Get Updates
Get notified of breaking news, exclusive insights, and must-see stories!

ಮಂಗಳೂರಿನ ಮೀನೂಟ ಸವಿಯುತ್ತಾ ಹೊಸವರ್ಷಾಚರಣೆಗೆ ಸಿದ್ಧರಾಗಿದ್ದಾರಾ? ಇಲ್ಲಿದೆ ನಿಮಗೆ ಬೇಕಾದ ಪ್ಲಾನ್‌

ಮಂಗಳೂರು, ಡಿಸೆಂಬರ್‌ 23: ಕ್ರಿಸ್‌ಮಸ್ ಜೊತೆಗೆ ಹೊಸವರ್ಷಾಚರಣೆಗೆ ದಿನಗಣನೆ ಆರಂಭವಾಗಿದೆ. ವರ್ಷಾಂತ್ಯದ ದಿನ ನೆನಪಿನಂಗಳದಲ್ಲಿ ಶಾಶ್ವತ ವಾಗಿ ಉಳಿಯಲು ಈಗಾಗಲೇ ಹಲವು ಜನ ಹತ್ತಾರು ಯೋಜನೆಗಳನ್ನು ರೂಪಿಸಿದ್ದಾರೆ. ಅದರಲ್ಲೂ ರಾಜ್ಯದ ಕಡಲ ನಗರಿ ಮಂಗಳೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿದೆ.

ಮಂಗಳೂರಿಗೆ ಬಂದು ಮೀನೂಟ ಮಾಡಿ ಹೋಗದಿದ್ದರೆ ಹೇಗೆ ಎನ್ನುವ ಜನ ಈಗಾಗಲೇ ಪ್ರವಾಸಿ ತಾಣ ಗಳ ಜೊತೆ ಒಳ್ಳೆಯ ಮೀನೂಟ ಎಲ್ಲಿ ಸಿಗುತ್ತದೆ ಅಂತಾ ಗೂಗಲ್‌ನಲ್ಲಿ ಜಾಲಾಡಿದ್ದಾರೆ. ಹಾಗಾದರೆ ವರ್ಷಾಂತ್ಯದಲ್ಲಿ ಮಂಗಳೂರಿಗೆ ಬರುವ ಪ್ರವಾಸಿಗರು ಯಾವ ಪ್ರದೇಶಗಳಿಗೆ ಭೇಟಿ ನೀಡಬಹುದು. ಯಾವ ಹೊಟೇಲ್‌ಗಳಲ್ಲಿ ಮೀನೂಟ ಸವಿಯಬಹುದು ಎಂಬುವುದರ ವಿಸ್ತಾರವಾದ ಮಾಹಿತಿ ಇಲ್ಲಿದೆ ನೋಡಿ.

Must Visit Tourist Places In Mangaluru During Christmas And New Year

ಮಂಗಳೂರು ಅಂದಾಕ್ಷಣ ರಪ್ ಅಂತಾ ಪ್ರವಾಸಿಗರಿಗೆ ಕಣ್ಣೆದುರು ಬರೋದು ಬೀಚ್‌ಗಳು. ಮಂಗಳೂರಿನ ಪ್ರಸಿದ್ಧ ಬೀಚ್‌ಗಳಲ್ಲಿ ಪಣಂಬೂರು ಬೀಚ್ ಕೂಡಾ ಒಂದು. ಈಗಾಗಲೇ ಬೀಚ್ ಹೊಸವರ್ಷಾಚರಣೆಗೆ ಬರುವ ಪ್ರವಾಸಿಗರಿಗೆ ಸಿದ್ಧವಾಗಿದೆ. ಖಾಸಗಿ ಮತ್ತು ಸರ್ಕಾರ ಸಹಭಾಗಿತ್ವದಲ್ಲಿ ಬೀಚ್‌ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಹಲವು ಸಾಹಸ ಕ್ರೀಡೆ ಗಳನ್ನು ಅಳವಡಿಸಲಾಗಿದೆ

ಫ್ಲೋಟಿಂಗ್ ಬ್ರಿಡ್ಜ್, ಪ್ಯಾರಾ ಸೇಲಿಂಗ್, ಸೇರಿದಂತೆ ವಿವಿಧ ಸಾಹಸ ಮಯ ಕ್ರೀಡೆಗಳನ್ನು ಪಣಂಬೂರು ಬೀಚ್‌ನಲ್ಲಿ ಅಳವಡಿಸಲಾಗಿದೆ. ಪಣಂಬೂರು ಬೀಚ್ ನಲ್ಲಿ ಪ್ರವಾಸಿಗರಿಗೆ ಕಡಲಿನಲ್ಲಿ ಈಜಾಟ ಮಾಡಬಹುದು. ಬೀಚ್ ಬದಿಯಲ್ಲಿ ತರಹೇವಾರಿ ಮೀನಿನ ಖಾದ್ಯಗಳು ಸಿಗೋದರಿಂದ ಪಣಂಬೂರು ಬೀಚ್ ಪ್ರವಾಸಿಗರ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ. ಪಣಂಬೂರು ಬೀಚ್ ಮಂಗಳೂರು ನಗರದಿಂದ ಹನ್ನೆರಡು ಕೀಮೀ ಅಂತರದಲ್ಲಿದೆ.

