ಮಂಗಳೂರು: ಕೈದಿಗಳಿಂದ ಪೊಲೀಸ್ ಮೇಲೆ ಹಲ್ಲೆಗೆ ಯತ್ನ

ಮಂಗಳೂರು, ಅಕ್ಟೋಬರ್, 07 : ಕೈದಿಗಳು ಡಿಎಆರ್ ಪೊಲೀಸ್ ಮೇಲೆ ಹಲ್ಲೆಗೆ ಯತ್ನಸಿದ ಘಟನೆ ಗುರುವಾರ ಮಂಗಳೂರು ಜೈಲ್ ನಲ್ಲಿ ನಡೆದಿದೆ.

ಪ್ರಕರಣವೊಂದರಲ್ಲಿ ಬಂಧಿತರಾಗಿರುವ ಕೈದಿಗಳ ವಿಚಾರಣೆಯನ್ನು ಕೋರ್ಟ್‌ನಲ್ಲಿ ಮುಗಿಸಿಕೊಂಡು ಮರಳಿ ಜೈಲಿಗೆ ಕರೆತರುತ್ತಿದ್ದ ವೇಳೆ ಸಶಸ್ತ್ರ ಮೀಸಲು (ಡಿಎಆರ್) ಪೊಲೀಸ್ ಮೇಲೆ ಕೈದಿಗಳು ಹಲ್ಲೆಗೆ ಯತ್ನಸಿದ್ದಾರೆ. [ಮಂಗಳೂರು ಜೈಲಿನಲ್ಲಿ ಅಕ್ರಮಗಳಿಗೆ ಇಲ್ಲ ಕಡಿವಾಣ]

Magaluru Jail

ಘಟನೆ: ಜಿಲ್ಲಾ ಕೋರ್ಟ್‌ನಲ್ಲಿ ಗುರುವಾರ ಮಧ್ಯಾಹ್ನ ಕೈದಿಗಳ ವಿಚಾರಣೆ ನಡೆಸಿದ ನಂತರ ಮರಳಿ ಜೈಲಿಗೆ ಕರೆದುಕೊಂಡು ಬರಲಾಗಿತ್ತು. ಈ ಸಂದರ್ಭ ಜೈಲ್ ಗೇಟ್‌ನ ಬಳಿ ಇಬ್ಬರು ಕೈದಿಗಳ ಮಧ್ಯೆ ವಾದ - ವಿವಾದ ನಡೆಸಿದ್ದಾರೆ. [ಜೈಲಲ್ಲೇ ಮೊಬೈಲ್ ಬಳಸಿದ ಆರೋಪಿಗಳ ಮರುಬಂಧನ]

ಇದನ್ನು ತಡೆಯಲು ಹೋದ ಡಿಎಆರ್ ಸಿಬ್ಬಂದಿ ಮೇಲೆ ಏಕಾಏಕಿ 30ಕ್ಕೂ ಅಧಿಕ ಕೈದಿಗಳು ಒಟ್ಟಾಗಿ ಸೇರಿ ಹಲ್ಲೆಗೆ ಯತ್ನಿಸಿದ್ದಾರೆ. ಬಳಿಕ ಸ್ವಲ್ಪ ಹೊತ್ತಿನ ನಂತರ ಪರಿಸ್ಥಿತಿ ತಿಳಿಗೊಂಡಿದೆ.

ಈ ​ಘಟನೆ ಬಗ್ಗೆ ವರದಿಯನ್ನು ಪಡೆದಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ತನಿಖೆ ಆರಂಭಿಸಿದ್ದಾರೆ. ​

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+