ಮದುವೆಯಾದ 8 ದಿನಕ್ಕೆ 10 ಲಕ್ಷಕ್ಕೆ ಡಿಮಾಂಡ್: ತಲಾಖ್ ನೀಡಿದ ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ
ಮಂಗಳೂರು, ಮೇ 30: ಕೇಂದ್ರ ಸರ್ಕಾರ ದೇಶದಲ್ಲಿ ತ್ರಿಬಲ್ ತಲಾಖ್ ನಿಷೇಧಿಸಿದ್ದರೂ, ತಲಾಖ್ ನೀಡುತ್ತಿರುವುದು ಮಾತ್ರ ಇನ್ನೂ ಜೀವಂತವಿದೆ. ಅದಕ್ಕೆ ನಿದರ್ಶನವೆಂಬಂತೆ ಮಂಗಳೂರಿನಲ್ಲಿ ಮದುವೆಯಾದ ಆರೇ ತಿಂಗಳಲ್ಲಿ ನಿರ್ದಯಿ ಪತಿಯೋರ್ವನು ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ ತಲಾಖ್ ಹೇಳಿ ದಾಂಪತ್ಯವನ್ನೇ ಮುರಿದ ಘಟನೆ ಬೆಳಕಿಗೆ ಬಂದಿದೆ.
ಮಂಗಳೂರಿನ ಮಂಗಳಾದೇವಿ ಸಮೀಪದ ಮಾರ್ನಮಿಕಟ್ಟೆ ನಿವಾಸಿ ಮಹಮ್ಮದ್ ಹುಸೇನ್ ಪತ್ನಿಯನ್ನು ಹಿಂಸಿಸಿ ತಲಾಖ್ ನೀಡಿದ್ದಾನೆ ಎನ್ನಲಾಗಿದೆ. ತರಕಾರಿ ವ್ಯಾಪಾರಿಯಾಗಿರುವ ಹುಸೇನ್, ಮೊದಲ ಗಂಡನ ಸಾವಿನ ಬಳಿಕ ಒಂಟಿಯಾಗಿದ್ದ ಮಹಿಳೆಯನ್ನು ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದಾನೆ.

ಮದುವೆಯ ವೇಳೆ ನಯವಾದ ಮಾತಿನಿಂದ ಸೆಳೆದಿದ್ದ ಹುಸೇನ್ ಮೊದಲ ಗಂಡನ ಮಕ್ಕಳನ್ನು ಸ್ವಂತ ಮಕ್ಕಳ ರೀತಿ ನೋಡೋದಾಗಿ ಮಾತು ಕೊಟ್ಟಿದ್ದ ಎನ್ನಲಾಗಿದೆ. ಎರಡು ತಿಂಗಳು ಚೆನ್ನಾಗಿಯೇ ಸಂಸಾರ ನಡೆದಿತ್ತು. ಆ ಬಳಿಕ ಆತನ ಅಸಲಿ ಮುಖ ಪತ್ನಿಗೆ ಪ್ರದರ್ಶನವಾಗತೊಡಗಿತು. ಮದುವೆಯಾದ ಕೇವಲ ಎಂಟೇ ದಿನಗಳಲ್ಲಿ ನಯವಾಗಿ ಮಾತನಾಡಿ ಸಾಲದಲ್ಲಿದ್ದೇನೆಂದು ಹುಸೇನ್ ಪತ್ನಿಯ ಚಿನ್ನಾಭರಣ ಸೇರಿ 10 ಲಕ್ಷ ರೂ.ವನ್ನು ಪೀಕಿಸಿದ್ದಾನೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ.
