ಮಂಗಳೂರು: ಕಾರ್ಮಿಕರಿಬ್ಬರ ಬಲಿ ಪಡೆದ ಒಡೆದ ನೀರಿನ ಪೈಪ್
ಮಂಗಳೂರು, ನವೆಂಬರ್. 02: ಒಳಚರಂಡಿ ಕಾಮಗಾರಿ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಒಡೆದ ನೀರಿನ ಪೈಪ್ ಇಬ್ಬರ ಪ್ರಾಣ ಬಲಿ ಪಡೆದಿದೆ. ಮಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದ ಬಳಿ ಘೋರ ಅವಘಡ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಮೃತರನ್ನು ಬಾದಾಮಿ ಮೂಲದ ರಘು ಹಾಗು ಬಾಬು ಎಂದು ಗುರುತಿಸಲಾಗಿದೆ. ಮಹಾನಗರ ಪಾಲಿಕೆ ಕಾರ್ಮಿಕರಾದ ರಘು ಮತ್ತು ಬಾಬು ಪಾಂಡೇಶ್ವರ-ವೆನ್ಲಾಕ್ ಆಸ್ಪತ್ರೆಯ ಒಳಚರಂಡಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ನೀರಿನ ಪೈಪ್ ಒಡೆದು ಮಣ್ಣು ಕುಸಿದಿದೆ. ಪರಿಣಾಮ ಮಧ್ಯದಲ್ಲಿ ಸಿಲುಕಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.[ಮಂಗಳೂರು ಜೈಲಿನಲ್ಲಿ ಹತ್ಯೆಯಾದವರು ಯಾರು?]

ಅಲ್ಲಿಯೇ ಕೆಲಸ ಮಾಡುತ್ತಿದ್ದ ಆರು ಜನ ಅಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮತ್ತು ಅವರನ್ನು ರಕ್ಷಿಸಲು ಪ್ರಯತ್ನಿಸಿದಾದರೂ ಅದಾಗಲೇ ಸಮಯ ಮೀರಿಹೋಗಿತ್ತು.[ಆಂಜನೇಯ ಮನೆ ಮುಂದಿನ ಮ್ಯಾನ್ ಹೋಲ್ ಗೆ ಇಬ್ಬರು ಬಲಿ]
ಪಾಲಿಕೆ ಅಧಿಕಾರಿಗಳು ಇನ್ನು ಮುಂದೆ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಂಥ ವಿಚಾರಗಳಲ್ಲಿ ಆಕಸ್ಮಿಕವಾಗಿ ಅವಘಡ ಸಂಭವಿಸಿ ಹೋಗುತ್ತದೆ ಎಂದು ಮೇಯರ್ ಜಸಿಂತಾ ಸಾಂತ್ವನ ಹೇಳಿದರು. ಶಾಸಕ ಜೆ.ಆರ್.ಲೋಬೊ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಜತೆಯಲ್ಲಿದ್ದರು.













Click it and Unblock the Notifications