸ್ತೆಯಲ್ಲಿ ದೊಡ್ಡಮರವೊಂದು ಧರೆಗುರುಳಿದ್ದು, ಅದೃಷ್ಟವಶಾತ್ ಈ ಸಂದರ್ಭದಲ್ಲಿ ಯಾವುದೇ ಜನಸಂದಣಿಯಿಲ್ಲದ್ದರಿಂದ ಯಾವುದೇ ಹಾನಿಯುಂಟಾಗಿಲ್ಲ. [ಬಕ್ಕ ಬರಿದಾದ ಕೆಆರ್‌ಎಸ್, ಕೊಡಗಿನಲ್ಲಿ ಮಳೆ ಸಿಂಚನ]

Piriyapatna Rain

ಬಿ.ಎಂ.ರಸ್ತೆಯಲ್ಲಿ ಗಣೇಶ್ ಎಂಬುವವರ ಹೋಟೆಲ್ ಬದಿ ಬಾರಿ ಗಾತ್ರದ ಮರವೊಂದು ಉರುಳಿ ಬಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಈ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಪಟ್ಟಣದಿಂದ ಮೆಲ್ಲಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಬಿರುಗಾಳಿ ಸಹಿತ ಮಳೆಗೆ ರಸ್ತೆಗೆ ಅಡ್ಡಲಾಗಿ ಅನೇಕ ಮರಗಳು ಉರುಳಿ ಬಿದ್ದಿವೆ.

Piriyapatna Taluk

ಪಟ್ಟಣದಿಂದ ಅಬ್ಬೂರು ಗ್ರಾಮಕ್ಕೆ ತೆರಳುವ ರಸ್ತೆಯಲ್ಲೂ ಭಾರಿ ಗಾತ್ರದ ಮರಗಳು ಉರುಳಿ ಬಿದ್ದು ಪಟ್ಟಣದಿಂದ ಅಬ್ಬೂರು ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿತ್ತು. [ವರುಣ ಈ ಬಾರಿ ಬೇಗನೆ ಬರುತ್ತಿದ್ದಾನೆ, ಸ್ವಾಗತ ಕೋರಿರಿ]

ತಾಲೂಕು ಪಂಚಾಯ್ತಿ ಹಿಂಭಾಗದಲ್ಲಿರುವ ವಿವಿಧ ಇಲಾಖೆಯ ನೌಕರರು ವಾಸಿಸುವ ಮನೆಗಳ ವಿದ್ಯುತ್‍ತಂತಿಯ ಮೇಲೆ ಮರದ ಕೊಂಬೆಗಳು ಬಿದ್ದು, ವಿದ್ಯುತ್‍ಸಂಪೂರ್ಣ ಸ್ಥಗಿತಗೊಂಡಿದೆ. ಸಮಯ ಪ್ರಜ್ಞೆಯಿಂದ ಚೆಸ್ಕಾಂ ಇಲಾಖೆ ವಿದ್ಯುತ್ ಕಡಿತಗೊಳಿಸಿದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ.

Piriyapatna Rain

ಮೆಲ್ಲಹಳ್ಳಿ ಗ್ರಾಮದಲ್ಲಿ ಪೂಜಾರಿ ಕುಮಾರ ಎಂಬುವವರ ಮನೆಯ ಮೇಲೆ ತೆಂಗಿನಮರವೊಂದು ಬಿದ್ದು, ಮನೆಯ ಒಂದು ಪಾಶ್ವಕ್ಕೆ ಹಾನಿಯುಂಟಾಗಿದೆ. ಮರ ಬೀಳುತ್ತಿದ್ದ ವೇಳೆ ಹೊರಗೆ ಓಡಿ ಬಂದಿದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru: Periyapatna Taluk received Heavy and widespread rain reducing the temperature and drop in mercury rising this weekend witnessed.
Please Wait while comments are loading...