ತೆಂಗಿನ ಕಾಯಿ ಸಿಪ್ಪೆ ಸುಲಿದು ಮಧ್ಯಾಹ್ನದೊಳಗೆ 1,200 ರೂ. ಸಂಬಳ ಗಳಿಕೆ, ಸಂಕಷ್ಟಗಳ ನಡುವೆಯೂ ಗೆದ್ದು ಬೀಗಿದ ನಾರಿಯ ಕಥೆ ಇದು

ಮಂಗಳೂರು, ಅಕ್ಟೋಬರ್‌, 12: ಸಂಕಷ್ಟಗಳ ಸರಮಾಲೆಯಲೆಯ ನಡುವೆಯೂ ಮಹಿಳೆಯೊಬ್ಬರು ತೆಂಗಿನ ಕಾಯಿ ಸಿಪ್ಪೆ ಸುಲಿದು ಜೀವನ ಸಾಗಿಸುತ್ತಿರುವ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ಈ ಮೂಲಕ ಈ ಮಹಿಳೆಯು ಕೈಯಿಂದ ಇನ್ನು ಜೀವನ ಸಾಗಿಸುವುದಕ್ಕೆ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳುವವರಿಗೆ ಕಷ್ಟಗಳ ನಡುವೆ ಗೆದ್ದು ಬೀಗುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾಳೆ. ಹಾಗಾದರೆ ಈ ಸಾಧಕಿಯ ಹಿನ್ನೆಲೆ ಏನು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಜೀವನಕ್ಕೆ ಆಸರೆಯಾಗಿದ್ದ ಉದ್ಯೋಗ, ಗಂಡ ಎಲ್ಲವೂ ದೂರವಾದಾಗ ಕುಗ್ಗದೆ ಕೂಲಿನಾಲಿ ಮಾಡಿ ಮಕ್ಕಳನ್ನು ಸಾಕಿದ ಈ ಮಹಿಳೆ ಇಂದು ತೆಂಗಿನಕಾಯಿ ಸುಲಿಯುವ ಕಾಯಕದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಗಂಟೆಗೆ 100ಕ್ಕೂ ಹೆಚ್ಚು ತೆಂಗಿನಕಾಯಿ ಸುಲಿಯುವ ಇವರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 1,200ಕ್ಕೂ ಹೆಚ್ಚು ತೆಂಗಿನಕಾಯಿ ಸುಲಿಯುತ್ತಾರೆ.

Woman achievement: Interesting Story of woman who 1,200 rupees earned salary within an afternoon

ಮೂಲತ ಮಡಿಕೇರಿ ನಿವಾಸಿಯಾಗಿರುವ, ಸದ್ಯ ಕಾಸರಗೋಡು ಜಿಲ್ಲೆಯ ವಾಣಿನಗರ ನಿವಾಸಿಯಾಗಿರುವ ಹರಿಣಾಕ್ಷಿಯವರ ಯಶಸ್ಸಿನ ಕಥೆ ಇದು. ಆಯುರ್ವೇದ ಥೆರಪಿ ಕಲಿತಿರುವ ಹರಿಣಾಕ್ಷಿ ಅದೇ ವೃತ್ತಿಯನ್ನು ಚೆನ್ನೈ ಮತ್ತು ಬೆಂಗಳೂರಿನಲ್ಲಿ ತನ್ನ ಪತಿಯೊಂದಿಗೆ ನಿರ್ವಹಿಸಿಕೊಂಡಿದ್ದರು. ಆದರೆ ಮಕ್ಕಳಾದ ಬಳಿಕ ಆ ಕೆಲಸವನ್ನು ನಿರ್ವಹಿಸುವುದು ಅಸಾಧ್ಯವಾದಾಗ ಹರಿಣಾಕ್ಷಿ ಊರಿಗೆ ಬಂದಿದ್ದರು. ಇದೇ ಸಮಯದಲ್ಲಿ ಪತಿಯೂ ಆಕೆಯನ್ನು ತೊರೆದು ಹೋಗಿದ್ದ. ಇಬ್ಬರು ಚಿಕ್ಕ ಮಕ್ಕಳ ಜೊತೆಗೆ ತನ್ನ ಬದುಕಿನ ಬಂಡಿಯನ್ನು ಎಳೆಯಬೇಕಾದ ಜವಾಬ್ದಾರಿ ಹರಿಣಾಕ್ಷಿಯ ಹೆಗಲ ಮೇಲೆ ಬಿದ್ದಿತ್ತು.

ಮನೆ ಮನೆಗೆ ತೆರಳಿ ಕೂಲಿ ಮಾಡಿ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಮನೆಯನ್ನು ನಡೆಸುತ್ತಿದ್ದರು.‌ ಕೂಲಿಯ ಜೊತೆಗೆ ಕೆಲವು ಮನೆಗಳಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸವೂ ಸಿಗುತ್ತಿತ್ತು. ಒಂದು ಕಾಯಿ ಸುಲಿದರೆ 1 ರೂಪಾಯಿ ಸಿಗುತ್ತದೆ ಎನ್ನುವುದನ್ನು ಅರಿತ ಹರಿಣಾಕ್ಷಿ ಕಾಯಿ ಸುಲಿಯುವುದನ್ನು ಅಭ್ಯಾಸ ಮಾಡಿಕೊಂಡರು. ಬಳಿಕ ಗಂಟೆಗೆ 100 ಕಾಯಿಗಳಂತೆ ಸುಲಿಯುವುದಕ್ಕೆ ಆರಂಭಿಸಿದರು.

