ನೀಚ, ಚೋರ ಆಯ್ತು, ಈಗ ನಾಯಿಯ ಸರದಿ! ಖರ್ಗೆ ಹೇಳಿಕೆ ಎಷ್ಟು ಸರಿ?

Recommended Video

      ಮಲ್ಲಿಕಾರ್ಜುನ ಖರ್ಗೆಯವರು ಬಿಜೆಪಿ ಹಾಗು ಮೋದಿ ಬಗ್ಗೆ ವಿವಾದಾತ್ಮಕ ಹೇಳಿಕೆ | Oneindia Kannada

      ಮುಂಬೈ, ಅಕ್ಟೋಬರ್ 06: ಮಣಿಶಂಕರ್ ಅಯ್ಯರ್ ಅವರ 'ನೀಚ್' ಹೇಳಿಕೆಯಾಯ್ತು, ರಾಹುಲ್ ಗಾಂಧಿಯವರ 'ಚೋರ್' ಹೇಳಿಕೆಯಾಯ್ತು... ಇದೀಗ ವಿವಾದಕ್ಕೆ ಹೊಸ ಸೇರ್ಪಡೆ ಮಲ್ಲಿಕಾರ್ಜುನ ಖರ್ಗೆ ಅವರ 'ನಾಯಿಯೂ ಸತ್ತಿಲ್ಲ' ಹೇಳಿಕೆ!

      'ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ-ಆರೆಸ್ಸಿಗರ ಮನೆಯ ಒಂದು ನಾಯಿಯೂ ಸತ್ತಿಲ್ಲ' ಎಂಬ ಪ್ರತಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿದೆ.

      ಜವಾಬ್ದಾರಿಯುತ ಹುದ್ದೆಯಲ್ಲಿರುವ, ಖರ್ಗೆಯವರಂಥ ಪ್ರಬುದ್ಧ ರಾಜಕಾರಣಿ ಇಂಥ ಹೇಳಿಕೆ ನೀಡುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸಿದೆ.

      ಏನಿದು ವಿವಾದಾತ್ಮಕ ಹೇಳಿಕೆ?

      ಏನಿದು ವಿವಾದಾತ್ಮಕ ಹೇಳಿಕೆ?

      ಮಹಾರಾಷ್ಟ್ರದ ಫೈಜಿಪುರದಲ್ಲಿ ನಡೆದ ಕಾಂಗ್ರೆಸ್ಸಿನ ಜನ ಸಂಘರ್ಷ ಯಾತ್ರೆಯಲ್ಲಿ ಮಾತನಾಡುತ್ತಿದ್ದ ಕಲಬುರಗಿ ಸಂಸದ ಮಲ್ಲಿಕಾರ್ಜುನ ಖರ್ಗೆ, 'ನಾವು ಕಾಂಗ್ರೆಸ್ಸಿಗರು ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರು. ಇಂದಿರಾ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು, ರಾಜೀವ್ ಗಾಂಧಿ ರಾಷ್ಟ್ರಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು. ಹೇಳಿ, ಬಿಜೆಪಿ ಮತ್ತು ಆರೆಸ್ಸಿಗರ ಮನೆಯ ಒಂದು ನಾಯಿಯಾದರೂ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದೆಯೇ?' ಎಂದು ಅವರು ಪ್ರಶ್ನಿಸಿದರು.

      ಪ್ರಧಾನಿ ಮೋದಿಯವರ ಹೇಳಿಕೆಗೆ ಇದು ಪ್ರತಿಕ್ರಿಯೆ!

      ಪ್ರಧಾನಿ ಮೋದಿಯವರ ಹೇಳಿಕೆಗೆ ಇದು ಪ್ರತಿಕ್ರಿಯೆ!

      "ಕಾಂಗ್ರೆಸ್ಸಿಗರು ಯಾವಾಗಲೂ ಸ್ವಾತಂತ್ರ್ಯ ಹೋರಾಟದ ವಿಷಯ ಬಂದಾಗ ಕೇವಲ ಒಂದು ಕುಟುಂಬದ ಬಗ್ಗೆ ಮಾತ್ರ ಮಾತನಾಡುತ್ತೀರಿ. ಭಗತ್ ಸಿಂಗ್ ಅಥವಾ ಚಂದ್ರಶೇಖರ ಆಜಾದ್ ರಂಥವರು ನಿಮಗೆ ನೆನಪೇ ಆಗುವುದಿಲ್ಲ" ಎಂದು ಇತ್ತೀಚೆಗೆಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಮಾತನಾಡಿದ ಖರ್ಗೆ, ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದರು.

      ಮೊದಲೂ ನಾಯಿಯನ್ನು ಎಳೆದು ತಂದಿದ್ದ ಖರ್ಗೆ!

      ಮೊದಲೂ ನಾಯಿಯನ್ನು ಎಳೆದು ತಂದಿದ್ದ ಖರ್ಗೆ!

      ಇದಕ್ಕೂ ಮುನ್ನ, 2017 ರ ಫೆಬ್ರವರಿಯಲ್ಲಿ ಸಂಸತ್ತಿನ ಕೆಳಮನೆಯಲ್ಲಿ ಮಾತನಾಡುತ್ತಿದ್ದ ಖರ್ಗೆ, 'ಗಾಂಧೀಜಿ, ಇಂದಿರಾಜೀ ಈ ದೇಶದ ಒಗ್ಗಟ್ಟಿಗಾಗಿ, ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದರು. ನಿಮ್ಮ ಕಡೆ ಅಂಥವರು ಯಾರಿದ್ದಾರೆ? ಒಂದು ನಾಯಿಯೂ ಇಲ್ಲ' ಎಂಬ ಹೇಳಿಕೆ ನೀಡಿದ್ದರು.

      ಇಂಥ ಹೇಳಿಕೆ ನೀಡುವುದು ಎಷ್ಟು ಸರಿ?

      ಇಂಥ ಹೇಳಿಕೆ ನೀಡುವುದು ಎಷ್ಟು ಸರಿ?

      ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್, ಪ್ರಧಾನಿ ಮೋದಿಯವರನ್ನು 'ನೀಚ' ಎಂದು ಕರೆದಿದ್ದು ನೆನಪಿರಬಹುದು, ಇತ್ತೀಚೆಗಷ್ಟೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿಯವರನ್ನು 'ಚೋರ್' ಎಂದಿದ್ದರು. ಇದೀಗ ಖರ್ಗೆ ಅವರ ಸರದಿ. ಮಾತುನ ಓಘದ ನಡುವಲ್ಲಿ ಇಂಥ ಅಪ್ರಬುದ್ಧ ಹೇಳಿಕೆಗಳನ್ನು ನೀಡುವುದು ಅವರ ವರ್ಚಸ್ಸಿಗೇ ಧಕ್ಕೆ ಉಂಟು ಮಾಡುತ್ತದೆ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಪ್ರಧಾನಿ ಮೋದಿಯವರ ಬಗ್ಗೆ ದ್ವೇಷವಿದ್ದರೂ, ಪ್ರಧಾನಿ ಹುದ್ದೆಯ ಬಗ್ಗೆ ಗೌರವ ಇರದಿದ್ದರೆ ಹೇಗೆ? ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಇಂಥ ಅಪ್ರಬುದ್ಧ ಹೇಳಿಕೆ ನೀಡುವುದು ಎಷ್ಟು ಸರಿ? ನಿಮಗೇನನ್ನಿಸುತ್ತೆ?

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+