ಸಮಸ್ಯೆಯಾಗಿ ಕಾಡುತ್ತಿರುವ ಮಂಗಳೂರು ಟ್ರಾಫಿಕ್ ಸಿಗ್ನಲ್
ಮಂಗಳೂರು, ನವೆಂಬರ್, 17: ಮಂಗಳೂರಿನಲ್ಲಿ ವರ್ಷಗಳಿಂದಲೂ ಸಿಗ್ನಲ್ ವ್ಯವಸ್ಥೆ ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕೆಲವು ಜಂಕ್ಷನ್ ಗಳಲ್ಲಿ ಹೊಸತಂತ್ರಜ್ಞಾನದೊಂದಿಗೆ ನೂತನವಾಗಿ ಅಳವಡಿಸಲಾದ ಸಿಗ್ನಲ್ ಲೈಟುಗಳು ಕೆಟ್ಟು ಹೋಗಿವೆ, ಇನ್ನು ಕೆಲವು ಕಡೆ ಸಿಗ್ನಲ್ ಕಂಬಗಳಿವೆ. ಆದರೆ ದೀಪಗಳೇ ಇಲ್ಲ. ಇದು ಮಂಗಳೂರು ನಗರದ ಸಿಗ್ನಲ್ ಅವ್ಯವಸ್ಥೆ.
ತಿಂಗಳ ಹಿಂದೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಲಾಲ್ಬಾಗ್, ಪಿವಿಎಸ್ ಜಂಕ್ಷನ್, ಅಂಬೇಡ್ಕರ್ ಜಂಕ್ಷನ್ (ಜ್ಯೋತಿ), ಬಲ್ಮಠ, ಬೆಂದೂರ್ವೆಲ್ ಮತ್ತು ಸಿಂಕ್ರೋನೈಡ್ಜ್ (ಟ್ರಾಫಿಕ್ ಜಾಂ ಆಗದೆ ವಾಹನಗಳು ಮುಂದುವರಿಯುವ ಟ್ರಾಫಿಕ್ ಕ್ರಮ) ಟ್ರಾಫಿಕ್ ಸಿಗ್ನಲ್ ಆರಂಭಗೊಂಡಿದೆ. ಆದರೆ ಇದುವರೆಗೂ ಈ ವ್ಯವಸ್ಥೆ ಸರಿಯಾಗಿ ಅನುಷ್ಟಾನಗೊಂಡಿಲ್ಲ. ಆದ್ದರಿಂದ ಈಗಲೂ ಇಲ್ಲಿ ಟ್ರಾಫಿಕ್ ಜಾಂ ಮುಂದುವರೆದೇ ಇದೆ.[ಚಾಲಕರೇ,ಹಿಂಬದಿ ಸವಾರರೇ ಹೆಲ್ಮೆಟ್ ಧರಿಸಲು ಸಿದ್ಧರಾಗಿ]

'ಲಾಲ್‌ಬಾಗ್ ಮತ್ತು ಪಿವಿಎಸ್ ಜಂಕ್ಷನುಗಳ ಬಳಿಕ ಇರುವ ಸಿಗ್ನಲ್ ಗಳಿಂದ ಸುಮಾರು 10 ನಿಮಿಷ ಹಾಳಾಗುತ್ತಿದೆ. ಪ್ರಯಾಣದ ವೇಳೆ ದಾರಿ ಉದ್ದಕ್ಕೂ ಹಲವು ಸಿಗ್ನಗಳು ಸಿಗುವುದರಿಂದ ತುರ್ತು ಸಮಯದಲ್ಲಿ ಹಂಪನಕಟ್ಟೆ ತಲುಪಲು 40 ನಿಮಿಷ ಬೇಕಾಗುತ್ತದೆ. ಬಿಜೈ ಕುಂಟಿಕಾನದಿಂದ ಹಂಪನಕಟ್ಟೆಗೆ ಪ್ರಯಾಣಿಕರನ್ನು ಕೊಂಡೊಯ್ಯುವುದೇ ಕಷ್ಟವಾಗಿದೆ. ಇದು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವ ಸಿಗ್ನಲ್ಲುಗಳಾಗಿವೆ' ಎಂದು ರಿಕ್ಷಾ ಚಾಲಕರೊಬ್ಬರು ದೂರಿದ್ದಾರೆ.