ಕೂಲಿಯಿಂದ ದಿನಕ್ಕೆ ಸಿಗುವ 250 ರೂಪಾಯಿ ಸಂಬಳಕ್ಕಿಂತ ದಿನಕ್ಕೆ 500 ಕಾಯಿ ಸುಲಿದು 500 ರೂಪಾಯಿ ಮಾಡಬಹುದೆಂದು ಲೆಕ್ಕಾಚಾರ ಹಾಕಿ ತೆಂಗಿನಕಾಯಿ ಸುಲಿಯುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತೆಂಗಿನಕಾಯಿ ಸಲಿಯುವ ಹರಿಣಾಕ್ಷಿ ಮಧ್ಯಾಹ್ನದವರೆಗೆ 1,200 ಕಾಯಿಗಳನ್ನು ಸುಲಭವಾಗಿ ಸುಲಿಯುತ್ತಾರೆ.

ಪುತ್ತೂರಿನ ಆರ್ಲಪದವಿನಲ್ಲಿರುವ ತೆಂಗಿನ ವ್ಯಾಪಾರಿ ಆಲಿಕುಂಞಿ ಯವರಲ್ಲೇ ಹೆಚ್ಚಾಗಿ ತೆಂಗಿನಕಾಯಿ ಸುಲಿಯುವ ಕೆಲಸ ಸಿಗುತ್ತಿದೆ. ವರ್ಷಕ್ಕೆ ಒಂದರಿಂದ ಎರಡು ತಿಂಗಳ ಕಾಲ ಮಾತ್ರ ಕಾಯಿ ಸುಲಿಯಲು ಕಾಯಿಗಳ ಕೊರತೆ ಬಿಟ್ಟರೆ, ಉಳಿದ ಎಲ್ಲಾ ದಿನಗಳಲ್ಲಿ ಸಾಕಷ್ಟು ಕಾಯಿಗಳು ವ್ಯಾಪಾರಿಯ ಬಳಿಯೇ ಸಿಗುತ್ತಿದೆ. ಅಲ್ಲದೆ ಕೆಲವು ಮನೆಗಳಿಗೂ ತೆರಳಿ ತೆಂಗಿನಕಾಯಿ ಸುಲಿಯುತ್ರಿದ್ದು, ಈ ವೃತ್ತಿಯಿಂದ ಸಾಕಷ್ಟು ತೃಪ್ತಿ ಇದೆ ಎನ್ನುತ್ತಾರೆ ಹರಿಣಾಕ್ಷಿ.

ಉದ್ಯೋಗ, ಗಂಡ ಎಲ್ಲವನ್ನೂ ಕಳೆದುಕೊಂಡ ಹರಿಣಾಕ್ಷಿ ಆ ದಿನಗಳಲ್ಲಿ ಮಾನಸಿಕವಾಗಿ ಸಾಕಷ್ಟು‌ ಕುಗ್ಗಿ ಹೋಗಿದ್ದರು. ಆದರೆ‌ ಕೆಲವೇ ದಿನಗಳಲ್ಲಿ ತನ್ನ ಮೇಲಿರುವ ಜವಾಬ್ದಾರಿ ಆಕೆಯನ್ನು ಮೇಲೇಳುವಂತೆ ಮಾಡಿತು. ಕುಳಿತು ಕೊರಗುವುದಕ್ಕಿಂತ ಜೀವನಕ್ಕಾಗಿ ಏನಾದರೂ ಮಾಡಬೇಕೆಂದು ಅಂದು ದೃಢನಿರ್ಧಾರ ಮಾಡಿದ್ದ ಹರಿಣಾಕ್ಷಿ ಇಂದೂ ಅದೇ ದಿಕ್ಕಿನಲ್ಲಿ ಮುಂದೆ ಸಾಗುತ್ತಲೇ ಇದ್ದಾರೆ.

ಮನೆ ಮನೆಗೆ ತೆರಳಿ ತೆಂಗಿನಕಾಯಿ ಸುಲಿಯುತ್ತಿದ್ದ ಆಕೆಗೆ ತೆಂಗಿನಕಾಯಿ ವ್ಯಾಪಾರಿ ಆಲಿಕುಂಞಿ ತಮ್ಮ ಅಂಗಡಿಗೆ ಬರುವ ತೆಂಗಿನಕಾಯಿಯನ್ನು ಸುಲಿಯುವ ಉದ್ಯೋಗ ನೀಡಿದ್ದಾರೆ. ಅತ್ಯಂತ ಅಸಹಾಯಕ ಸ್ಥಿತಿಯಲ್ಲಿರುವ ಹರಿಣಾಕ್ಷಿ ಅಂಗಡಿ ಬರುವಾಗ ಮುಸ್ಲಿಂ ಸಮುದಾಯದ ಓರ್ವ ವ್ಯಕ್ತಿ ಕಾಯಿ ಸುಲಿಯುವ ಕೆಲಸ ನಿರ್ವಹಿಸುತ್ತಿದ್ದರು. ಆತನಿಗೆ ಇನ್ನೊಂದು ಕೆಲಸ ನೀಡಿ ಮಹಿಳೆಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಪುರುಷರಿಗೆ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಎನ್ನುವಂತೆ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ತೆಂಗಿನಕಾಯಿ ವ್ಯಾಪಾರಿ ಆಲಿಕುಂಞಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+