ಕಾಣೆಯಾಗಿದ್ದ ಯುವಕನ ಮೃತದೇಹ ಉಚ್ಚಿಲ ಕಡಲ ಕಿನಾರೆಯಲ್ಲಿ ಪತ್ತೆ
ಮಂಗಳೂರು, ಜನವರಿ. 23 : ಹಲವು ದಿನಗಳಿಂದ ಕಾಣೆಯಾಗಿದ್ದ ರಾಜು ಗೌಡ ಎನ್ನುವ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲ ಸಮುದ್ರ ಬದಿಯಲ್ಲಿ ಸೋಮವಾರ ಪತ್ತೆಯಾಗಿದೆ.
ಹಾಸನ ಮೂಲದ 21 ವರ್ಷ ದ ರಾಜು ಗೌಡ ಎಂದು ತಿಳಿದು ಬಂದಿದ್ದು, ಈ ಯುವಕ ಮಂಗಳೂರಿನಲ್ಲಿ ಕಂಪ್ಯೂಟರ್ ಉದ್ಯೋಗಿಯಾಗಿದ್ದ.

ಕಳೆದ 8 ದಿವಸದ ಹಿಂದೆ ನಗರದ ಉರ್ವ ಠಾಣೆಯಲ್ಲಿ ಈ ಯುವಕ ಕಾಣೆಯಾದ ಪ್ರಕರಣ ದಾಖಲಾಗಿತ್ತು. ಈಗ ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲ ಸಮುದ್ರ ಬದಿಯಲ್ಲಿ ಅದೇ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಫರಂಗಿಪೇಟೆಯ ಯುವತಿ ಓರ್ವಳನ್ನು ತುಂಬಾ ಪ್ರೀತಿಸುತ್ತಿದ್ದ ರಾಜು ಮತ್ತು ಆಕೆಯ ಪ್ರಿಯತೆಮೆ ನಡುವೆ ಒಂದು ವಿಷಯದಲ್ಲಿ ಮನಸ್ತಾಪವೇ ಈ ಸಾವಿಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಪಡುಬಿದ್ರಿ ಪೋಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications