ಮಂಗಳೂರಿನಲ್ಲಿ ಮತ್ತೊಬ್ಬ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ
ಮಂಗಳೂರು, ಜುಲೈ 9: ಮಂಗಳೂರಿನಲ್ಲಿ ಸಾವನ್ನಪ್ಪಿದ್ದ ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಅಂತ್ಯಕ್ರಿಯೆ ಬೆನ್ನಲ್ಲೇ ಮತ್ತೋರ್ವ ಯುವಕನ ಮೇಲೆ ತಲವಾರಿನಿಂದ ದಾಳಿ ಮಾಡಲಾಗಿದೆ.
ಕುತ್ತಾರಿನ ರಾಣಿಪುರದಲ್ಲಿ ಯುವಕನ ಮೇಲೆ ಶನಿವಾರ ರಾತ್ರಿ ತಲವಾರಿನಿಂದ ದಾಳಿ ಮಾಡಲಾಗಿದ್ದು, 24 ವರ್ಷದ ಚಿರಂಜೀವಿ ತಲೆಗೆ ಗಾಯವಾಗಿದೆ.

ಚಿರಂಜೀವಿ ಬೈಕಿನಲ್ಲಿ ಚಲಿಸುತ್ತಿದ್ದ ವೇಳೆ ಬೈಕಿನಲ್ಲೇ ಬಂದ ಮೂವರು ಅಪರಿಚಿತರು ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಚಿರಂಜೀವಿ ಅಂಬ್ಲಮೊಗರು ಕೋಟ್ರಗುತ್ತು ನಿವಾಸಿಯಾಗಿದ್ದು ಸದ್ಯ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಉಳ್ಳಾಲ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications