Get Updates
Get notified of breaking news, exclusive insights, and must-see stories!

ಮದ್ಯಪ್ರಿಯರಿಗೆ ಗುಡ್ ನ್ಯೂಸ್: ಮಹಾರಾಷ್ಟ್ರದ ಸೂಪರ್ ಮಾರ್ಕೆಟ್, ವಾಕ್-ಇನ್ ಸ್ಟೋರ್‌ಗಳಲ್ಲೂ ವೈನ್ ಲಭ್ಯ

ಮುಂಬೈ, ಜನವರಿ 28: ಮದ್ಯಪಾನಪ್ರಿಯರಿಗೆ ಮಹಾರಾಷ್ಟ್ರ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ರಾಜ್ಯದ ಸೂಪರ್ ಮಾರ್ಕೆಟ್ ಮತ್ತು ವಾಕ್ ಇನ್ ಸ್ಟೋರ್‌ಗಳಲ್ಲೂ ವೈನ್ ಸಿಗುತ್ತದೆ. ಸೂಪರ್ ಮಾರ್ಕೆಟ್ ಹಾಗೂ ವಾಕ್ ಇನ್ ಸ್ಟೋರ್‌ಗಳಲ್ಲಿ ವೈನ್ ಮಾರಾಟಕ್ಕೆ ಮಹಾರಾಷ್ಟ್ರ ಸರ್ಕಾರ ಗುರುವಾರ ಅನುಮತಿ ನೀಡಿದೆ.

ರಾಜ್ಯದ ರೈತರಿಗೆ ಹೆಚ್ಚುವರಿ ಆದಾಯ ಸಿಗುವಂತೆ ಮಾಡುವ ಉದ್ದೇಶದಿಂದ ಹಣ್ಣುಗಳ ಆಧಾರಿತ ವೈನ್ ಮಾರಾಟಕ್ಕೆ ಅವಕಾಶ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ನವಾಬ್ ಮಲ್ಲಿಕ್ ತಿಳಿಸಿದ್ದಾರೆ.

100 ಚದರ ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಮತ್ತು ಮಹಾರಾಷ್ಟ್ರದ ಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆಯಡಿ ನೋಂದಾಯಿಸಲ್ಪಟ್ಟಿರುವ ಸೂಪರ್‌ಮಾರ್ಕೆಟ್‌ಗಳು ಮತ್ತು ವಾಕ್-ಇನ್-ಸ್ಟೋರ್‌ಗಳಲ್ಲಿ "ಶೆಲ್ಫ್-ಇನ್-ಶಾಪ್" ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಶೇ.65ರಷ್ಟು ವೈನ್ ಉದ್ಯಮವಿರುವ ರಾಜ್ಯ

ದೇಶದಲ್ಲಿ ಶೇ.65ರಷ್ಟು ವೈನ್ ಉದ್ಯಮವಿರುವ ರಾಜ್ಯ

ದೇಶದಲ್ಲಿ ವೈನ್ ಉದ್ಯಮವು ಮಹಾರಾಷ್ಟ್ರವೊಂದರಲ್ಲೇ ಹೆಚ್ಚಿನ ಪ್ರಮಾಣದಲ್ಲಿದೆ. ಹಾಗಿದ್ದರೂ, ರಾಜ್ಯದಲ್ಲಿ ಸದ್ಯಕ್ಕೆ ಮದ್ಯದ ಅಂಗಡಿಗಳ ಮೂಲಕ ಮಾತ್ರ ವೈನ್ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದೆ. ಇದನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಂಡಿದೆ. ಏಕೆಂದರೆ ಒಂದು ವರದಿ ಪ್ರಕಾರ, ರಾಷ್ಟ್ರದಲ್ಲಿನ ಒಟ್ಟು ವೈನ್ ಉದ್ಯಮದಲ್ಲಿ ಶೇ.65ರಷ್ಟು ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಕಂಡು ಬರುತ್ತದೆ. ಅವುಗಳಲ್ಲಿ ಹೆಚ್ಚಿನವು ನಾಸಿಕ್, ಸಾಂಗ್ಲಿ, ಪುಣೆ, ಸೋಲಾಪುರ, ಬುಲ್ಧಾನ ಮತ್ತು ಅಹಮದ್‌ನಗರಗಳಲ್ಲಿ ಇದೆ ಎಂದು ಗೊತ್ತಾಗಿದೆ.