Must Visit Tourist Places In Mangaluru During Christmas And New Year

ಇನ್ನು ಮಂಗಳೂರಿನ ತಣ್ಣೀರು ಬಾವಿ ಬೀಚ್ ಕೂಡಾ ಪ್ರವಾಸಿಗರ ಫೇವರೇಟ್ ಸ್ಥಳಗಳಲ್ಲಿ ಒಂದಾಗಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯುಳ್ಳ ಈ ಬೀಚ್‌ನಲ್ಲಿ ಈಜಾಡೋದು ಅಪಾಯಕಾರಿ. ಹೀಗಾಗಿ ಪ್ರವಾಸಿಗರು ಕಡಲ ದಡದಲ್ಲಿ ಕೂತು ಸಮುದ್ರದ ಅಲೆಗಳ ಏರಿಳಿತ, ಅಲೆಗಳ ಸದ್ದು ಅಸ್ವಾದಿಸಲು ಇಚ್ಛೆ ಪಡುವವರು ತಣ್ಣೀರುಬಾವಿ ಬೀಚ್‌ಗೆ ಹೋಗಬಹುದಾಗಿದೆ.

ತಣ್ಣೀರುಬಾವಿ ಮೂರು ಕಿ.ಮೀ ಅಂತರದಲ್ಲಿ ಅರಣ್ಯ ಇಲಾಖೆಯ ಟ್ರೀ ಪಾರ್ಕ್ ಇದ್ದು, ಕಡಲದಡದ ಪಾರ್ಕ್‌ನಲ್ಲಿ ಕಾಲಕಳೆಯಬಹುದಾಗಿದೆ.ಇನ್ನು ಮಂಗಳೂರು ನಗರ ಹೊರವಲಯದ ಸುರತ್ಕಲ್‌ನ ಗೊಡ್ಡೆಕೊಪ್ಪಲು ಪ್ರದೇಶದಲ್ಲಿ ಸಮುದ್ರದಲ್ಲಿ ಕೆಟ್ಟುನಿಂತಿರುವ ಹಡಗನ್ನು ಕಾಣಲು, ಫೋಟೋಶೂಟ್‌ಗಾಗಿ ಉತ್ತಮ ಜಾಗ ಇದಾಗಿದೆ. ಸೋಮೇಶ್ವರದಿಂದ ಪಡುಬಿದ್ರಿ ತನಕದ ಕಡಲಕಿನಾರೆ ಅದ್ಭುತ ಸೌಂದರ್ಯದ ಗಣಿಯಾಗಿದ್ದು, ವರ್ಷಾಂತ್ಯವನ್ನು ಅವಿಸ್ಮರಣೀಯವಾಗಿ ಕಳೆಯಬಹುದಾಗಿದೆ.

Must Visit Tourist Places In Mangaluru During Christmas And New Year

ಪಿಲಿಕುಳ ಜೈವಿಕ ಉದ್ಯಾನವನ

ಮಂಗಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿರುವ ಪಿಲಿಕುಳ ಜೈವಿಕ ಉದ್ಯಾನವನವೂ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಪಿಲಿಕುಳದ ಜೈವಿಕ ಉದ್ಯಾನವನ ದಲ್ಲಿ ನಾನಾ ಜಾತಿಯ ಪ್ರಾಣಿ-ಪಕ್ಷಿಗಳು, ಉರಗ-ಸರೀಸೃಪಗಳಿದ್ದು ಮಕ್ಕಳಿಗೆ ಇಷ್ಟವಾಗುವ ಪ್ರದೇಶಗಳಲ್ಲಿ ಒಂದಾಗಿದೆ.. ಇಡೀ ಕುಟುಂಬ ಪಿಲಿಕುಳದಲ್ಲಿ ಸುತ್ತಾಡಿ, ಪ್ರಾಣಿ-ಪಕ್ಷಿಗಳನ್ನು ನೋಡುತ್ತಾ ದಿನದ ಅರ್ಧದಿನವನ್ನು ಸಂಭ್ರಮದಿಂದ ಕಳೆಯಬಹುದಾಗಿದೆ.

