ದೀಪ್ತಿ ಮಾರ್ಲ ವಿರುದ್ಧ ಎನ್ಐಎ ಚಾರ್ಜ್‌ಶೀಟ್ ಸಲ್ಲಿಕೆ; ಉಗ್ರ ಸಂಪರ್ಕದ ಬಗ್ಗೆ ಪ್ರಬಲ ಸಾಕ್ಷ್ಯ ಲಭ್ಯ
ಮಂಗಳೂರು, ಫೆಬ್ರವರಿ 2: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಮಾಜಿ ಶಾಸಕ ದಿ. ಇದಿನಬ್ಬ ಮಗನ ಮನೆಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದಾಳಿ ನಡೆಸಿದ್ದು, ಇದಿನಬ್ಬ ಮೊಮ್ಮಗನ ಪತ್ನಿ ದೀಪ್ತಿ ಮಾರ್ಲ ಆಲಿಯಾಸ್ ಮರಿಯಂಳನ್ನು ವಶಕ್ಕೆ ಪಡೆದಿತ್ತು.
ದೀಪ್ತಿ ಮಾರ್ಲಳನ್ನು ವಶಕ್ಕೆ ಪಡೆಯುವ ಮುನ್ನ ಸುಮಾರು ಆರು ತಿಂಗಳ ಹಿಂದೆ ಇದಿನಬ್ಬ ಮೊಮ್ಮಗ ಅನಾಸ್ ಅಬ್ದುಲ್ ರೆಹಮಾನ್‌ನನ್ನೂ ವಶಕ್ಕೆ ಪಡೆದಿತ್ತು. ಇವರ ಜೊತೆಗೆ ದೇಶದ ಹಲವೆಡೆ ಒಟ್ಟು ಎಂಟು ಮಂದಿಯನ್ನು ಎನ್ಐಎ ಬಂಧಿಸಲಾಗಿತ್ತು. ಇದೀಗ ಎನ್ಐಎ ಬಂಧಿತರ ಚಾರ್ಜ್‌ಶೀಟ್ ತಯಾರು ಮಾಡಿ ಪ್ರಕರಣದ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿದೆ. ಇದರಲ್ಲಿ ರಾಷ್ಟ್ರೀಯ ತನಿಖಾ ದಳ ಹಲವು ಮಹತ್ವದ ಅಂಶಗಳನ್ನು ಉಲ್ಲೇಖ ಮಾಡಿದೆ.
ಮಾಜಿ ಶಾಸಕ ಇದಿನಬ್ಬ ಕುಟುಂಬದ ಉಗ್ರ ಸಂಪರ್ಕದ ಕುರಿತು ಮತ್ತೆ ಪ್ರಬಲ ಸಾಕ್ಷ್ಯ ಲಭ್ಯವಾಗಿದೆ. ಲವ್ ಜಿಹಾದ್‌ಗೆ ಒಳಗಾಗಿ ಉಗ್ರ ಮಹಿಳೆಯಾಗಿ ಬದಲಾಗಿದ್ದ ಉಳ್ಳಾಲದ ಮಾಜಿ ಶಾಸಕ ಇದಿನಬ್ಬ ಮೊಮ್ಮಗನ ಪತ್ನಿ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಸೇರಿದಂತೆ ಎಂಟು ಜನರ ವಿರುದ್ದ ಎನ್ಐಎ ಚಾರ್ಜ್‌ಶೀಟ್ ಸಲ್ಲಿಸಿದೆ.