ಸೂಪರ್‌ಮಾರ್ಕೆಟ್‌ಗಳಲ್ಲಿ ವೈನ್ ಮಾರಾಟ ನಿಮಯಗಳು ಅನ್ವಯ

ಸೂಪರ್‌ಮಾರ್ಕೆಟ್‌ಗಳಲ್ಲಿ ವೈನ್ ಮಾರಾಟ ನಿಮಯಗಳು ಅನ್ವಯ

ಮಹಾರಾಷ್ಟ್ರದಲ್ಲಿ ಎಂಥ ಸ್ಥಳಗಳಲ್ಲಿ ಇರುವ ಸೂಪರ್ ಮಾರ್ಕೆಟ್ ಮತ್ತು ವಾನ್ ಇನ್ ಸ್ಟೋರ್ ಗಳಲ್ಲಿ ಮಾತ್ರ ವೈನ್ ಮಾರಾಟಕ್ಕೆ ಅನುಮತಿ ನೀಡಲಾಗುವುದು ಎಂಬುದರ ಕುರಿತು ಸರ್ಕಾರ ಸ್ಪಷ್ಟ ಸಂದೇಶವನ್ನು ನೀಡಿದೆ. ಪೂಜಾ ಸ್ಥಳಗಳು ಅಥವಾ ಶಿಕ್ಷಣ ಸಂಸ್ಥೆಗಳ ಬಳಿ ಇರುವ ಸೂಪರ್‌ಮಾರ್ಕೆಟ್‌ಗಳಲ್ಲಿ ವೈನ್ ಮಾರಾಟ ಮಾಡುವಂತಿಲ್ಲ. ಇದಲ್ಲದೆ, ನಿಷೇಧ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ವೈನ್ ಮಾರಾಟವನ್ನು ಅನುಮತಿಸಲಾಗುವುದಿಲ್ಲ. ಸೂಪರ್ ಮಾರ್ಕೆಟ್‌ಗಳು ವೈನ್ ಮಾರಾಟಕ್ಕೆ 5,000 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ.

ಸರ್ಕಾರದ ಕ್ರಮದ ವಿರುದ್ಧ ವಿಪಕ್ಷಗಳ ತೀವ್ರ ವಿರೋಧ

ಸರ್ಕಾರದ ಕ್ರಮದ ವಿರುದ್ಧ ವಿಪಕ್ಷಗಳ ತೀವ್ರ ವಿರೋಧ

ರಾಜ್ಯದ ಸೂಪರ್‌ಮಾರ್ಕೆಟ್‌ಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರದ ಕ್ರಮದ ವಿರುದ್ಧ ಭಾರತೀಯ ಜನತಾ ಪಕ್ಷ ಸೇರಿದಂತೆ ವಿಪಕ್ಷಗಳ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿವೆ. ರಾಜ್ಯ ಸರ್ಕಾರವೇ ಮದ್ಯ ಮಾರಾಟಕ್ಕೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿವೆ.

"ಸರ್ಕಾರಕ್ಕೆ ಮದ್ಯ ಮಾರಾಟವೇ ಮೊದಲ ಆದ್ಯತೆ"

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರ್ಕಾರವನ್ನು ಈ ವಿಷಯವಾಗಿ ತರಾಟೆ ತೆಗೆದುಕೊಂಡಿದ್ದಾರೆ. ನಾವು "ಮಹಾರಾಷ್ಟ್ರವನ್ನು ಮದ್ಯ-ರಾಷ್ಟ್ರ ('ಮದ್ಯ ರಾಜ್ಯ') ಆಗಲು ನಾವು ಬಿಡುವುದಿಲ್ಲ" ಎಂದು ಅವರು ಹೇಳಿದರು. ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರವು ಸಾಂಕ್ರಾಮಿಕ ರೋಗದ ಎರಡು ವರ್ಷಗಳಲ್ಲಿ ಜನರಿಗೆ ಸಹಾಯ ಮಾಡಲಿಲ್ಲ. ಆದರೆ ಅದರ ಆದ್ಯತೆ ಮದ್ಯ ಮಾರಾಟವನ್ನು ಉತ್ತೇಜಿಸುವುದಾಗಿದೆ ಎಂದು ಕಿಡಿ ಕಾರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+