ಮಂಗಳೂರಲ್ಲಿ ಅಂದರ್ - ಬಾಹರ್ ಅಡ್ಡೆಗೆ ಸಿಸಿಬಿ ದಾಳಿ, 12 ಜನರ ಬಂಧನ
ಮಂಗಳೂರು, ಅಕ್ಟೋಬರ್ 16: ಜೂಜಾಟ ಅಡ್ಡೆ ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು 12 ಜನರನ್ನು ಬಂಧಿಸಿದ ಘಟನೆ ಮಂಗಳೂರಿನಲ್ಲಿ ಕಳೆದ ರಾತ್ರಿ ನಡೆದಿದೆ.
ನಗರ ಹೊರವಲಯದ ಕೊಣಾಜೆಯ ಮುಚ್ಚಿಲಕೋಡಿ ಎಂಬಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್ - ಬಾಹರ್ ಇಸ್ಪೀಟ್ ಆಟವಾಡುತ್ತಿದ್ದ 12 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮುಚ್ಚಿಲಕೋಡಿ ಎಂಬಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಜೂಜಾಡುತ್ತಿದ್ದ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗಣೇಶ್ (38), ತಿಲಕ್ (28), ಪ್ರಸಾದ್ (38), ಜಯರಾಜ್ (27), ಜಯರಾಜ್ (26), ಲೋಕೇಶ್ (32), ಕೇಶವ (27), ಚಂದ್ರಹಾಸ ದಾಸ್ (26), ನವೀನ್ ಕುಮಾರ್ (26), ರೋಹಿತ್ (27), ರಂಜಿತ್ (29),
ಶರತ್ ರಾಜ್ (25) ಎಂದು ಗುರುತಿಸಲಾಗಿದೆ.
ಬಂಧಿತರಿಂದ 22,485 ನಗದು ಹಾಗು ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications