• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋಟಾರ್ ಸೈಕಲ್ ಡೈರಿ ಫಿಲಂ ಪ್ರದರ್ಶನ, ಪುಸ್ತಕ ಬಿಡುಗಡೆ, ಸಂವಾದ

By Mahesh
|

ಮಂಗಳೂರು, ಜ.8: ನಗರದ ಸಾಹಿತ್ಯ ಸಮುದಾಯ, ಸಹಮತ ಫಿಲ್ಮ್ ಸೊಸೈಟಿ, ಗದಗದ ಲಡಾಯಿ ಪ್ರಕಾಶನ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಸಂಘದ ವತಿಯಿಂದ ಸ್ಪಾನೀಷ್ ಚಿತ್ರ ಮೋಟಾರ್ ಸೈಕಲ್ ಡೈರಿ ವಿಶೇಷ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ಮೋಟಾರ್ ಸೈಕಲ್ ಡೈರಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೂ ಇರುತ್ತದೆ. ಈ ವಿಶೇಷ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಜ. 10ರಂದು ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾ ಭವದಲ್ಲಿ ಡಾ.ಎಂ. ಸತ್ಯಪ್ರಕಾಶ್ ಅಧ್ಯಕ್ಷತೆಯಲ್ಲಿ ಚಲನಚಿತ್ರ ನಿರ್ದೇಶಕ ಕೇಸರಿ ಹರವೂ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.

ಪುಸ್ತಕದ ಕುರಿತು ವಾರ್ತಾಭಾರತಿಯ ಸುದ್ದಿ ಸಂಪಾದಕರಾದ ಬಿ.ಎಂ. ಬಶೀರ್ ಮಾತನಾಡಲಿದ್ದು, ಲೇಖಕಿ ಡಾ.ಎಚ್.ಎಸ್. ಅನುಪಮಾ ಪ್ರಾಸ್ತಾವಿಕವಾಗಿ ಮಾತನಾಡುವರು. 10 ಗಂಟೆಗೆ ‘ದ ಮೋಟರ್ ಸೈಕಲ್ ಡೈರೀಸ್' ಸ್ಪಾನಿಷ್ ಚಲನಚಿತ್ರ ಪ್ರದರ್ಶನ ನಡೆಯಲಿದೆ.

ಚಲನಚಿತ್ರದ ಬಗ್ಗೆ ನಡೆಯುವ ಸಂವಾದದಲ್ಲಿ ಚಿನ್ಮಯ್ ಹೆಗ್ಡೆ, ಪ್ರಕೃತಿ ಕಲ್ಯಾಣ್‌ಪುರ್, ಸಾಮಾಜಿಕ ಕಾರ್ಯಕರ್ತರಾದ ವಾಣಿ ಪೆರಿಯೋಡಿ, ಪತ್ರಕರ್ತರಾದ ಶಶಿಧರ ಹೆಮ್ಮಾಡಿ, ರಾಜಲಕ್ಷ್ಮೀ ಕೋಡಿಬೆಟ್ಟು ಮತ್ತು ಹರ್ಷದ್ ವರ್ಕಾಡಿ ಭಾಗವಹಿಸಲಿದ್ದಾರೆ .

ಚೇ ಗುವೇರಾ ಅವರ ಆತ್ಮಕಥನ ದಿ ಮೋಟರ್ ಸೈಕಲ್ ಡೈರೀಸ್ ನ ಕನ್ನಡ ಅನುವಾದವನ್ನು ಡಾ.ಎಚ್ ಎಸ್ ಅನುಪಮ ಅವರು ಮಾಡಿದ್ದಾರೆ. ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತ್ಯ ಪ್ರಕಾಶ್ ಎಂ, ಪ್ರಿ ಸುನಂದಾ ಅವರು ಉಪಸ್ಥಿತರಿರಲಿದ್ದಾರೆ.

ಲೇಖಕಿ ಅನುಪಮಾ: ಶಿವಮೊಗ್ಗ ಜಿಲ್ಲೆಯ ಎಚ್.ಎಸ್ ಅನುಪಮಾ ಅವರು ವೈದ್ಯೆ ಹಾಗೂ ಲೇಖಕಿ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಕವಲಕ್ಕಿಯಲ್ಲಿ ವೃತ್ತಿ ನಿರತರು. ಕವಿತೆ, ಕತೆ, ಪ್ರವಾಸ ಕಥನ, ವೈದ್ಯಕೀಯ ಬರಹ ಹಾಗೂ ಸಮಕಾಲೀನ ವಿಚಾರಗಳಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಬರೆದಿದ್ದಾರೆ. ದಲಿತ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳೊಡನೆ ಗುರುತಿಸಿಕೊಂಡಿದ್ದಾರೆ. ಲಡಾಯಿ ಪ್ರಕಾಶನದ ಕಾರ್ಯಗಳಲ್ಲಿ ಸಹಭಾಗಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Kannada version of the The Motor Cycle Dairies penned down by Dr. HS Anupama will be released by Environmentalist, Filmmaker Kesari Haravu on Jan.10,2015. A special screeing of the spanish movie also organised at Mangalore University by Sahamata Film Society, Ladai Prakashana, Gadaga, Sahithya Samudaya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more