ಉಚಿತ ಬಸ್ ಬಳಸಿ ಹುಬ್ಬಳ್ಳಿ-ಪುತ್ತೂರು ಪ್ರಯಾಣ: ಪ್ರಿಯಕರನೊಂದಿಗೆ ವಿವಾಹಿತ ಮಹಿಳೆ ಎಸ್ಕೇಪ್
ಮಂಗಳೂರು, ಜೂನ್ 14: ಸರ್ಕಾರದ ಶಕ್ತಿ ಯೋಜನೆಯನ್ನು ಬಳಸಿ ಹುಬ್ಬಳ್ಳಿಯಿಂದ ಪುತ್ತೂರಿಗೆ ಉಚಿತ ಬಸ್ ಮೂಲಕ ಮೂಲಕ ಬಂದ ವಿವಾಹಿತ ಮಹಿಳೆ ಪ್ರಿಯಕರನ ಜೊತೆ ಪರಾರಿಯಾದ ಘಟನೆ ನಡೆದಿದೆ.
ಹನ್ನೊಂದು ತಿಂಗಳ ಮಗು ಹೊಂದಿರುವ ಹುಬ್ಬಳ್ಳಿ ಮೂಲದ ಮಹಿಳೆ ತನ್ನ ಗಂಡನಿಗೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡುತ್ತೇನೆಂದು ಮನೆಯಿಂದ ಹೊರಟಿದ್ದಾಳೆ. ಬಳಿಕ ಆಧಾರ್ ಕಾರ್ಡ್ ಬಳಸಿ ಉಚಿತ ಬಸ್ ಮೂಲಕ ಹುಬ್ಬಳ್ಳಿಯಿಂದ ಪುತ್ತೂರಿಗೆ ಆಗಮಿಸಿದ್ದಾಳೆ ಎನ್ನಲಾಗಿದೆ.