ಲಾಲ್ ಬಾಗ್ ಜಂಕ್ಷನ್ ನಲ್ಲಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದತ್ತ ಬಲಕ್ಕೆ ತಿರುಗಬೇಕಿದ್ದರೆ 90ಸೆಕೆಂಡು, ಅಲ್ಲಿಂದ ಮುಂದಕ್ಕೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಬಿಜೈಯತ್ತ ಸಾಗಬೇಕಾದರೆ ಪುನಃ 140 ಸೆಕೆಂಡುಗಳ ಕಾಲ ವಾಹನ ಚಾಲಕರು ಕಾಯಬೇಕಾಗುತ್ತದೆ.[ಸಂಚಾರಿ ನಿಯಮ ಪಾಲಿಸದಿದ್ರೆ ಕೋರ್ಟ್ ಗೆ ಹೋಗಿ ದಂಡ ಕಟ್ಟಿ]
"ಟ್ರಾಫಿಕ್ ಸಮಸ್ಯೆಯಿಂದ ಬೆಳಿಗ್ಗೆ ಮತ್ತು ಸಂಜೆ ಪ್ರತಿಯೊಂದು ಜಂಕ್ಷನುಗಳಲ್ಲಿ ವಾಹನಗಳು ಏಕಾಏಕಿ ದಟೈಸುತ್ತವೆ. ಅವುಗಳ ನಿರ್ವಹಣೆ ಕಷ್ಟವಾಗುತ್ತಿದೆ" ಎಂದು ಸಂಚಾರಿ ಪೊಲೀಸರೊಬ್ಬರು ಟ್ರಾಫಿಕ್ ತಂದೊಡ್ಡುತ್ತಿರುವ ಸಮಸ್ಯೆ ಬಗ್ಗೆ ಹೇಳಿದ್ದಾರೆ.
ಕಂಕನಾಡಿ ಬೆಂದುರ್ ವೆಲ್ ಮತ್ತು ಬಲ್ಮಠದಲ್ಲಿ ಟ್ರಾಫಿಕ್ ಲೈಟುಗಳಿಂದ ವಾಹನ ಚಾಲಕರು ಮತ್ತು ಪಾದಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಕಂಕನಾಡಿಯಲ್ಲಿ 120 ಸೆಕೆಂಡ್ ಮತ್ತು ಅಲ್ಲಿಂದ 50 ಮೀಟರ್ ಅಂತರದಲ್ಲಿರುವ ಬೆಂದುರ್ ವೆಲ್ ಸಿಗ್ನಲ್ ಎದುರು 50 ಸೆಕೆಂಡು ವಾಹನ ನಿಲ್ಲಿಸಬೇಕಾಗಿತ್ತು ಎಂದು ವಾಹನ ಚಾಲಕರೊಬ್ಬರು ಅಸಮರ್ಪಕ ಸಿಗ್ನಲ್ ವ್ಯವಸ್ಥೆ ಬಗ್ಗೆ ವಿವರಿಸಿದ್ದಾರೆ.[ಬೆಂಗಳೂರಿನ ಪುಟ್ಟ ಟ್ರಾಫಿಕ್ ಪೊಲೀಸನಿಗೊಂದು ಸಲಾಂ!]
ಮೂಲಸೌಕರ್ಯ ಕೊರತೆಯೇ ನಗರದ ಸಂಚಾರ ಸಮಸ್ಯೆಗೆ ಕಾರಣ : ಮುರುಗನ್
ಮೂಲಸೌಕರ್ಯ ಕೊರತೆಯೇ ನಗರದ ಸಂಚಾರ ಸಮಸ್ಯೆಗೆ ಕಾರಣ. ಈ ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ. ವಿವಿಧ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಹೊಂದಾಣಿಕೆಯಾದಾಗ ಈ ಸಮಸ್ಯೆ ಮುಕ್ತಾಯಗೊಳ್ಳಲಿದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿಗಳ ಜಂಕ್ಷನುಗಳಲ್ಲಿ ರಸ್ತೆ ಸಂಚಾರ ನಿರ್ವಹಿಸಿದಾಗ ವ್ಯವಸ್ಥಿತ ಸಂಚಾರ ಸಾಧ್ಯ.[ಸಂಚಾರಿ ನಿಯಮ ಉಲ್ಲಂಘನೆ ಪತ್ತೆಗೆ ಹೊಸ ಆಪ್]
ಟ್ರಾಫಿಕ್ ದಟ್ಟಣೆ ಕುರಿತಾಗಿ ಮಂಗಳೂರು ನಗರ ಪಾಲಿಕೆ, ಜಂಕ್ಷನ್ ಗಳ ಬದಿಯಲ್ಲಿರುವ ನಿವಾಸಿಗಳು, ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದೇವೆ. ಜಂಕ್ಷನು ಗಳು ಶೀಘ್ರದಲ್ಲಿಯೇ ಅಭಿವೃದ್ದಿಗೊಳ್ಳಲಿವೆ ಎಂದು ಪೋಲೀಸ್ ಆಯುಕ್ತ ಮುರುಗನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ












Click it and Unblock the Notifications