Mangaluru Blast: ಸಂತ್ರಸ್ತನಿಗೆ ಆಟೋರಿಕ್ಷಾ, 5 ಲಕ್ಷ ರೂ. ಚೆಕ್ ಹಸ್ತಾಂತರ: ಈ ಬಗ್ಗೆ ಕಟೀಲ್ ಹೇಳಿದ್ದೇನು?
ಕುಕ್ಕರ್ ಬಾಂಬ್ ಸ್ಫೋಟ ಸಂತ್ರಸ್ತ ಆಟೊರಿಕ್ಷಾಚಾಲಕ ಪುರುಷೋತ್ತಮ ಪೂಜಾರಿಯವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆಟೊರಿಕ್ಷಾ ಹಾಗೂ 5ಲಕ್ಷ ರೂಪಾಯಿ ಹಸ್ತಾಂತರಿಸಿದ್ದಾರೆ.
ಮಂಗಳೂರು, ಮಾರ್ಚ್, 06: ಈ ಹಿಂದೆ ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿತ್ತು. ಹಾಗೆಯೇ ಈ ಸಂಬಂಧ ಪೊಲೀಸರು ಆರೋಪಿಯನ್ನು ಸಹ ಬಂಧಿಸಿದ್ದರು. ಘಟನೆಯಲ್ಲಿ ಆಟೋ ಚಾಲಕನು ಕೂಡ ಗಾಯಗೊಂಡಿದ್ದ. ಈ ಸ್ಫೋಟ ಸುದ್ದಿ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿತ್ತು. ಆದರೆ ಇದೀಗ ಕುಕ್ಕರ್ ಬಾಂಬ್ ಸ್ಫೋಟ ಸಂತ್ರಸ್ತ ಆಟೊರಿಕ್ಷಾಚಾಲಕ ಪುರುಷೋತ್ತಮ ಪೂಜಾರಿಯವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆಟೊರಿಕ್ಷಾ ಹಾಗೂ 5ಲಕ್ಷ ರೂಪಾಯಿ ಹಸ್ತಾಂತರಿಸಿದ್ದಾರೆ.
ರುಷೋತ್ತಮ ಪೂಜಾರಿಯವರಿಗೆ ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ವೈಯುಕ್ತಿಕ ನೆಲೆಯಲ್ಲಿ ಆಟೊರಿಕ್ಷಾವನ್ನು ಒದಗಿಸಿದರೆ, ಬಿಜೆಪಿಯಿಂದ 5ಲಕ್ಷ ರೂ. ಚೆಕ್ ಅನ್ನು ನೀಡಲಾಗಿದೆ. ಎಕ್ಕೂರು ಬಳಿಯಿರುವ ಪುರುಷೋತ್ತಮ ಪೂಜಾರಿಯವರ ಮನೆಯಲ್ಲಿಯೇ ರಿಕ್ಷಾ ಹಾಗೂ ಚೆಕ್ ಹಸ್ತಾಂತರ ಕಾರ್ಯವನ್ನು ನೆರವೇರಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡದ್ದ ಪುರುಷೋತ್ತಮ
ಬಳಿಕ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಭಯೋತ್ಪಾದಕ ಶಾರೀಕ್ ಮಂಗಳೂರಿನಲ್ಲಿ ಸ್ಫೋಟ ಮಾಡುವ ಉದ್ದೇಶದಿಂದ ಕುಕ್ಕರ್ ಬಾಂಬ್ ಅನ್ನು ತಂದಿದ್ದ. ಆದು ಆಟೋದಲ್ಲಿ ಸ್ಪೋಟಗೊಂಡಿದೆ. ಪರಿಣಾಮ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಯವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಶಾಸಕ ವೇದವ್ಯಾಸ ಕಾಮತ್ ಅವರು ಹೊಸದಾಗಿ ಆಟೊರಿಕ್ಷಾವನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು.