ಪುತ್ತೂರಿನ ಕೋಡಿಂಬಾಡಿ ಸಮೀಪದಲ್ಲಿ ತೋಟದ ಕೆಲಸ ಮಾಡುತ್ತಿದ್ದ ಪ್ರಿಯಕರನನ್ನು ನೋಡಲು ಮಹಿಳೆ ಪುತ್ತೂರಿಗೆ ಆಗಮಿಸಿದ್ದಾಳೆ. ಮಹಿಳೆ ಮದುವೆಗೆ ಮುನ್ನ ಯುವಕನ ಜೊತೆ ಪ್ರೀತಿಗೆ ಬೀಳಿದ್ದಳು. ಮದುವೆ ಆದ ಬಳಿಕವೂ ತನ್ನ ಪ್ರಿಯಕರನ ಜೊತೆ ಒಡನಾಟದಲ್ಲಿದ್ದಳು. ಈ ಸಲುಗೆಯಿಂದ ಹಣ ಇಲ್ಲದಿದ್ದರೂ ಉಚಿತ ಬಳಸಿ ಪ್ರಿಯಕರನನ್ನು ಹುಡುಕಿ ಬಂದಿದ್ದಾಳೆ ಎನ್ನಲಾಗಿದೆ.
ಮಹಿಳೆ ಪುತ್ತೂರಿಗೆ ಬಂದಿರೋದು ತಿಳಿದು ಹುಬ್ಬಳ್ಳಿಯಿಂದ ಪುತ್ತೂರಿಗೆ ಗಂಡನ ಮನೆಯವರು ಹಾಗೂ ಮಹಿಳೆಯ ಮನೆಯವರು ಆಗಮಿಸಿ, ರಾತ್ರೋ ರಾತ್ರಿ ಪುತ್ತೂರಿನಲ್ಲಿ ಹುಡುಕಾಟ ನಡೆಸಿದ್ದಾರೆ.
ಕಂಗಾಲಾದ ಕುಟುಂಬಸ್ಥರಿಗೆ ಗ್ರಾಮ ಪಂಚಾಯತ್ ಸದಸ್ಯ ಜಯ ಪ್ರಕಾಶ್ ಬದಿನಾರ್ ಇಬ್ಬರನ್ನು ಹುಡುಕಿಕೊಡುವುದಾಗಿ ಭರವಸೆ ನೀಡಿದ್ದಾರೆ. ಪುತ್ತೂರಿಗೆ ಬಂದು ಪ್ರಿಯಕರನ ಜೊತೆ ಪರಾರಿಯಾದ ಮಹಿಳೆ ಬಗ್ಗೆ ಮಾಹಿತಿ ಸಂಗ್ರಹಿಸಿದ ಜಯಪ್ರಕಾಶ್, ಪೊಲೀಸರಿಗೆ ದೂರು ನೀಡಿ ಟವರ್ ಲೊಕೇಶನ್ ಮೂಲಕ ಪತ್ತೆ ಹಚ್ಚಿದಾಗ ಇಬ್ಬರೂ ಪುತ್ತೂರಿನಿಂದ ಸಿದ್ಧಕಟ್ಟೆಗೆ ಪರಾರಿಯಾದ ಮಾಹಿತಿ ಲಭ್ಯವಾಗಿದೆ.
ಕುಂದಗೋಳ: ಸಾರಿಗೆ ಬಸ್ ಪುಲ್ ರಶ್! ಮರಳಿ ಮನೆಯತ್ತ ನಡೆದ ವಿದ್ಯಾರ್ಥಿಗಳು
ಕುಂದಗೋಳ : ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ, ವಿನಹ ಈ ಶಾಲೆ ಕಾಲೇಜು ವಿದ್ಯಾರ್ಥಿಗಳ ಓಡಾಟಕ್ಕೆ ಹೆಚ್ಚಿನ ಬಸ್ ಸೌಲಭ್ಯ ಒದಗಿಸಿಲ್ಲ. ಈ ಕಾರಣ ಶಾಲೆ ಕಾಲೇಜಿಗೆ ಹೋಗಬೇಕಾದ ಹಳ್ಳಿ ವಿದ್ಯಾರ್ಥಿಗಳು ಸಾರಿಗೆ ಬಸ್ ಪ್ರಯಾಣಿಕರಿಂದ ತುಂಬಿದೆ ಎಂದು ಶಿಕ್ಷಣ ಬಿಟ್ಟು ಮರಳಿ ಮನೆ ಕಡೆ ಹೆಜ್ಜೆ ಹಾಕಿರುವ ಪ್ರಸಂಗ ಬೆನಕನಹಳ್ಳಿಯಲ್ಲಿ ನಡೆದಿದೆ.

ಕುಂದಗೋಳ ತಾಲೂಕಿನ ಯರಗುಪ್ಪಿ, ಚಿಕ್ಕನರ್ತಿ ಹಿರೇನೆರ್ತಿ ಬೆನಕನಹಳ್ಳಿ ಮಾರ್ಗವಾಗಿ ಹೊರಡುವ ಸಾರಿಗೆ ಬಸ್ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಾಮಾಣಿಕರನ್ನು ತುಂಬಿಕೊಂಡಿದ್ದು, ಕಾಲೇಜು ವಿದ್ಯಾರ್ಥಿಗಳು ಬಸ್ ಬಾಗಿಲು ಪುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸುವ ದುಸ್ಥಿತಿ ಉಂಟಾಗಿದೆ. ಜೊತೆಗೆ ಕಾಲೇಜು ವಿದ್ಯಾರ್ಥಿಗಳು ಬಸ್ ಸಿಗದೆ ಮನೆಗೆ ಮರಳಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದು ಮಹಿಳೆಯರಿಗೆ ಸಾರಿಗೆ ಬಸ್ ಉಚಿತ ಮಾಡಿರುವುದು ಸ್ವಾಗತಾರ್ಹ, ಆದರೆ ಅದೇ ಬಸ್ ಸಂಪೂರ್ಣ ತುಂಬಿದೆ ಎಂದು ವಿದ್ಯೆ ಕಲಿಯಬೇಕಾದ ಮಕ್ಕಳು ಶೈಕ್ಷಣಿಕ ಪ್ರಗತಿಯಿಂದ ವಂಚಿತರಾಗೋದು ಎಷ್ಟು ಸರಿ? ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಗಮನಿಸಿ ಸೂಕ್ತ ಬಸ್ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.












Click it and Unblock the Notifications