'ನಿರ್ಭಯಾ ತಾನೇ ರೇಪ್ ಆಹ್ವಾನಿಸಿಕೊಂಡಳು'
ಮುಂಬೈ, ಜ.29: ಮತ್ತೊಮ್ಮೆ ರಾಜಕಾರಣಿಯೊಬ್ಬರು ದೆಹಲಿ ಗ್ಯಾಂಗ್ ರೇಪ್ ಗೆ ತುತ್ತಾಗಿ ಅಸುನೀಗಿದ ನಿರ್ಭಯಾ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಈ ಬಾರಿ ಮಹಿಳಾ ರಾಜಕಾರಣಿ ಕೆಟ್ಟ ಹೇಳಿಕೆ ನೀಡಿರುವುದು ದುರಂತ.
ನ್ಯಾಷನಲ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ) ನಾಯಕಿ ಹಾಗೂ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಸದಸ್ಯೆ ಆಶಾ ಮಿರ್ಜೆ ಅವರು ಬುಧವಾರ(ಜ.29) ನಾಗಪುರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಾ, 'ಮಹಿಳೆಯರ ಉಡುಗೆ ತೊಡುಗೆ ಮಾದಕವಾಗಿದ್ದರೆ ಅತ್ಯಾಚಾರಕ್ಕೆ ಆಹ್ವಾನ ನೀಡಿದ್ದಂತೆ. ನಿರ್ಭಯಾ ಕೂಡಾ ತನ್ನ ತಪ್ಪಿನಿಂದಲೇ ಅತ್ಯಾಚಾರಕ್ಕೊಳಗಾದಳು' ಎಂದಿದ್ದಾರೆ.
ಶಕ್ತಿ ಮಿಲ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲೂ ಯುವತಿ ನಿರ್ಜನ ಪ್ರದೇಶದಲ್ಲಿ ಆ ವೇಳೆ(ಸಂಜೆ 6 ಗಂಟೆ)ಯಲ್ಲಿ ಅಲ್ಲಿ ಹೋಗಿದ್ದೇ ತಪ್ಪು ಎಂದು ಆಶಾ ಹೇಳಿದ್ದಾರೆ. ನಿರ್ಭಯಾ ಪ್ರಕರಣಕ್ಕೆ ಬಂದರೆ ಫಿಲಂ ನೋಡಲು ಹೋಗುವುದು ನೈಟ್ ಶೋ ಎಲ್ಲಾ ನಮ್ಮ ಸಂಸ್ಕೃತಿಗೆ ಒಗ್ಗುವುದಿಲ್ಲ. ಗೆಳೆಯನ ಜತೆ ಹೋದರೂ ರಾತ್ರಿ ವೇಳೆ ಎಚ್ಚರಿಕೆಯಿಂದಿರಬೇಕು. ನಾನು ಎಲ್ಲಿ ಹೋಗುತ್ತಿದ್ದೇನೆ? ಯಾರ ಜತೆ ಹೋಗುತ್ತಿದ್ದೇನೆ? ಎಷ್ಟು ಸುರಕ್ಷತೆ ಇದೆ? ನಾನು ನಿಜಕ್ಕೂ ಹೋಗಲೇಬೇಕಾ? ಎಂಬ ಪ್ರಶ್ನೆಯನ್ನು ಯುವತಿಯರು ಮೊದಲಿಗೆ ತಮ್ಮನ್ನು ತಾವು ಕೇಳಿಕೊಳ್ಳಬೇಕು ಎಂದು ಆಶಾ ಹೇಳಿದ್ದಾರೆ. [ಅತ್ಯಾಚಾರಕ್ಕೆ ನಿಜವಾಗ್ಲೂ ಕಾರಣ ಯಾರು?]

ದೇಶದಲ್ಲಿ ನಡೆಯುವ ಅತ್ಯಾಚಾರಕ್ಕೆಲ್ಲ ಮಹಿಳೆಯರ 'ಡ್ರೆಸ್' ಕಾರಣ. ವಸ್ತ್ರ ಸಂಹಿತೆ ಇಲ್ಲದೆ ಮಾದಕ ಉಡುಪುಗಳನ್ನು ಧರಿಸಿಕೊಂಡು ರಸ್ತೆಯಲ್ಲಿ ಅಡ್ಡಾಡಿದರೆ ಎಲ್ಲರ ಕಣ್ಣು ಕುಕ್ಕುತ್ತದೆ. ಹೀಗಾಗಿ ಮಹಿಳೆಯರು ಸಮಾಜದಲ್ಲಿ ಯಾವ ರೀತಿ ಕಾಣಿಸಿಕೊಳ್ಳಬೇಕು. ಮನೆಯಲ್ಲಿ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಅರಿವು ಪಡೆಯಬೇಕು. ಇಲ್ಲದಿದ್ದರೆ ಲೈಂಗಿಕ ಕಿರುಕುಳವನ್ನು ಆಹ್ವಾನಿಸಿಕೊಳ್ಳಬೇಕಾಗುತ್ತದೆ ಎಂದು ಆಶಾ ಎಚ್ಚರಿಸಿದ್ದಾರೆ.
ಆಶಾ ಮಿರ್ಜೆ ಅವರ ಪ್ರಚೋದನಕಾರಿ ಭಾಷಣದ ನಂತರ ಎನ್ ಸಿಪಿ ನಾಯಕರು ಮಾಧ್ಯಮಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಶಾ ಅವರ ಹೇಳಿಕೆಗೂ ಪಕ್ಷದ ನಿಲುವಿಗೂ ಯಾವುದೇ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಎನ್ ಸಿಪಿ ವಕ್ತಾರ ನವಾಬ್ ಮಲ್ಲಿಕ್ ಅವರು ಹೇಳಿದ್ದಾರೆ.[ನಿರ್ಭಯಾಳ ಬರ್ಬರ ಅತ್ಯಾಚಾರಕ್ಕೆ ಒಂದು ವರ್ಷ!]












Click it and Unblock the Notifications