A lady named Shabana has filed a complaint against her husband Muhammad Hussain alleging that he pronounced Triple Talaaq and left her. He also took gold and jewellery worth Rs. 10 lakh. A case has been filed in #Mangalore. pic.twitter.com/4M8d0FKqHm
— Imran Khan (@KeypadGuerilla) May 31, 2023
ಕೇವಲ ಹಣ ಒಡವೆಗಾಗಿ ಮದುವೆಯಾಗಿದ್ದ ಹುಸೇನ್ ಪತ್ನಿಯನ್ನು ತವರು ಮನೆಯಲ್ಲೇ ಇರಿಸಿದ್ದನು. ಅಲ್ಲದೆ ಗರ್ಭಿಣಿಯಾಗಿದ್ದ ಆಕೆಯನ್ನು ಬಲವಂತವಾಗಿ ಮಾತ್ರೆ ತಿನ್ನಿಸಿ ಗರ್ಭಪಾತ ಮಾಡಿಸಿದ್ದಾನೆ ಎನ್ನಲಾಗಿದೆ. ಪತಿ ಮನೆಗೆ ಮನೆಗೆ ಬಂದಿದ್ದ ವೇಳೆ ಮನಬಂದಂತೆ ಥಳಿಸಿದ ಹುಸೇನ್ ಜುಟ್ಟು ಹಿಡಿದು ಮೂರು ಬಾರಿ ತಲಾಖ್ ಹೇಳಿ ದಾಂಪತ್ಯ ಸಂಬಂಧಕ್ಕೆ ತಿಲಾಂಜಲಿ ಇಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಪತಿಯ ಹಲ್ಲೆಯಿಂದ ಗಾಯಗೊಂಡಿರುವ ಮಹಿಳೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊದಲ ಪತ್ನಿಗೂ ತಲಾಖ್ ಹೇಳಿ ಸಂಬಂಧ ಕಡಿದುಕೊಂಡಿದ್ದ ಹುಸೇನ್ ಇದೀಗ ಎರಡನೇ ಪತ್ನಿಗೂ ತಲಾಖ್ ಹೇಳಿದ್ದಾನೆ. ಪರಿಣಾಮ ಎರಡನೇ ಪತ್ನಿ ನ್ಯಾಯಕ್ಕಾಗಿ ಪಾಂಡೇಶ್ವರ ಠಾಣೆಯ ಮೆಟ್ಟಿಲೇರಿದ್ದಾಳೆ. ಅಲ್ಲದೆ ತನಗಾದ ಅನ್ಯಾಯ ಮತ್ತೊಬ್ಬ ಹೆಣ್ಣಿಗೆ ಆಗಬಾರದೆಂದು ಮಾಧ್ಯಮದ ಮುಂದೆ ಬಂದು ಅಳಲು ತೋಡಿಕೊಂಡಿದ್ದಾರೆ.
ಎಷ್ಟೇ ಕಷ್ಟ ಕೊಟ್ಟರೂ ಇಂದಲ್ಲ ನಾಳೆ ಸರಿಯಾಗಬಹುದು ಅಂತಾ ಕಾದು ಕುಳಿತಿದ್ದೆ. ಮನೆಯ ಹಿರಿಯರು ರಾಜಿ ಸಂಧಾನ ಮಾಡುವ ಸಂದರ್ಭದಲ್ಲಿ ನೀವು ಹಣಕ್ಕಾಗಿ ಮದುವೆ ಆಗಿದ್ದಾ ಅಂತಾ ಕೇಳಿದರೆ ಹೌದು ಅಂತಾ ಹೇಳಿದ. ಹಿರಿಯರು ಜೊತೆ ಗಂಡನ ಮನೆಗೆ ಹೋದಾಗ ಬಾಗಿಲು ಓಪನ್ ಮಾಡಲಿಲ್ಲ. ನೀನು ಮನೆಗೆ ಬಂದರೆ ನಾನು ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿದ್ದಾನೆ.
ಹತ್ತು ಲಕ್ಷ ರೂಪಾಯಿಗಾಗಿ ಪಾಂಡೇಶ್ವರ ಠಾಣೆಯಲ್ಲಿ ಕಂಪ್ಲೇಟ್ ಕೊಟ್ಟಾಗ ಪೊಲೀಸರು ಪ್ರತಿ ತಿಂಗಳು ನನಗೆ ಮೂವತ್ತು ಸಾವಿರ ಕೊಡಬೇಕು ಎಂದು ಹುಸೇನ್‌ಗೆ ತಾಕೀತು ಮಾಡಿದರು. ಆದರೆ ಇಲ್ಲಿ ತನಕ ಹಣ ಕೊಟ್ಟಿಲ್ಲ. ತಾಯಿ ಕಷ್ಟಪಟ್ಟು ದುಡಿದ ಹಣವನ್ನೆಲ್ಲಾ ಪೀಕಿಸಿದ್ದಾನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ತನಗಾದ ಅನ್ಯಾಯ ಬೇರೆ ಹೆಣ್ಣು ಮಕ್ಕಳಿಗೆ ಆಗಬಾರದು. ಮೊದಲ ಪತ್ನಿಗೂ ಹುಸೇನ್ ಇದೇ ರೀತಿಯ ಹಿಂಸೆ ನೀಡಿದ್ದ. ನನಗೆ ನ್ಯಾಯ ಸಿಗಬೇಕೆಂದು ಪೊಲೀಸರ ಮೊರೆ ಹೋಗಿದ್ದಾರೆ.












Click it and Unblock the Notifications