ಪಿಲಿಕುಳ ಜೈವಿಕ ಉದ್ಯಾನವನದ ಸನಿಹದಲ್ಲಿ ಮಾನಸ ವಾಟರ್ ಅಮ್ಯೂಸಿಂಗ್ ಪಾರ್ಕ್ ಇದ್ದು, ಹೊಸ ಕ್ರೀಡೆಗಳು ಅಮ್ಯೂಸಿಂಗ್ ಪಾರ್ಕ್‌ಗೆ ಸೇರ್ಪಡೆಯಾಗಿದೆ. ಹೊಸದಾಗಿ ಗುತ್ತಿಗೆ ಪಡೆದ ಕಂಪೆನಿ ಪಾರ್ಕ್‌ಗೆ ನೂತನ ಟಚ್ ನೀಡಿದ್ದು, ಪೈಸಾ ವಸೂಲ್ ಗ್ಯಾರಂಟಿ ಅನ್ನೋದು ಮಾನಸ ಅಮ್ಯೂಸ್ ಪಾರ್ಕ್ ಗೆ ಭೇಟಿ ನೀಡಿದ ಪ್ರವಾಸಿಗರ ಮಾತಾಗಿದೆ. ಪಿಲಿಕುಳ ಝೂನಿಂದ ಕಾಲ್ನಡಿಗೆಯ ದೂರದಲ್ಲಿ ವಾಟರ್ ಸ್ಪೋರ್ಟ್ಸ್ ಸೆಂಟರ್, ಪಾರ್ಕ್, ಲೇಕ್ ಸ್ಪಾಟ್ ಇರೋದರಿಂದ ವಾಮಂಜೂರಿನ ಪಿಲಿಕುಳ ಪ್ರದೇಶ ಪ್ರವಾಸಿಗರಿಗೆ ಸಂಪೂರ್ಣ ಮನರಂಜನೆಯ ಪ್ಯಾಕೇಜ್ ನೀಡಬಹುದು.

ದಕ್ಷಿಣ ಕನ್ನಡ ಕಡಲು ಮತ್ತು ಪಶ್ಚಿಮ ಘಟ್ಟ ಪ್ರದೇಶವನ್ನು ಹೊಂದಿರೋದರಿಂದ ಚಾರಣ ಪ್ರಿಯರು ಕುದುರೆಮುಖ, ಕುಮಾರಪರ್ವತ, ಗಡಾಯಿಕಲ್ಲು ಸೇರಿದಂತೆ ಪೃಕೃತಿ ರಮಣೀಯ ಪ್ರದೇಶಗಳಿಗೆ ಚಾರಣ ಮಾಡಲು ಯೋಜನೆ ರೂಪಿಸಿದ್ದಾರೆ.

ಮಂಗಳೂರಿನ ಬೆಸ್ಟ್‌ ಹೋಟೆಲ್‌ಗಳು

ಇನ್ನು ಮಂಗಳೂರಿಗೆ ಬರುವ ಪ್ರವಾಸಿಗರು ಒಳ್ಳೆಯ ಊಟದ ಹೋಟೆಲ್‌ಗಳನ್ನು ಹೆಚ್ಚಾಗಿ ಗೂಗಲ್‌ನಲ್ಲಿ ಸರ್ಚ್ ಮಾಡುತ್ತಾರೆ. ಮಂಗಳೂರು ನಗರದಲ್ಲಿ ಮೀನು ಪ್ರಿಯರಿಗೆ ಬಂದರು ಪ್ರದೇಶದಲ್ಲಿರುವ ಹೊಟೇಲ್ ನಾರಾಯಣ, ನವಭಾರತ್ ಸರ್ಕಲ್ ಬಳಿಯಿರುವ ಮಚ್ಲಿ, ಹಂಪನಕಟ್ಟೆಯಲ್ಲಿರುವ ಅಕ್ಕಮಕ್ಕನ ಹೋಟೆಲ್, ಪಡೀಲ್ ಬಳಿ ಇರುವ ಹೊಟೇಲ್ ಉನ್ಕ-ತಿನ್ಕ, ಬಲ್ಮಠದಲ್ಲಿರುವ ಕೇಸರಿ ಮಿಲಿಟರಿ ಹೋಟೆಲ್ ಸೇರಿದಂತೆ ಹಲವು ಹೊಟೇಲ್‌ಗಳು ಉತ್ತಮ ಆಯ್ಕೆಯಾಗಿದೆ. ಐಸ್ ಕ್ರೀಂ ಪ್ರೀಯರು ವಿಶ್ವವಿಖ್ಯಾತ ಪಬ್ಬಾಸ್ ಐಸ್ ಕ್ರೀಂಗೆ ಭೇಟಿ ನೀಡಬಹುದಾಗಿದೆ. ಎಳನೀರಿನ ಐಸ್ ಕ್ರೀಂಗಾಗಿ ಮಂಗಳೂರು ನಗರದ ಅಡ್ಯಾರ್ ಕಟ್ಟೆ ಬಳಿಯಿರುವ ಬೊಂಡಾ ಫ್ಯಾಕ್ಟರಿಗೆ ಭೇಟಿ ನೀಡಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+