ಕೆಂಪು ದೀಪ ನಿಷೇಧ: ಸಚಿವ ರಮಾನಾಥ ರೈಗೆ ಆದೇಶ ಬಂದಿಲ್ವಾ?

ರಾಜ್ಯದಲ್ಲಿ ಕೆಲ ಮಂತ್ರಿಗಳು ವಾಹನಕ್ಕೆ ಅಳವಡಿಸಿದ ದೀಪಗಳನ್ನು ಇನ್ನೂ ತೆಗೆದೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಕೂಡಾ ಸೈರನ್ ಹಾಕಿಕೊಂಡೇ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ.

ಮಂಗಳೂರು, ಏಪ್ರಿಲ್ 26 : ವಿಐಪಿ ಸಂಸ್ಕೃತಿಗೆ ತಿಲಾಂಜಲಿ ಇಡಲು ಕೇಂದ್ರ ಸಂಪುಟ ಜಾರಿಗೆ ತಂದ ಕೆಂಪು ಗೂಟದ ಕಾರು ನಿಷೇಧದ ನಿಯಮ ಹಲವೆಡೆ ರಾಜಕಾರಣಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ಮುಂದೆ ಮಂತ್ರಿಗಳು, ಅಧಿಕಾರಿಗಳು ವಾಹನದಲ್ಲಿ ಕೆಂಪು ದೀಪವಿರಬಾರದು ಎಂದು ಕೇಂದ್ರ ಸರಕಾರ ಆದೇಶಿಸಿತ್ತು. ಆದ್ರೆ, ರಾಜ್ಯದಲ್ಲಿ ಕೆಲ ಮಂತ್ರಿಗಳು ವಾಹನಕ್ಕೆ ಅಳವಡಿಸಿದ ದೀಪಗಳನ್ನು ಇನ್ನೂ ತೆಗೆದೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಕೂಡಾ ಸೈರನ್ ಹಾಕಿಕೊಂಡೇ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ.[ಸಿದ್ದರಾಮಯ್ಯ ಕಾರಿನ ಕೆಂಪು ದೀಪ ತೆಗೆದವರ್ಯಾರು..?!]

Red beacon is still in Ramanath Rai's car

ಈ ಬಗ್ಗೆ ಮಂಗಳೂರಿನಲ್ಲಿಂದು ಪತ್ರಕರತರು ಕೇಳಿದ ಪ್ರಶ್ನೆಗೆ, 'ಕೇಂದ್ರ ಸರಕಾರ ಕೇವಲ ಪತ್ರಿಕೆಯಲ್ಲಿ ಮಾತ್ರವೇ ಪ್ರಕಟಣೆ ನೀಡಿದೆ. ಆದರೆ, ಲಿಖಿತವಾಗಿ ತಮಗೆ ಯಾವುದೇ ಆದೇಶ ಬಂದಿಲ್ಲ. ತಾನು ಕಾನೂನು ಉಲ್ಲಂಘಿಸುವವನಲ್ಲ. ಆದೇಶದ ಪ್ರತಿ ಕೈಸೇರಿದ ಕೂಡಲೇ ಕಾರಿನ ಕೆಂಪು ದೀಪವನ್ನು ತೆಗೆಸುತ್ತೇನೆ' ಎಂದು ಸಚಿವ ರಮಾನಾಥ್ ರೈ ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+