5ಲಕ್ಷ ರೂಪಾಯಿ ಚೆಕ್ ವಿತರಣೆ
ಹಾಗೆಯೇ ಅವರು ಪುರುಷೋತ್ತಮ ಅವರಿಗೆ ಆಟೋ ರಿಕ್ಷಾವನ್ನು ಹಸ್ತಾಂತರಿಸಿ ನುಡಿದಂತೆ ನಡೆದ ಶಾಸಕರೆನಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಬಿಜೆಪಿಯಿಂದ 5ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಲಾಗಿದೆ. ಈಗಾಗಲೇ ಸರ್ಕಾರ ಇಡೀ ಪ್ರಕರಣವನ್ನು ಎನ್ಐಎಗೆ ಒಪ್ಪಿಸಿದೆ. ಎನ್ಐಎ ಈ ಘಟನೆಯ ಹಿಂದಿರುವ ಷಡ್ಯಂತ್ರವನ್ನು ಭೇದಿಸಿ ಸಂಪೂರ್ಣ ತನಿಖೆಯನ್ನು ಮಾಡುತ್ತಿದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ
ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾರ್ಚ್ 9ರಂದು ರಾಜ್ಯ ಬಂದ್ ಕರೆಗೆ ತಿರುಗೇಟು ನೀಡಿದ ನಳಿನ್ ಕುಮಾರ್ ಕಟೀಲ್, ಮೊದಲು ಕಾಂಗ್ರೆಸ್ ಪಕ್ಷದ ಕಚೇರಿಗೆ ಬೀಗ ಹಾಕಲಿ. ಅವರ ಮೇಡಂ, ರಾಹುಲ್ ಗಾಂಧಿಯವರು ಯಾವ ವಿಚಾರಕ್ಕೆ ಜಾಮೀನು ತೆಗೆದುಕೊಂಡಿದ್ದಾರೆ? ಇವರು ಯಾಕೆ ತಿಹಾರ್ ಜೈಲಿಗೆ ಹೋದರು? ಪ್ರಾರಂಭದಲ್ಲಿ ಇದರ ವಿರುದ್ಧ ಕಾಂಗ್ರೆಸ್ ಕಚೇರಿಯಿಂದಲೇ ಹೋರಾಟ ನಡೆಯಬೇಕು. ಆಮೇಲೆ ಇವರು ರಸ್ತೆಗೆ ಇಳಿಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಬೇಕೆಂಬ ಪ್ರಯತ್ನ ಬಹಳ ವರ್ಷಗಳಿಂದ ನಡೆಯುತ್ತಿದೆ. ಮೋದಿಯವರು ಪ್ರಧಾನಿಯಾದ ಬಳಿಕ ಈ ಷಡ್ಯಂತ್ರರವನ್ನು ನಿಲ್ಲಿಸುವ ಎಲ್ಲಾ ಕೆಲಸ ಕಾರ್ಯಗಳು ಆಗಿದೆ. ಇಂದು ಭಯೋತ್ಪಾದನಾ ಚಟುವಟಿಕೆಗಳು ಕಡಿಮೆಯಾಗಿದ್ದರೂ, ಅಲ್ಲಿ ಇಲ್ಲಿ ಕೆಲವೊಂದು ಕಡೆಗಳಲ್ಲಿ ಇಂತಹ ಕಾರ್ಯಗಳು ನಡೆಯುತ್ತಿದೆ. ಅದಕ್ಕಾಗಿ ಪಿಎಫ್ಐ ಅನ್ನು ನಿಷೇಧಿಸುವಂತಹ ಕೆಲಸಗಳಾಗಿವೆ ಎಂದರು.
ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ
ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ವಿಚಾರದಲ್ಲಿ ನಡೆಸಲಾಗಿದೆ ಎಂದು ಸಂಸ್ಥೆ ಒಪ್ಪಿದೆ. ಇದೆಲ್ಲವನ್ನೂ ಸರ್ಕಾರ ಗಮನಿಸುತ್ತಿದೆ. ಇದಕ್ಕೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತದೆ. ಆದರೆ ಇಂತಹ ಪ್ರಕರಣಗಳು ನಡೆದಾಗ ಕಾಂಗ್ರೆಸ್ ಅವರ ಪರ ನಿಲ್ಲುತ್ತದೆ. ಆದ್ದರಿಂದ ಕಾಂಗ್ರೆಸ್ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ನೀಡುವ ಪಕ್ಷವೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದು ಆರೋಪ ಮಾಡಿದರು.
ಕುಕ್ಕರ್ ಬಾಂಬ್ ಸ್ಫೋಟದ ಸಂದರ್ಭದಲ್ಲೂ ಕಾಂಗ್ರೆಸ್ ಸಂತ್ರಸ್ತ ಪುರುಷೋತ್ತಮ ಪೂಜಾರಿಯವರನ್ನು ಅಮಾಯಕ ಎನ್ನುವ ಬದಲು ಎನ್ಐಎ ಬಂಧಿಸಿರುವ ಭಯೋತ್ಪಾದಕನನ್ನೇ ಅಮಾಯಕನನ್ನಾಗಿ ಮಾಡಲು ಹೊರಟಿತ್ತು. ಇದಕ್ಕೆ ಅದೇ ಸಂಸ್ಥೆ ತಾವೇ ಮಾಡಿಸಿದ್ದು ಎಂಬ ಉತ್ತರ ಕೊಟ್ಟಿದೆ. ಇದಕ್ಕೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯನವರು ಏನು ಹೇಳುತ್ತಾರೆಯೋ ನೋಡೋಣ ಎಂದರು.
ಈ ಪ್ರಕರಣದಲ್ಲಿ ಉಡುಪಿಯ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೇ ಬಂಧಿಸಲ್ಪಟ್ಟಿದ್ದಾನೆ. ಇಂದಿನವರೆಗೆ ಕಾಂಗ್ರೆಸ್ ಆತನನ್ನು ಉಚ್ಛಾಟಿಸಿಲ್ಲ. ಆದ್ದರಿಂದ ಭಯೋತ್ಪಾದಕರು ಕಾಂಗ್ರೆಸ್‌ನಲ್ಲಿರುವುದು ಸ್ಪಷ್ಟವಾಯಿತು. ಕಾಂಗ್ರೆಸ್‌ನ ಕಳೆದ 75 ವರ್ಷಗಳಲ್ಲಿ ತುಷ್ಟೀಕರಣದ ನೀತಿಯಿಂದ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹಳ್ಳಿ-ಹಳ್ಳಿಗೂ ಹಬ್ಬುವಂತಾಗಿದೆ. ಇಂದು ಇದನ್ನು ನಿಯಂತ್ರಣ ಮಾಡುವ ಕಾರ್ಯವನ್ನು ನಮ್ಮ ಸರಕಾರ ಮಾಡುತ್ತಿದೆ ಎಂದರು.












Click it and Unblock the Notifications