ಆರೋಪಿಗಳಾದ ದೀಪ್ತಿ ಮಾರ್ಲ, ಇದಿನಬ್ಬ ಮೊಮ್ಮಗ ಅಮ್ಮರ್ ಅಬ್ದುಲ್ ರಹಿಮಾನ್ ಇನ್ನುಳಿದ ಮೊಹಮ್ಮದ್ ವಕಾರ್ ಲಾನ್ ಯಾನೆ ವಿಲ್ಸನ್ ಕಾಶ್ಮೀರಿ, ಮಿಜಾ ಸಿದ್ದೀಕ್, ಶಿಫಾ ಹಾರೀಸ್ ಯಾನೆ ಆಯಿಷಾ, ಒಬೈದ್ ಹಮೀದ್ ಮಟ್ಟಾ, ಮಾದೇಶ್ ಶಂಕರ್ ಯಾನೆ ಅಬ್ದುಲ್ಲಾ, ಮುಜಾಮಿಲ್ ಹಸನ್ ಭಟ್ ವಿರುದ್ಧ ಈ ದೋಷಾರೋಪಣ ಪಟ್ಟಿಯನ್ನು ಎನ್ಐಎ ಸಲ್ಲಿಕೆ ಮಾಡಿದೆ.
ಈ ಎಂಟು ಆರೋಪಿಗಳು ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ಐಸಿಸ್‌ಗೆ ಜನರನ್ನು ನೇಮಕ ಮಾಡುವುದು, ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹಿಸಿವುದರಲ್ಲಿ ತೊಡಗಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ.
ಉಗ್ರ ಚಟುವಟಿಕೆ ಸಂಬಂಧಿಸಿ ಮಾರ್ಚ್ 5, 2021ರಂದು ಕೇರಳದ ಮಹಮ್ಮದ್ ಅಮೀನ್ ಮತ್ತು ಆತನ ಇಬ್ಬರು ಸಹಚರರನ್ನು ಎನ್ಐಎ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿತ್ತು. ಆ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು, ಭಟ್ಕಳ, ಬೆಂಗಳೂರು, ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ನಡೆಸಿ ಈ ಎಂಟು ಜನರನ್ನು ಬಂಧಿಸಲಾಗಿದೆ. ಲ್ಯಾಪ್‌ಟಾಪ್, ಸಿಮ್ ಕಾರ್ಡ್, ಹಾರ್ಡ್ ಡಿಸ್ಕ್ ಡ್ರೈವ್ ಸಹಿತ ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಂಡಿರುವುದರ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಾದ ಟೆಲಿಗ್ರಾಂ, ಹೂಪ್, ಇನ್‌ಸ್ಟಗ್ರಾಂ ಬಳಸಿಕೊಂಡು ಈ ಆರೋಪಿಗಳು ಐಸಿಸ್‌ಗೆ ಜನರನ್ನು ಸೇರಿಸುವುದನ್ನು ಮಾಡುತ್ತಿದ್ದರು.

ದೀಪ್ತಿ ಮಾರ್ಲ ಮರಿಯಂ ಮಾಜಿ ಶಾಸಕ ದಿ. ಇದಿನಬ್ಬ ಮಗ ಬಿ.ಎಂ. ಭಾಷಾನ ಸೊಸೆಯಾಗಿದ್ದು, ಇದಿನಬ್ಬ ಮೊಮ್ಮಗ ಅನಾಸ್ ಅಬ್ದುಲ್ ರೆಹಮಾನ್ ಮದುವೆಯಾಗಿ ದೀಪ್ತಿ ಮಾರ್ಲ ಇಸ್ಲಾಂಗೆ ಮತಾತಂತರಗೊಂಡಿದ್ದರು. ನಂತರ ಕ್ರೋನಿಕಲ್ ಪೌಂಡೇಶನ್ ಎಂಬ ಇನ್ಸ್ಟಾಗ್ರಾಂ ಪೇಜ್ ಮೂಲಕ ದೀಪ್ತಿ ಐಸಿಸ್ ಕೆಲಸ ಮಾಡಲು ಶುರು ಮಾಡಿದ್ದಳು. ನಂತರ ಪತಿ ಅನಾಸ್ ಅಬ್ದುಲ್ ರೆಹಮಾನ್, ಸಂಬಂಧಿ ಅಮ್ಮರ್ ಅಬ್ದುಲ್ ರೆಹಮಾನ್ ಸೂಚನೆಗಳಂತೆ ಐಸಿಸ್ ಪರವಾಗಿ ಕೆಲಸ ಮಾಡುತ್ತಿದ್ದಳು. ಸುಮಾರು 15 ನಕಲಿ ಸೋಷಿಯಲ್ ಮೀಡಿಯಾ ಖಾತೆಗಳನ್ನು ದೀಪ್ತಿ ಹೊಂದಿದ್ದಾಳೆ.
ಈ ಹಿಂದೆ ಎನ್ಐಎನಿಂದ ಬಂಧಿತನಾಗಿದ್ದ ಮಾದೇಶ ಪೆರುಮಾಳ್ನ್ನು ಮತಾಂತರ ಮಾಡಿ ಐಸಿಸ್‌ಗೆ ಕೆಲಸ ಮಾಡುವಂತೆ ದೀಪ್ತಿ ತಿಳಿಸಿದ್ದರು. ಮಾದೇಶ್ ಪೆರುಮಾಳ್ ಹನಿಟ್ರಾಪ್ ಮಾಡಲು ದೀಪ್ತಿ ಮಾರ್ಲ 10 ಲಕ್ಷ ಖರ್ಚು ಮಾಡಿದ್ದರು. ಇದುವರೆಗೂ ಸುಮಾರು 10 ಯುವಕರನ್ನು ಮತಾಂತರಗೊಳಿಸಿರುವ ದೀಪ್ತಿ ಐಸಿಸ್‌ಗೆ ಸೇರಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ದೇಶದಲ್ಲೇ ಇದ್ದುಕೊಂಡು ಉಗ್ರ ಸಂಘಟನೆ ಐಸಿಸ್ ಜೊತೆ ನೇರ ಸಂಪರ್ಕ ಹೊಂದಿರುವುದು ಎನ್ಐಎ ವಿಚಾರಣೆಯಲ್ಲಿ ತಿಳಿದುಬಂದಿದೆ.












Click it and Unblock the Notifications