ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಸತ್ ಚುನಾವಣೆಗೆ ಕಾಂಗ್ರೆಸ್- ಜೆಡಿಎಸ್ ದೋಸ್ತಿ ಖಚಿತ ಪಡಿಸಿದ ಸಿದ್ದು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 20: ಮುಂಬರುವ ಸಂಸತ್ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಎರಡೂ ಪಕ್ಷಗಳು ತೀರ್ಮಾನಿಸಿದ್ದು, ಸೀಟು ಹಂಚಿಕೆ ವಿಚಾರ ತೀರ್ಮಾನ ಆಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಮೊಗಸಾಲೆಯಲ್ಲಿ ಜನ್ಮದಿನ ಆಚರಿಸಿಕೊಂಡ ಅಧಿಕಾರಿ ವರ್ತನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ಸಮರ್ಥಿಸಿಕೊಂಡರು. ಮಾಧ್ಯಮದಲ್ಲಿ ಬರುವ ಎಲ್ಲ ಸುದ್ದಿಯನ್ನು ನಂಬುವುದಕ್ಕೆ ಆಗಲ್ಲ. ನನಗೆ ಆ ಘಟನೆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.

ಎಚ್ಡಿಕೆಗೆ ಮೈತ್ರಿ ಧರ್ಮ ಕಲಿಸುತ್ತೇನೆ ಎಂದು ಗುಡುಗಿದ ಸಿದ್ದರಾಮಯ್ಯಎಚ್ಡಿಕೆಗೆ ಮೈತ್ರಿ ಧರ್ಮ ಕಲಿಸುತ್ತೇನೆ ಎಂದು ಗುಡುಗಿದ ಸಿದ್ದರಾಮಯ್ಯ

ಮುಂಬರುವ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕುರಿತು ಚರ್ಚಿಸಲಾಗಿದ್ದು, ಸೀಟು ಹಂಚಿಕೆ ಬಗ್ಗೆ ತೀರ್ಮಾನ ಆಗಬೇಕಿದೆ ಎಂದು ಅವರು ಹೇಳಿದರು.

Congress and JDS fight together in upcoming Lok sabha Election, said Siddaramaiah

ಏಕಕಾಲದಲ್ಲಿ ವಿಧಾನಸಭೆ ಹಾಗೂ ಲೋಕಸಭೆಗೆ ಚುನಾವಣೆ ನಡೆಸುವ ಕೇಂದ್ರ ಸರಕಾರದ ಆಲೋಚನೆ‌ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಅವೆಲ್ಲಾ ಆಗೋ ಹೋಗೋ ವಿಚಾರ ಅಲ್ಲ. ಸರಕಾರ ಬಿದ್ದು ಹೋದರೆ ಐದು ವರ್ಷ ಕಾಯುವುದಕ್ಕೆ ಆಗುತ್ತಾ? ಕಾಲ ಕಾಲಕ್ಕೆ ಚುನಾವಣೆ ಆಗಲೇಬೇಕು ಎಂದು ಹೇಳಿದರು.

English summary
Congress and JDS alliance for upcoming Lok Sabha election is confirmed. Seat distribution to be finalised soon, former chief Minister Siddaramaiah said in Mangaluru, while speaking to media on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X