ಮಂಗಳೂರುː ಬೆಳಕಿನ ಹಬ್ಬಕ್ಕೆ ಆಕಾಶಬುಟ್ಟಿ ರಂಗು
ಮಂಗಳೂರು, ಅ. 23 : ದೀಪಾವಳಿ ಸಂಭ್ರಮಕ್ಕೆ ನಿಜವಾದ ಅರ್ಥ ಕಲ್ಪಿಸುವುದು ಆಕಾಶಬುಟ್ಟಿಗಳು. ಅವುಗಳಿಗೆ ಮೆರುಗು ನೀಡುವ ಬಣ್ಣದ ದೀಪಗಳು. ಹೌದು ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಆವರಣ ದೀಪಾವಳಿ ಹಿನ್ನೆಲೆಯಲ್ಲಿ ಬಣ್ಣದ ಬೆಳಕಿನಿಂದ ಕಂಗೊಳಿಸುತ್ತಿತ್ತು. ನೂರಾರು 'ಗೂಡು ದೀಪಗಳು' ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸಿದ್ದವು.
'ನಮ್ಮ ಕುಡ್ಲ' ಸಂಸ್ಥೆಯ ಆಶ್ರಯದಲ್ಲಿ ಅಕ್ಟೋಬರ್ 21ರಂದು ಹಮ್ಮಿಕೊಂಡಿದ್ದ 'ಗೂಡುದೀಪ' ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಮೇಯರ್ ಮಹಾಬಲ ಮಾರ್ಲಾ, ದೀಪಾವಳಿ ಹಬ್ಬ ಜನರ ಬಾಳಲ್ಲಿ ಮತ್ತಷ್ಟು ಬೆಳಕು ತರಲಿ. ಈ ಬಗೆಯ 'ಗೂಡುದೀಪ' ಪ್ರದರ್ಶನ ಆಯೋಜಿಸಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ಹೇಳಿದರು.[3ನೇ ಭಾಷೆಯಾಗಿ ತುಳು: ವಿದ್ಯಾರ್ಥಿಗಳ ಮೊದಲ ಪ್ರಯತ್ನ]
ಉದಯವಾಣಿ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಕೆ. ಆನಂದ್ ಮಾತನಾಡಿ, ಹಬ್ಬದ ವಾತಾವರಣ ಎಲ್ಲೆಡೆ ಕಳೆಕಟ್ಟಲು ಆಕಾಶಬುಟ್ಟಿಗಳು ಕಾರಣವಾಗಿವೆ. ದೀಪಾವಳಿ ಎಲ್ಲರ ಬಾಳಲ್ಲಿ ಹೊಸ ಚೈತನ್ಯ ತುಂಬಲಿ ಎಂದು ಆಶಿಸಿದರು.
ಕುದ್ರೋಳಿ ದೇವಾಲಯದ ಎಚ್.ಎಷ್.ಶ್ರೀರಾಮ್, ದಾಮೋದರ್ ನಿಸರ್ಗ, ಎ.ಸಿ.ಭಂಡಾರಿ, ರಾಘವೇಂದ್ರ ಕುಲ್ಲೂರು. ಬಿ.ಜಿ.ಸುವರ್ಣ, ಭಾಸ್ಕರ್ ರೈ ಕುಕ್ಕವಳ್ಳಿ, ಕದ್ರಿ ನವನೀತ್ ಶೆಟ್ಟಿ, 'ನಮ್ಮ ಕುಡ್ಲ' ಸಂಸ್ಥೆ ಅಧ್ಯಕ್ಷ ಬಿ.ಪಿ.ಕರ್ಕೆರಾ, ಹರೀಶ್ ಕರ್ಕೆರಾ, ಲೀಲಾಕ್ಷಾ ಕರ್ಕೆರಾ, ಸುರೇಶ್ ಕರ್ಕೆರಾ, ಮೋಹನ್ ಕರ್ಕೆರಾ, ಸಂತೋಷ್ ಕರ್ಕೆರಾ ಮತ್ತಿತರರು ಹಾಜರಿದ್ದರು.[ತುಳು ಭಾಷೆಗೆ ರಾಷ್ಟ್ರೀಯ ಸ್ಥಾನಮಾನದ ಗುರಿ]
ಮನ ಸೆಳೆದ ಆಕಾಶಬುಟ್ಟಿಗಳು
ವಿವಿಧ ಬಗೆಯ 'ಗೂಡುದೀಪ'ಗಳು ಜನ ಮನ ಸೂರೆಗೊಂಡವು. 18,400 ಬಟನ್ ಗಳನ್ನು ಬಳಸಿ ವಿಘ್ನೇಶ್ ಎಂಬುವರು ತಯಾರಿಸಿದ್ದ ಆಕಾಶ ಬುಟ್ಟಿ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಎಂಎಸ್ಸಿ ವಿದ್ಯಾರ್ಥಿನಿ ಯೋಗಿತಾ ಬೀಡಿಗಳನ್ನು ಬಳಸಿ ಆಕಾಶಬುಟ್ಟಿ ತಯಾರಿಸಿದ್ದರು. ಸಂತ ಅಲೋಸ್ ಕಾಲೇಜಿನ ಅತುಲ್ ಮತ್ತು ಅನೇನ್ 'ಮೆಂಟೋಸ್ ಮಿಂಟ್' ಬಳಸಿ ತಯಾರಿಸಿದ್ದ ಆಕಾಶಬುಟ್ಟಿ ಮೆಚ್ಚುಗೆಗೆ ಪಾತ್ರವಾಯಿತು.
ಸಾಂಪ್ರದಾಯಿಕ, ಆಧುನಿಕ ಮತ್ತು ವಿಶೇಷ ಎಂಬ ಮೂರು ವಿಭಾಗದಲ್ಲಿ ಗೂಡುದೀಪಗಳ ಸ್ಪರ್ಧೆ ನಡೆಯಿತು. ಪ್ರಥಮ ಸ್ಥಾನ ಪಡೆದವರಿಗೆ ಪ್ರಶಸ್ತಿ ಪತ್ರದೊಂದಿಗೆ ಚಿನ್ನದ ಪದಕ ನೀಡಿ ಪುರಸ್ಕರಿಸಲಾಯಿತು.

