'ಯುದ್ಧ: ಒಂದು ಉದ್ಯಮ':ಪಠ್ಯದಲ್ಲಿ ಬರಗೂರರ ವಿವಾದಾತ್ಮಕ ಅಧ್ಯಾಯ
ಮಂಗಳೂರು, ಆಗಸ್ಟ್10: ಬಿಸಿಎ, ಬಿಎಸ್ಸಿ(ಅನಿಮೇಷನ್)ಯ ಪ್ರಥಮ ವರ್ಷದ ಕನ್ನಡ ಪಠ್ಯ 'ಪದಚಿತ್ತಾರ' ಪುಸ್ತಕದಲ್ಲಿ ಬರಗೂರು ರಾಮಚಂದ್ರಪ್ಪನವರು ಬರೆದ "ಯುದ್ಧ: ಒಂದು ಉದ್ಯಮ" ಎಂಬ ಅಧ್ಯಾಯವೊಂದು ಸದ್ಯಕ್ಕೆ ಚರ್ಚೆಗೆ ಗ್ರಾಸವಾಗಿದೆ.
ಮಂಗಳೂರು ವಿವಿಯ ಪ್ರಸಾರಾಂಗ ವಿಭಾಗದಿಂದ ಪ್ರಕಟಗೊಂಡ ಈ ಪುಸ್ತಕದ 10 ನೇ ಗದ್ಯವೇ ಹಿರಿಯ ಸಾಹಿತಿ, ವಿಮರ್ಶಕ ಡಾ.ಬರಗೂರು ರಾಮಚಂದ್ರಪ್ಪನವರ, 'ಯುದ್ಧ: ಒಂದು ಉದ್ಯಮ'!

ಬರಗೂರರ "ಸಂಸ್ಕೃತಿ: ಶ್ರಮ ಮತ್ತು ಸೃಜನಶಿಲತೆ" ಎಂಬ ಪುಸ್ತಕದಿಂದ ಆಯ್ದ ಅಧ್ಯಾಯ ಇದು. ಶೈಕ್ಷಣಿಕ ಪಠ್ಯಗಳನ್ನು ಆಯ್ಕೆ ಮಾಡುವುದಕ್ಕೇ ವಿಶೇಷ ಸಮಿತಿಗಳನ್ನು ನೇಮಿಸಲಾಗುತ್ತದೆ. ಆದರೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶವಿರೋಧಿ ಭಾವನೆಯನ್ನು ಬಿತ್ತುವ ಇಂಥ ಅಧ್ಯಾಯಗಳನ್ನು ಸಮಿತಿ ಆಯ್ಕೆ ಮಾಡಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದ್ದು, ವಿವಾದಕ್ಕೆ ಕಾರಣವಾಗಿದೆ.

"ಯುದ್ಧ ಎನ್ನುವುದು ಒಂದು ಉದ್ಯಮವಾಗುತ್ತಿದೆಯಲ್ಲವೇ? ದೇಶಭಕ್ತಿಯ ಗೌರವಾರ್ಥವಾಗಿ ಬೇಕಾದರೆ, ಯಹುದ್ಧವನ್ನು ದೇಶಪ್ರೇಮೋದಮ ಎನ್ನೋಣ" ಎಂಬ ಈ ಅಧ್ಯಾಯದ ಕೊನೆಯ ವಾಕ್ಯಗಳು ದೇಶ ಪ್ರೇಮಿಗಳನ್ನು ರೊಚ್ಚಿಗೆಬ್ಬಿಸಿದ್ದು, ದೇಶಪ್ರೇಮವನ್ನು ಉದ್ಯಮ ಎನ್ನುವುದು ಸರಿಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.












Click it and Unblock the Notifications