ದೇವಾಲಯಕ್ಕೆ ಬೆಳಕಿನ ಅಲಂಕಾರ
ವಿದ್ಯಾರ್ಥಿಗಳ ಕೈಯಲ್ಲಿ ಅರಳಿದ ದೇವಾಲಯಕ್ಕೆ ಬೆಳಕಿನ ರಂಗು.

ನೆರಳು ಬೆಳಕಿನ ಚಿತ್ತಾರ
ಬೆಳಕಿನ ನೆರವಿನಲ್ಲಿ ಮತ್ತಷ್ಟು ಸುಂದರವಾಗಿ ಕಂಡ ಗೂಡುದೀಪ.

ವಜ್ರದ ಹರಳುಗಳಲ್ಲǃ
ವಜ್ರದ ಹರಳುಳಿಂದ ಮಾಡಿದಂತೆ ಕಂಡುಬಂದ ಆಕಾಶಬುಟ್ಟಿ.

ಪ್ರದರ್ಶನ ಸಂಭ್ರಮ
ಕುದ್ರೋಳ್ಳಿ ದೇವಾಲಯದಲ್ಲಿ ತಮ್ಮ ಪ್ರದರ್ಶಿಕೆಗಳೊಂದಿಗೆ ವಿದ್ಯಾರ್ಥಿಗಳ ಸಂಭ್ರಮ

ಕರಕುಶಲ ಕೆಲಸಕ್ಕೆ ಭೇಷ್ ಎನ್ನಲೇಬೇಕು
ವಿದ್ಯಾರ್ಥಿಗಳೇ ಸ್ವತಃ ತಯಾರಿಸಿದ ದೇವಸ್ಥಾನದ ಮಾದರಿ .












Click it and Unblock the Notifications